ದೇಶಾದ್ಯಂತ ಇರುವ 7 ಕೋಟಿ ಚಿಲ್ಲರೆ ವ್ಯಾಪಾರಿಗಳಿಗೆ ಭಾರಿ ನೆಮ್ಮದಿಯ ಸುದ್ದಿ ನೀಡಿದ ಮೋದಿ ಸರ್ಕಾರ

ಕರೋನಾ ಪ್ರಕೋಪದ ಹಿನ್ನೆಲೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಚಿಲ್ಲರೆ ವ್ಯಾಪಾರಿಗಳಿಗೆ ಮೋದಿ ಸರ್ಕಾರ ಭಾರಿ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ.

Last Updated : May 26, 2020, 05:19 PM IST
ದೇಶಾದ್ಯಂತ ಇರುವ 7 ಕೋಟಿ ಚಿಲ್ಲರೆ ವ್ಯಾಪಾರಿಗಳಿಗೆ ಭಾರಿ ನೆಮ್ಮದಿಯ ಸುದ್ದಿ ನೀಡಿದ ಮೋದಿ ಸರ್ಕಾರ title=

ನವದೆಹಲಿ: ಮೇ 12ರಂದು ದೇಶದ ನಾಗರಿಕರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣದ ವೇಳೆ 20 ಲಕ್ಷ ಕೋಟಿ ರೂ.ಮೊತ್ತದ ಬೃಹತ್ ಪ್ಯಾಕೇಜ್ ಘೋಷಿಸಿದ್ದರು. ಅದರ ಮರುದಿನವೇ ಪತ್ರಿಕಾಗೋಷ್ಠಿ ಆರಂಭಿಸಿದ್ದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಈ ಬೃಹತ್ ಪ್ಯಾಕೇಜ್ ವಿತರಣೆಗೆ ಸಂಬಧಿಸಿದ ವವರಣೆಯನ್ನು ನೀಡಿದ್ದರು. ಪತ್ರಿಕಾಗೋಷ್ಠಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿವಿಧ ಕ್ಷೇತ್ರಗಳಿಗೆ ಪ್ಯಾಕೇಜ್‌ನ ವಿವರಗಳನ್ನು ನೀಡಿದ್ದರು. ಇದರಲ್ಲಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್‌ಎಂಇ) 3 ಲಕ್ಷ ಕೋಟಿ ರೂ.ಗಳ ಸಾಲ ನೀಡುವ ಯೋಜನೆಯನ್ನು ಹಣಕಾಸು ಸಚಿವರು ಘೋಷಿಸಿದ್ದರು. ಈಗ ದೇಶದ ಸುಮಾರು 7 ಕೋಟಿ ಚಿಲ್ಲರೆ ವ್ಯಾಪಾರಿಗಳಿಗೆ ಇದರ ಲಾಭ ಪಡೆಯಲು ಸಾಧ್ಯವಾಗಲಿದೆ.

ಹೌದು, ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಚಿಲ್ಲರೆ ವ್ಯಾಪಾರಿಗಳಿಗೆ ಮೋದಿ ಸರ್ಕಾರದ ಈ ಯೋಜನೆ ಇದೀಗ ವರದಾನವಾಗಿ ಸಾಬೀತಾಗಲಿದೆ. ಅಂದರೆ, ಇದೀಗ ದೇಶಾದ್ಯಂತ ಇರುವ ಚಿಲ್ಲರೆ ವ್ಯಾಪಾರಿಗಳೂ ಕೂಡ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗಾಗಿ ಪ್ರಕಟಗೊಂಡಿರುವ 3 ಲಕ್ಷ ಕೋಟಿ ರೂ. ಸರ್ಕಾರಿ ಯೋಜನೆಯ ಲಾಭ ಪಡೆಯಬಹುದಾಗಿದ್ದು, ಅವರೂ ಕೂಡ ಈ ಯೋಜನೆಗೆ ಅರ್ಹರು ಎಂದು ಸರ್ಕಾರ ಘೋಷಿಸಿದೆ. ಆದರೆ ಚಿಲ್ಲರೆ ವ್ಯಾಪಾರಿಗಳು ಎಂಎಸ್ಎಂಇ ಅಡಿಯಲ್ಲಿ ಬರುವದಿಲ್ಲ. ಆದರೂ ಕೂಡ ಅವರು ಈ ಯೋಜನೆಯ ಲಾಭ ಪಡೆಯಲು ಅರ್ಹರು ಎಂದು ಸರ್ಕಾರ ಹೇಳಿದ್ದು, ಚಿಲ್ಲರೆ ವ್ಯಾಪಾರಿಗಳ ಪಾಲಿಗೆ ಭಾರಿ ನೆಮ್ಮದಿಯನ್ನು ನೀಡಲಿದೆ.

ಮೋದಿ ಸರ್ಕಾರದ ಈ ನಿರ್ಧಾರದಿಂದ ದೇಶಾದ್ಯಂತ ಇರುವ ಸುಮಾರು 7 ಕೋಟಿ ಚಿಲ್ಲರೆ ವ್ಯಾಪಾರಿಗಳಿಗೆ ಲಾಭವಾಗುವ ನಿರೀಕ್ಷೆ ಇದೆ. ಎಮೆರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ ಅಡಿ MSMEಗಳಿಗೆ ನೀಡಲಾಗುವ 3 ಲಕ್ಷ ಕೋಟಿ. ರೂ. ಸಾಲದ ಗ್ಯಾರಂಟಿ ಅನ್ನು NCGTC ವತಿಯಿಂದ ನೀಡಲಾಗುತ್ತಿದೆ. ಮೇ 22ರಂದು ನಡೆದ ಕೇಂದ್ರ ಸಚಿವ ಸಂಪುಟದ ಸಭೆಯಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಗಿದೆ.

ಈ ನಿಟ್ಟಿನಲ್ಲಿ, ನ್ಯಾಷನಲ್ ಕ್ರೆಡಿಟ್ ಗ್ಯಾರಂಟಿ ಟ್ರಸ್ಟ್ ಕಂಪನಿ ಒಂದು ಮಾರ್ಗಸೂಚಿಯನ್ನು ಕೂಡ ಹೊರಡಿಸಿದೆ, ಇದು ಎಂಎಸ್ಎಂಇ, ಮಾಲೀಕತ್ವ ಅಥವಾ ಸಹಭಾಗಿತ್ವ, ನೋಂದಾಯಿತ ಕಂಪನಿಗಳು ಮತ್ತು ಪ್ರಧಾನ್ ಮಂತ್ರಿ ಮುದ್ರಾ ಅಡಿಯಲ್ಲಿ ಯಾವುದೇ ವ್ಯಕ್ತಿಯ ಅಡಿಯಲ್ಲಿ ರೂಪುಗೊಂಡ ವ್ಯಾಪಾರಿ ಉದ್ಯಮಗಳು, ಟ್ರಸ್ಟ್‌ಗಳು ಮತ್ತು ಸೀಮಿತ ಹೊಣೆಗಾರಿಕೆ ಸಹಭಾಗಿತ್ವವನ್ನು ಸ್ಪಷ್ಟಪಡಿಸುತ್ತದೆ. ಅವರು ಸಾಲ ತೆಗೆದುಕೊಳ್ಳಲು ಬಯಸಿದರೆ, ಅವರನ್ನು ಈ ಯೋಜನೆಗೆ ಅರ್ಹರು ಎಂದು ಪರಿಗಣಿಸಲಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

Trending News