Modi Govt ವಿದ್ಯಾರ್ಥಿಗಳಿಗೆ Free Laptop & Smartphone ಗಳನ್ನು ವಿತರಿಸುತ್ತಿದೆಯಂತೆ ! ನಿಜಾನಾ?

 ಕರೋನಾ ಯುಗದಲ್ಲಿ, ಸೈಬರ್ ವಂಚನೆಯ ಪ್ರಕರಣಗಳು ಹೆಚ್ಚುತ್ತಿವೆ. ಸಾಂಕ್ರಾಮಿಕ ರೋಗದಿಂದಾಗಿ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದರೆ, ಮಕ್ಕಳ ಶಿಕ್ಷಣವೂ ಆನ್‌ಲೈನ್‌ನಲ್ಲಿ ನಡೆಯುತ್ತಿದೆ. 

Last Updated : Nov 30, 2020, 03:57 PM IST
  • ಕರೋನಾ ಯುಗದಲ್ಲಿ, ಸೈಬರ್ ವಂಚನೆಯ ಪ್ರಕರಣಗಳು ಹೆಚ್ಚುತ್ತಿವೆ.
  • ಸಂದೇಶದಲ್ಲಿ ಸರ್ಕಾರವು ಆನ್‌ಲೈನ್ ಅಧ್ಯಯನಕ್ಕಾಗಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನ್‌ಗಳನ್ನು ನೀಡುತ್ತಿದೆ ಎಂದು ಹೇಳಲಾಗುತ್ತಿದೆ.
  • ಈ ಸಂದೇಶ ಎಷ್ಟು ನಿಜಾಂಶದಿಂದ ಕೂಡಿದೆ ಎಂಬುದನ್ನು PIB ಹೇಳಿದೆ.
Modi Govt ವಿದ್ಯಾರ್ಥಿಗಳಿಗೆ Free Laptop & Smartphone ಗಳನ್ನು ವಿತರಿಸುತ್ತಿದೆಯಂತೆ ! ನಿಜಾನಾ? title=

ನವದೆಹಲಿ: ಕರೋನಾ ಯುಗದಲ್ಲಿ, ಸೈಬರ್ ವಂಚನೆಯ ಪ್ರಕರಣಗಳು ಹೆಚ್ಚುತ್ತಿವೆ. ಸಾಂಕ್ರಾಮಿಕ ರೋಗದಿಂದಾಗಿ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದರೆ, ಮಕ್ಕಳ ಶಿಕ್ಷಣವೂ ಆನ್‌ಲೈನ್‌ನಲ್ಲಿ ನಡೆಯುತ್ತಿದೆ. ಈ ಕಾರಣಕ್ಕಾಗಿ, ವಂಚಕರು ಸುಳ್ಳು ಮಾಹಿತಿ ನೀಡುವ ಮೂಲಕ ಜನರನ್ನು ಮರುಳು ಮಾಡುತ್ತಿದ್ದಾರೆ. ಇತ್ತೀಚಿಗೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಇದರಲ್ಲಿ ವಂಚಕನೊಬ್ಬ  ವಾಟ್ಸಾಪ್‌ನಲ್ಲಿ ಸಂದೇಶವೊಂದನ್ನು ವೈರಲ್ ಮಾಡಿ ಜನರನ್ನು ವಂಚಿಸುತ್ತಿದ್ದಾನೆ. ಈ ಸಂದೇಶದಲ್ಲಿ, ಸರ್ಕಾರವು ಆನ್‌ಲೈನ್ ಅಧ್ಯಯನಕ್ಕಾಗಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನ್‌ಗಳನ್ನು ನೀಡುತ್ತಿದೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ- ಸೆಪ್ಟೆಂಬರ್ 25ರಿಂದ ಮತ್ತೆ ಲಾಕ್‌ಡೌನ್? ವೈರಲ್ ಸುದ್ದಿಗಳ ಸತ್ಯಾಸತ್ಯತೆ...

ಈ ಸಂದೇಶದೊಂದಿಗೆ ಲಿಂಕ್ ಅನ್ನು ಸಹ ನೀಡಲಾಗಿದೆ. ಇದರಲ್ಲಿ ಈ ಸೌಲಭ್ಯವನ್ನು ಪಡೆಯಲು ಅರ್ಜಿದಾರರು ತಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಲು ಹೇಳಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಈ ಲಿಂಕ್‌ನಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ನೀವು ಭರ್ತಿ ಮಾಡಿದರೆ, ನೀವು ಸೈಬರ್ ವಂಚನೆಗೆ ಬಲಿಯಾಗಬಹುದು ಎಂದು PIB Fact Check  ತಂಡ ಹೇಳಿದೆ.

ಇದನ್ನು ಓದಿ- COVID-19: ಸರ್ಕಾರ ನಿಮ್ಮ ವಾಟ್ಸಾಪ್ ಸಂದೇಶಗಳನ್ನು ಸ್ಕ್ರೀನಿಂಗ್ ಮಾಡುತ್ತಿದೆಯೇ? ವದಂತಿ ಬಗ್ಗೆ PIB ಟ್ವೀಟ್

ವಾಟ್ಸಾಪ್ನಲ್ಲಿ ವೈರಲ್ ಆಗುತ್ತಿರುವ ಈ ಸಂದೇಶದಲ್ಲಿ, ಸೈಬರ್ ವಂಚಕರು ಸಂದೇಶವನ್ನು ಹಂಚಿಕೊಳ್ಳಲು ಜನರಿಗೆ ಮನವಿ ಮಾಡಿದ್ದಾರೆ. ಇದರಲ್ಲಿ ಸೈಬರ್ ಕಳ್ಳರ ಪರವಾಗಿ 'ಈ ಸಂದೇಶವನ್ನು ಸಾಧ್ಯವಾದಷ್ಟು ಹಂಚಿಕೊಳ್ಳಿ. ಇದರಿಂದ ಲ್ಯಾಪ್‌ಟಾಪ್ ಅಗತ್ಯವಿರುವ ಜನರು ಅದನ್ನು ಪಡೆಯಬಹುದು ಮತ್ತು ನಮ್ಮ ದೇಶದ ಸಾಕ್ಷರತೆಯ ಪ್ರಮಾಣವನ್ನು ಸುಧಾರಿಸಬಹುದು ' ಎಂದು ಹೇಳಲಾಗುತ್ತಿದೆ.

Trending News