ನವದೆಹಲಿ: 2019 ನೇ ಸಾಲಿನ 'ಮಿಸ್ ಇಂಡಿಯಾ ದೆಹಲಿ' ಮಾನಸಿ ಸೇಹಗಲ್, ಆಮ್ ಆದ್ಮಿ ಪಾರ್ಟಿ(ಎಎಪಿ) ಸೇರುವ ಮೂಲಕ ಪಕ್ಷಕ್ಕೆ ಗ್ಲಾಮರ್ ಟಚ್ ನೀಡಿದ್ದಾರೆ. ಮಿಸ್ ಇಂಡಿಯಾ ದೆಹಲಿ ಆಡಿಷನ್ಸ್ನಲ್ಲಿ ಲೋಕೋಪಕಾರಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಆಸಕ್ತಿ ವ್ಯಕ್ತಪಡಿಸಿದ್ದ ಸೆಹಗಲ್, ಈಗ ಎಎಪಿ ಮೂಲಕ ಸಾರ್ವಜನಿಕ ಸೇವೆಯನ್ನು ಕೈಗೆತ್ತಿಕೊಳ್ಳಲು ಅಪೇಕ್ಷಿಸಿದ್ದಾರೆ ಎನ್ನಲಾಗಿದೆ.
ನೇತಾಜಿ ಸುಭಾಷ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಬಿ.ಟೆಕ್. ಪದವಿ ಗಳಿಸಿರುವ ಮಾನ್ಸಿ ಸೆಹಗಲ್(Mansi Sehgal), ದ್ವಾರಕಾದ ದೆಹಲಿ ಪಬ್ಲಿಕ್ ಶಾಲೆಯಲ್ಲಿ ಶಾಲಾ ಶಿಕ್ಷಣ ಪಡೆದವರು. ಸೇಹಗಲ್ ತಮ್ಮದೇ ಒಂದು ಐಟಿ ಸ್ಟಾರ್ಟ್ಅಪ್ ಅನ್ನು ಸಹ ನಡೆಸುತ್ತಾರೆ. ಅವರ ಇನ್ಸ್ಸ್ಟಾಗ್ರಾಂ ಖಾತೆಯಲ್ಲಿ ತಮ್ಮ ಬಗ್ಗೆ ಟೆಡ್ಎಕ್ಸ್ ಸ್ಪೀಕರ್, ಇಂಜಿನಿಯರ್ ಮತ್ತು ಎಂಟ್ರೆಪ್ರೆನರ್ ಎಂದು ಬಣ್ಣಿಸಿಕೊಂಡಿದ್ದಾರೆ.
AAP family is growing!
Miss India Delhi 2019 Mansi Sehgal joins AAP after getting inspired by @ArvindKejriwal Govt's revolutionary work in Delhi. pic.twitter.com/3kALChlTWa
— AAP (@AamAadmiParty) March 1, 2021
LPG Cylinder: ನಾಲ್ಕು ದಿನದಲ್ಲಿ ಎರಡನೇ ಬಾರಿಗೆ ಮತ್ತೆ 'LPG ಗ್ಯಾಸ್' ಬೆಲೆ ಏರಿಕೆ..!
ದೆಹಲಿ ಜಲ್ ಬೋರ್ಡ್ ಉಪಾಧ್ಯಕ್ಷ ಮತ್ತು ಎಎಪಿ ನಾಯಕ ರಾಘವ್ ಛಡ್ಡ ಅವರ ಸಮ್ಮುಖದಲ್ಲಿ ಮಾನಸಿ ಸೆಹಗಲ್ ಎಎಪಿ(AAP Party) ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಛಡ್ಡ, ಪಕ್ಷದ ಸಿದ್ಧಾಂತ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಅಭಿವೃದ್ಧಿ ಕಾರ್ಯಗಳಿಂದ ಪ್ರೇರಿತರಾಗಿ ಮಾನಸಿ ಅವರು ಎಎಪಿ ಸೇರುತ್ತಿದ್ದಾರೆ ಎಂದು ಹೇಳಿದ್ದಾರೆ.
Mallikarjun Kharge: 'ನನಗೆ 70ಕ್ಕಿಂತ ಹೆಚ್ಚು ವಯಸ್ಸು, 10-15 ವರ್ಷ ಬಾಕಿ ಉಳಿದಿದೆ, ಯುವಕರಿಗೆ ವ್ಯಾಕ್ಸಿನ್ ಹಾಕಿ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.