ಉತ್ತರ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ

    

Last Updated : May 10, 2018, 02:20 PM IST
ಉತ್ತರ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ  title=

ಚಂದ್ರೌಲಿ: ಉತ್ತರಪ್ರದೇಶದ ಚಂದ್ರೌಲಿಯಲ್ಲಿ 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಅಮಾನುಷ ಕೃತ್ಯ ಬುಧುವಾರದಂದು ನಡೆದಿದೆ.

ಅಪ್ರಾಪ್ತ ಬಾಲಕಿಯು ಮನೆಯಲ್ಲಿ ಮಲಗಿದ್ದ ವೇಳೆಯಲ್ಲಿ ನೆರೆಯ ವ್ಯಕ್ತಿ  ಹತ್ತಿರದ ಗದ್ದೆಗೆ ಕರೆದೊಯ್ಯ್ದು ಅತ್ಯಾಚಾರವೆಸಗಿದ್ದಾನೆ ಎಂದು ಹೇಳಲಾಗಿದೆ.ಈ ಕೃತ್ಯದ ನಂತರ ಬಾಲಕಿಯು ಈ ಘಟನೆಯನ್ನು ಕುಟುಂಬದ ಸದಸ್ಯರಿಗೆ ತಿಳಿಸಿದಾಗ ಅಲಿ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಆರೋಪಿಯು ತಲೆ ಮೆರೆಸಿಕೊಂಡಿದ್ದು ಆತನ ಪತ್ತೆಗಾಗಿ ಪೊಲೀಸರು ಬಲೆ ಬಿಸಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚಿಗೆ ರಾಷ್ಟ್ರಾಧ್ಯಂತ ಅಪ್ರಾಪ್ತ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ತೀವ್ರಗೊಂಡಿವೆ.ಅದರಲ್ಲೂ ಪ್ರಮುಖವಾಗಿ ಕತುವಾ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬಿಳಿಸಿತ್ತು. ಈ ಪ್ರಕರಣದ ನಂತರ  ರಾಷ್ಟ್ರಪತಿಗಳು  ಪೋಸ್ಕೊ ಕಾಯ್ದೆಯನ್ನು ಬಲಪಡಿಸುವ ನಿಟ್ಟಿನಲ್ಲಿ 12 ವರ್ಷದೊಳಗಿರುವ ಬಾಲಕಿಯ ಮೇಲಿನ ಅತ್ಯಾಚಾರಕ್ಕೆ ಮರಣ ದಂಡನೆಯನ್ನು ವಿದಿಸುವ ಕ್ರಮವನ್ನು ತೆಗೆದುಕೊಂಡಿತ್ತು.

Trending News