ಮಧ್ಯಪ್ರದೇಶದಲ್ಲಿ ಸಚಿವರು ಈ ಪದಗಳನ್ನು ಬಳಸುವ ಹಾಗಿಲ್ಲ! ಇಲ್ಲಿವೆ ಓದಿ

    

Last Updated : Apr 28, 2018, 03:25 PM IST
ಮಧ್ಯಪ್ರದೇಶದಲ್ಲಿ ಸಚಿವರು ಈ ಪದಗಳನ್ನು ಬಳಸುವ ಹಾಗಿಲ್ಲ! ಇಲ್ಲಿವೆ ಓದಿ  title=

ಭೂಪಾಲ್: ಇನ್ನು ಮುಂದೆ ಜನರಿಗೆ ಆಶ್ವಾಸನೆ ನೀಡುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ ಮಧ್ಯಪ್ರದೇಶ ಸರ್ಕಾರ ಹೊಸ ಉಪಾಯವೊಂದನ್ನು ಕಂಡು ಹಿಡಿದಿದೆ, ಅದೇನೆಂದರೆ ಸುಮಾರು 34 ನಾಲ್ಕು ರೀತಿಯ ಪದ ಪ್ರಯೋಗಗಳನ್ನು ಇನ್ನು ಬಳಸುವ ಹಾಗಿಲ್ಲ ಎಂದು ಅದು ಸಚಿವರಿಗೆ ನಿರ್ದೇಶನ ನೀಡಿದೆ.

ಹಾಗಾದರೆ ಈ ನಿರ್ದೇಶನಕ್ಕೆ ಮುಖ್ಯ ಕಾರಣವೆಂದರೆ ಇದರಿಂದ  ಜನರಿಗೆ ನಿಡುವ ಆಶ್ವಾಸನೆಯನ್ನು ತಪ್ಪಿಸಿಕೊಳ್ಳಬಹದು ಎನ್ನಲಾಗುತ್ತಿದೆ. ಈ ಅಧಿಸೂಚನೆಯನ್ನು ಸರ್ಕಾರವು  ತಿಂಗಳ ಹಿಂದೆ ಹೊರಡಿಸಿದ್ದು ಅದು ಇನ್ನು ಮುಂದು ಹೋಗಿ ಯಾವ ಯಾವ ಪದಗಳನ್ನು ಬಳಸಬಾರದು ಎಂದು ಸಲಹೆ ನೀಡಿದೆ. 

ಇದರನ್ವಯ ಸಚಿವರು "we are inquiring into it", "the issue will be considered", "I'll look into it", "I'll write to the centre", "I'll see what I can do", "timely action will be taken", "I'll think about it", "We'll discuss the questions raised by the legislators" ಈ ಎಲ್ಲ ಪದಗಳು ಆಶ್ವಾಸನೆಗೆ ಪೂರಕವಾಗಿರುವುದರಿಂದ ಇವುಗಳನ್ನು ಮೌಖೀಕ ಮತ್ತು ಆನ್ ಲೈನ್ ವೇದಿಕೆಗಳಲ್ಲಿಯೂ ಸಹಿತ ಬಳಸ ಬಳಸಕೂಡದು ಎಂದು ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾನ್  ನೇತೃತ್ವದ ಬಿಜೆಪಿ ಸರ್ಕಾರವು ಆದೇಶ ಮಾಡಿದೆ. 

Trending News