ಬಿಜೆಪಿಗೆ ರಾಜೀನಾಮೆ ನೀಡಿದ ಘನಶ್ಯಾಮ್ ತಿವಾರಿ

     

Last Updated : Jun 25, 2018, 04:12 PM IST
ಬಿಜೆಪಿಗೆ ರಾಜೀನಾಮೆ ನೀಡಿದ ಘನಶ್ಯಾಮ್ ತಿವಾರಿ title=
Photo courtesy: ANI

ಜೈಪುರ್: ಬಿಜೆಪಿ ಶಾಸಕ ಮತ್ತು ಮಾಜಿ ಸಚಿವ ಘನಶ್ಯಾಮ್ ತಿವಾರಿ ಸೋಮವಾರ ಪಕ್ಷದ ರಾಜೀನಾಮೆ ನೀಡಿದ್ದಾರೆ.

ಪಕ್ಷದ ಮುಖ್ಯಸ್ಥ ಅಮಿತ್ ಶಾಗೆ ತಿವಾರಿ ರಾಜೀನಾಮೆ ಪತ್ರ ರವಾನಿಸಿದ್ದಾರೆ. ಐದು ಬಾರಿ ಎಂಎಲ್ಎ ಆಗಿರುವ ಅವರು  ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ರೊಂದಿಗೆ ಉತ್ತಮ ಬಾಂಧ್ಯವ್ಯ ಹೊಂದಿಲ್ಲ ಎಂದು ಹೇಳಲಾಗುತ್ತಿದೆ. ಸಂಗನೇರ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ  ಅವರು ಕಳೆದ ಚುನಾವಣೆಯಲ್ಲಿ 60,000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಈ ಬಾರಿಯ ಚುನಾವಣೆಯಲ್ಲಿ ತಮ್ಮ ಮಗ ಅಖಿಲೇಶ್ ಅವರು ರಚಿಸಿದ 'ಭಾರತ್ ವಹೀನಿ ಪಾರ್ಟಿ' ಸೇರಲಿದ್ದಾರೆ.

Trending News