ನವದೆಹಲಿ: ಆಮ್ ಆದ್ಮಿ ಪಕ್ಷದ ಹೊಸದಾಗಿ ಚುನಾಯಿತರಾದ ಶಾಸಕ ನರೇಶ್ ಯಾದವ್ (AAP MLA Naresh Yadav) ಅವರ ಬೆಂಗಾವಲು ಪಡೆ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಎಎಪಿ ಶಾಸಕ ನರೇಶ್ ಯಾದವ್ ನೈಋತ್ಯ ದೆಹಲಿಯ ಕಿಶನ್ಗಡ್ ಗ್ರಾಮದಿಂದ ದೇವಸ್ಥಾನದಿಂದ ಹಿಂದಿರುಗುತ್ತಿದ್ದಾಗ ಈ ದಾಳಿ ಮಾಡಲಾಗಿದೆ. ಈ ಸಮಯದಲ್ಲಿ, ಅವನ ಬೆಂಗಾವಲು ಪಡೆ ಮೇಲೆ ಗುಂಡುಗಳನ್ನು ಹಾರಿಸಲಾಯಿತು. ಘಟನೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ. ಈ ವ್ಯಕ್ತಿಯನ್ನು ಆಮ್ ಆದ್ಮಿ ಪಕ್ಷದ ಕಾರ್ಯಕರ್ತ ಎಂದು ಹೇಳಲಾಗುತ್ತಿದೆ.
ದೆಹಲಿ ವಿಧಾನಸಭೆಯ ಮೆಹ್ರೌಲಿ ವಿಧಾನಸಭಾ ಸ್ಥಾನದಿಂದ ನರೇಶ್ ಯಾದವ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರು ತಡರಾತ್ರಿ ದೇವಾಲಯದಿಂದ ಹಿಂತಿರುಗುತ್ತಿದ್ದರು, ಈ ಸಮಯದಲ್ಲಿ ಕೆಲವು ಅಪರಿಚಿತ ಜನರು ಅವನ ಮೇಲೆ ಗುಂಡು ಹಾರಿಸಿದರು. ಆತನ ಬೆಂಗಾವಲಿನ ಐದಕ್ಕೂ ಹೆಚ್ಚು ಗುಂಡುಗಳನ್ನು ಹಾರಿಸಲಾಯಿತು. ಬೆಂಗಾವಲಿನೊಂದಿಗೆ ಹಾಜರಿದ್ದ ವ್ಯಕ್ತಿಗೆ ಗುಂಡು ಹೊಡೆದಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಮೃತಪಟ್ಟರು. ಘಟನೆಯಲ್ಲಿ ಇನ್ನೊಬ್ಬ ವ್ಯಕ್ತಿ ಕೂಡ ಗಾಯಗೊಂಡಿದ್ದಾರೆ. ಮೃತ ವ್ಯಕ್ತಿಯನ್ನು ಅಶೋಕ್ ಮನ್ ಎಂದು ಹೆಸರಿಸಲಾಗುತ್ತಿದೆ. ಎಎಪಿ ಮುಖಂಡ ಸಂಜಯ್ ಸಿಂಗ್ ಅವರ ಪ್ರಕಾರ ಅಶೋಕ್ ಮನ್ ಅವರು ಪಕ್ಷದ ಸ್ವಯಂಸೇವಕರಾಗಿದ್ದರು. ಮೆಹ್ರೌಲಿ ಶಾಸಕ ನರೇಶ್ ಯಾದವ್ ಅವರ ಬೆಂಗಾವಲು ಮೇಲೆ ನಡೆದ ದಾಳಿ ಅಶೋಕ್ ಮನ್ ಅವರ ಹತ್ಯೆ ದೆಹಲಿಯಲ್ಲಿ ಕಾನೂನು ಎಷ್ಟರ ಮಟ್ಟಿಗಿದೆ ಎಂಬುದನ್ನು ತೋರಿಸುತ್ತದೆ ಎಂದು ಸಂಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ.
मेहरौली विधायक नरेश यादव के क़ाफ़िले पर हमला अशोक मान की सरेआम हत्या ये है दिल्ली में क़ानून का राज, मंदिर से दर्शन करके लौट रहे थे नरेश यादव
— Sanjay Singh AAP (@SanjayAzadSln) February 11, 2020
ಅದೇ ಸಮಯದಲ್ಲಿ, ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ನೈಋತ್ಯ ಹೆಚ್ಚುವರಿ ಡಿಎಸ್ಪಿ ಪ್ರತಾಪ್ ಸಿಂಗ್ ಎಎಪಿ ಶಾಸಕರ ಬೆಂಗಾವಲು ಮೇಲೆ ದಾಳಿ ಮಾಡಲಾಗಿದೆ, ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ. ಎಎಪಿ ಶಾಸಕರು ದಾಳಿಕೋರರ ನಿಜವಾದ ಗುರಿಯಾಗಿರಲಿಲ್ಲ ಎಂದು ಹೇಳಿದ್ದಾರೆ.
Southwest Addl DCP Ingit Pratap Singh on firing on the convoy of AAP MLA, Naresh Yadav last night: The investigation so far reveals that there was one assailant. Naresh Yadav wasn't the target.The assailant had specifically come to target the man who was shot dead (AAP volunteer) pic.twitter.com/Kzxc06hVZy
— ANI (@ANI) February 12, 2020
ಈ ದಾಳಿಯಿಂದ ಆಮ್ ಆದ್ಮಿ ಪಕ್ಷ ಭೀತಿಯಲ್ಲಿದೆ. ಪಕ್ಷದ ಅನೇಕ ದೊಡ್ಡ ನಾಯಕರು ಈ ಘಟನೆಯನ್ನು ಖಂಡಿಸಿ ದೆಹಲಿಯ ಕಾನೂನು ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.