MBBS, ಬಿಡಿಎಸ್‌ನಲ್ಲಿ ಕರೋನಾ ವಾರಿಯರ್ಸ್‌ ಮಕ್ಕಳಿಗೆ ಸಿಗಲಿದೆ ಮೀಸಲಾತಿ

ಎಂಬಿಬಿಎಸ್ ಮತ್ತು ಬಿಡಿಎಸ್‌ನಲ್ಲಿ ವಿದ್ಯಾರ್ಥಿಗಳ ಆಯ್ಕೆ ಮತ್ತು ದಾಖಲಾತಿಗಾಗಿ ಆರೋಗ್ಯ ಸಚಿವಾಲಯವು ಸೆಂಟ್ರಲ್ ಪೂಲ್‌ನಲ್ಲಿ ಹೊಸ ವರ್ಗವನ್ನು ಅನುಮೋದಿಸಿದೆ.

Last Updated : Nov 20, 2020, 11:12 AM IST
  • ವೈದ್ಯಕೀಯ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET) ಉತ್ತೀರ್ಣರಾಗಬೇಕು.
  • ಈ ವರ್ಷ ಸೆಪ್ಟೆಂಬರ್ 13 ರಂದು ನೀಟ್ ಪರೀಕ್ಷೆ ನಡೆಯಿತು. ಈ ಪರೀಕ್ಷೆಯಲ್ಲಿ 15.9 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು.
  • ನೀಟ್ ಉತ್ತೀರ್ಣರಾದ ಅಭ್ಯರ್ಥಿಗಳು ಎಂಬಿಬಿಎಸ್ ಅಥವಾ ಬಿಡಿಎಸ್ ಕೋರ್ಸ್‌ನಲ್ಲಿ ಪ್ರವೇಶ ಪಡೆಯಲು ಅರ್ಹರು.
MBBS, ಬಿಡಿಎಸ್‌ನಲ್ಲಿ ಕರೋನಾ ವಾರಿಯರ್ಸ್‌ ಮಕ್ಕಳಿಗೆ ಸಿಗಲಿದೆ ಮೀಸಲಾತಿ  title=
Image courtesy: Reuters

ನವದೆಹಲಿ : ಭಾರತ ಸೇರಿದಂತೆ ಇಡೀ ಜಗತ್ತು ಕೋವಿಡ್ -19 ಸಾಂಕ್ರಾಮಿಕದೊಂದಿಗೆ ಹೋರಾಡುತ್ತಿದೆ. ಕರೋನಾದ ಹಾನಿಯಿಂದ ಪಾರಾಗಲು ಇಡೀ ದೇಶದಲ್ಲಿ ಲಾಕ್‌ಡೌನ್‌ ಜಾರಿಗೆ ತರಲಾಗಿತ್ತು. ಈ ಸಂದರ್ಭದಲ್ಲಿ ಎಲ್ಲರೂ ಮನೆಗಳಲ್ಲಿದ್ದರು. ಆದರೆ ಕರೋನಾ ವಾರಿಯರ್ಸ್ ಅವರ ಜೀವನವನ್ನು ಲೆಕ್ಕಿಸದೆ ಜನರಿಗೆ ಸಹಾಯ ಮಾಡುತ್ತಿದ್ದರು.

ಕರೋನಾ ವಾರಿಯರ್ಸ್  (Corona Warriors) ಗೌರವಾರ್ಥವಾಗಿ ಕೇಂದ್ರ ಸರ್ಕಾರವು ವಿಮಾ ಸೌಲಭ್ಯಗಳಂತಹ ಅನೇಕ ಘೋಷಣೆಗಳನ್ನು ಮಾಡಿತು. ಕರೋನಾ ವಾರಿಯರ್ ಪಾತ್ರವನ್ನು ನಿರ್ವಹಿಸುವ ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅಂಕಗಳನ್ನು ನೀಡಲು ವಿವಿಧ ರಾಜ್ಯ ಸರ್ಕಾರಗಳು ಘೋಷಿಸಿವೆ.

ವೈದ್ಯಕೀಯ ಸೀಟು ಮೀಸಲಾತಿ  (Medical seat Reservation):
ಇದೀಗ ಕರೋನಾ ವಾರಿಯರ್ಸ್‌ನ ಮಕ್ಕಳಿಗೆ ವೈದ್ಯಕೀಯ ಪ್ರವೇಶಕ್ಕಾಗಿ ವೈದ್ಯಕೀಯ ಸೀಟು ಕಾಯ್ದಿರಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

ಮೂತ್ರಪಿಂಡ-ಹೃದಯ ಶಸ್ತ್ರಚಿಕಿತ್ಸೆಗೊಳಗಾದವರಿಗೆ ಮಾತ್ರೆ ತಲುಪಿಸಿ ಮಾನವೀಯತೆ ಮೆರೆದ ಕೊರೋನಾ ಸೈನಿಕರು

ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಅವರು ಕರೋನಾ ವಾರಿಯರ್ಸ್‌ ಮಕ್ಕಳಿಗೆ ಎಂಬಿಬಿಎಸ್ ಮತ್ತು ಬಿಡಿಎಸ್‌ನಲ್ಲಿ Wards of COVID Warriors ಕೋಟಾದ ಅಡಿಯಲ್ಲಿ ಮೀಸಲಾತಿ ನೀಡುವುದಾಗಿ  ಘೋಷಿಸಿದ್ದಾರೆ.

ಕರೋನಾ ವಾರಿಯರ್ಸ್ (Corona Warriors):
ಕರೋನಾ ಯುಗದಲ್ಲಿ ಹೆಚ್ಚಿನ ಜನರು ನಿಸ್ವಾರ್ಥವಾಗಿ ಮುಂದೆ ಬಂದು ಅಗತ್ಯವಿರುವವರಿಗೆ ಸಹಾಯ ಮಾಡಿದರು. ಅವರು ತಮ್ಮ ಜೀವನವನ್ನು ಲೆಕ್ಕಿಸದೆ ಕರೋನಾ ಯೋಧರ ಪಾತ್ರವನ್ನು ನಿರ್ವಹಿಸಿದರು. ಅನೇಕ ಕರೋನಾ ವಾರಿಯರ್ಸ್ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. 

ಏನು ನೋಟುಗಳಿಂದಲೂ ಕರೋನಾವೈರಸ್ ಹರಡುತ್ತಾ...? RBI ನೀಡಿದೆ ಈ ಉತ್ತರ

ಈ ಹಿನ್ನಲೆಯಲ್ಲಿ ಎಂಬಿಬಿಎಸ್ (MBBS) ಮತ್ತು ಬಿಡಿಎಸ್ ಅಭ್ಯರ್ಥಿಗಳ ಆಯ್ಕೆ ಮತ್ತು ನಾಮನಿರ್ದೇಶನಕ್ಕಾಗಿ ಸೆಂಟ್ರಲ್ ಪೂಲ್‌ನಲ್ಲಿ ಹೊಸ ವರ್ಗಕ್ಕೆ ಆರೋಗ್ಯ ಸಚಿವಾಲಯ ಅನುಮೋದನೆ ನೀಡಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ. ಈ ಹೊಸ ವರ್ಗವನ್ನು 'ವಾರ್ಡ್ಸ್ ಆಫ್ ಕೋವಿಡ್ ವಾರಿಯರ್ಸ್' ಎಂದು ಹೆಸರಿಸಲಾಗುವುದು. ವೈದ್ಯಕೀಯ ಪ್ರವೇಶಕ್ಕಾಗಿ ಕಾಯ್ದಿರಿಸಿದ ಆಸನಗಳು ಸೆಂಟ್ರಲ್ ಪೂಲ್‌ನಲ್ಲಿ ಇರಲಿವೆ. ಸೆಂಟ್ರಲ್ ಪೂಲ್‌ನಲ್ಲಿ ಕರೋನಾ ಅವಧಿಯಲ್ಲಿ ತ್ಯಾಗ ಮಾಡಿದ ಕರೋನಾ ವಾರಿಯರ್ಸ್ ಮಕ್ಕಳಿಗೆ 5 ವೈದ್ಯಕೀಯ ಸ್ಥಾನಗಳನ್ನು ಕಾಯ್ದಿರಿಸಲಾಗಿದೆ ಎಂದು ಆರೋಗ್ಯ ಸಚಿವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಕರೋನಾ ವಾರಿಯರ್ಸ್‌ನ ತ್ಯಾಗವನ್ನು ಗೌರವಿಸಿ:
ದೇಶ ಸೇವೆ ಮಾಡುವಾಗ ತ್ಯಾಗ ಮಾಡಿದ ಕರೋನಾ ವಾರಿಯರ್ಸ್‌ನ್ನು ಸರ್ಕಾರ ಗೌರವಿಸುತ್ತದೆ. ಕರೋನಾ ವಾರಿಯರ್ಸ್‌ನ ತ್ಯಾಗಕ್ಕೆ ಗೌರವ ಸಲ್ಲಿಸುವ ನಿಟ್ಟಿನಲ್ಲಿಅವರ ಮಕ್ಕಳಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಮೀಸಲಾತಿ ನೀಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಡಾ. ಹರ್ಷ್‌ವರ್ಧನ್ (Dr Harshvardhan) ತಮ್ಮ ಒಂದು ಟ್ವೀಟ್‌ನಲ್ಲಿ, 'ಕರೋನಾ ವಾರಿಯರ್ಸ್‌ ಕೊಡುಗೆಯನ್ನು ಇತಿಹಾಸವು ಎಂದಿಗೂ ಮರೆಯುವುದಿಲ್ಲ. ಅವರ ಕೊಡುಗೆಯನ್ನು ಗುರುತಿಸಿ, ಆರೋಗ್ಯ ಸಚಿವಾಲಯವು ಸೆಂಟ್ರಲ್ ಪೂಲ್‌ನ 5 ಎಂಬಿಬಿಎಸ್ ಸೀಟುಗಳನ್ನು ಕರೋನಾ ವಾರಿಯರ್ಸ್‌ಗಾಗಿ ಕಾಯ್ದಿರಿಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ವೈದ್ಯಕೀಯ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET) ಉತ್ತೀರ್ಣರಾಗಬೇಕು. ಈ ವರ್ಷ ಸೆಪ್ಟೆಂಬರ್ 13 ರಂದು ನೀಟ್ ಪರೀಕ್ಷೆ ನಡೆಯಿತು. ಈ ಪರೀಕ್ಷೆಯಲ್ಲಿ 15.9 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ನೀಟ್ ಉತ್ತೀರ್ಣರಾದ ಅಭ್ಯರ್ಥಿಗಳು ಎಂಬಿಬಿಎಸ್ ಅಥವಾ ಬಿಡಿಎಸ್ ಕೋರ್ಸ್‌ನಲ್ಲಿ ಪ್ರವೇಶ ಪಡೆಯಲು ಅರ್ಹರು.

Trending News