ಜಗತ್ತಿನ ಅತೀ ಶ್ರೀಮಂತ ಭಿಕ್ಷುಕನ ಆಸ್ತಿ ಮೌಲ್ಯ ರೂ. 7.5 ಕೋಟಿ! ಈ ಹೈಫೈ ಬೆಗ್ಗರ್ ಭಾರತದವನೇ…

World Richest Beggar: ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ ಭಾರತದ ಮುಂಬೈ ನಗರದಲ್ಲಿ ವಾಸಿಸುತ್ತಿದ್ದಾನೆ. ಝೀ ನ್ಯೂಸ್ ವರದಿಯ ಪ್ರಕಾರ, ಭರತ್ ಜೈನ್ ಜಾಗತಿಕ ಮಟ್ಟದಲ್ಲಿ ವಿಶ್ವದ ಶ್ರೀಮಂತ ಭಿಕ್ಷುಕ ಎಂದು ಗುರುತಿಸಲ್ಪಟ್ಟಿದ್ದಾನೆ.

Written by - Bhavishya Shetty | Last Updated : Jul 9, 2023, 10:13 AM IST
    • ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ ಭಾರತದ ಮುಂಬೈ ನಗರದಲ್ಲಿ ವಾಸಿಸುತ್ತಿದ್ದಾನೆ
    • ಈತನ ಆಸ್ತಿ ಮೌಲ್ಯ 7 ಕೋಟಿ ರೂಪಾಯಿಗಿಂತ ಹೆಚ್ಚು.
    • ಕೇವಲ ಭಿಕ್ಷಾಟನೆಯಿಂದ ಅವರ ತಿಂಗಳ ಆದಾಯ 60,000 ರೂ.ಗಳಿಂದ 75,000 ರೂ
ಜಗತ್ತಿನ ಅತೀ ಶ್ರೀಮಂತ ಭಿಕ್ಷುಕನ ಆಸ್ತಿ ಮೌಲ್ಯ ರೂ. 7.5 ಕೋಟಿ! ಈ ಹೈಫೈ ಬೆಗ್ಗರ್ ಭಾರತದವನೇ… title=
Bharat Jain World Richest Beggar

World Richest Beggar Income: ನೀವು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಭಾರತದ ಶ್ರೀಮಂತ ವ್ಯಕ್ತಿ ಮತ್ತು ಏಷ್ಯಾದ ಬಿಲಿಯನೇರ್‌ ಗಳ ಬಗ್ಗೆ ಸಾಕಷ್ಟು ಕೇಳಿರಬಹುದು. ಅವರ ಬಳಿಕ ಲೆಕ್ಕವಿಲ್ಲದಷ್ಟು ಆಸ್ತಿಯೂ ಇವೆ. ಆದರೆ ಕೋಟಿಗಟ್ಟಲೆ ಆಸ್ತಿ ಹೊಂದಿರುವ ಭಿಕ್ಷುಕನ ಬಗ್ಗೆ ಎಂದಾದರೂ ಕೇಳಿದ್ದೀರಾ? ಅಥವಾ ನೋಡಿದ್ದೀರಾ? ಇಂದು ನಾವು ಅಂತಹ ಒಬ್ಬ ಭಿಕ್ಷುಕನ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಇದನ್ನೂ ಓದಿ: 21 ವರ್ಷದಿಂದ ಟೆಸ್ಟ್ ಸರಣಿಯಲ್ಲಿ Team Indiaವನ್ನು ಸೋಲಿಸಲು ಹವಣಿಸುತ್ತಿದೆ ಈ ತಂಡ! ಆದ್ರೆ...

ಈತ ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ ಮತ್ತು ಈತನ ಆಸ್ತಿ ಮೌಲ್ಯ 7 ಕೋಟಿ ರೂಪಾಯಿಗಿಂತ ಹೆಚ್ಚು.

ಸಾಮಾನ್ಯವಾಗಿ ಭಿಕ್ಷುಕ ಎಂಬ ಪದವು ಹಣದ ಬಿಕ್ಕಟ್ಟು, ಆಹಾರದ ಬಿಕ್ಕಟ್ಟು, ಹರಿದ ಹಳೆಯ ಬಟ್ಟೆಗಳು ಮತ್ತು ಸ್ವಚ್ಛವಿಲ್ಲದ ಕೂದಲು ಎಂಬೆಲ್ಲಾ ಚಿತ್ರಣವನ್ನು ನೀಡುತ್ತದೆ. ಅವರು ಸಮಾಜದ ಕಟ್ಟಕಡೆಯ ವರ್ಗಕ್ಕೆ ಸೇರಿದವರು ಎಂಬುದು ಕೂಡ ಸತ್ಯ. ಆದರೆ ಕೆಲವರಿಗೆ ಭಿಕ್ಷಾಟನೆಯೇ ವೃತ್ತಿಯಾಗಿದ್ದು, ಅದರಿಂದ ಕೋಟ್ಯಂತರ ರೂಪಾಯಿ ಆಸ್ತಿ ಸಂಪಾದಿಸಿದ್ದಾರೆ. ಅದಕ್ಕೆ ತಾಜಾ ಉದಾಹರಣೆ ಈ ಒಬ್ಬ ವ್ಯಕ್ತಿ.

ಜಗತ್ತಿನ ಅತ್ಯಂತ ಶ್ರೀಮಂತ ಭಿಕ್ಷುಕ ಯಾರು?

ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ ಭಾರತದ ಮುಂಬೈ ನಗರದಲ್ಲಿ ವಾಸಿಸುತ್ತಿದ್ದಾನೆ. ಝೀ ನ್ಯೂಸ್ ವರದಿಯ ಪ್ರಕಾರ, ಭರತ್ ಜೈನ್ ಜಾಗತಿಕ ಮಟ್ಟದಲ್ಲಿ ವಿಶ್ವದ ಶ್ರೀಮಂತ ಭಿಕ್ಷುಕ ಎಂದು ಗುರುತಿಸಲ್ಪಟ್ಟಿದ್ದಾನೆ. ಈ ಭಿಕ್ಷುಕ ಮುಂಬೈನ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿರುವುದನ್ನು ಕಾಣಬಹುದು.

ಭರತ್ ಜೈನ್ ತಿಂಗಳ ಆದಾಯ 60 ಸಾವಿರ!

ಮುಂಬೈ ಮೂಲದ ಭರತ್ ಜೈನ್ ಅವರು 7.5 ಕೋಟಿ ಅಥವಾ 1 ಮಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಸಂಪಾದಿಸಿದ್ದಾರೆ. ಕೇವಲ ಭಿಕ್ಷಾಟನೆಯಿಂದ ಅವರ ತಿಂಗಳ ಆದಾಯ 60,000 ರೂ.ಗಳಿಂದ 75,000 ರೂ.

ಭರತ್ ಜೈನ್ ಬಳಿ 1.2 ಕೋಟಿ ಫ್ಲಾಟ್!

ಭರತ್ ಜೈನ್ ಅವರು ಮುಂಬೈನಲ್ಲಿ 1.2 ಕೋಟಿ ರೂಪಾಯಿ ಮೌಲ್ಯದ ಎರಡು ಬೆಡ್ ರೂಂ ಫ್ಲಾಟ್ ಹೊಂದಿದ್ದಾರೆ. ಥಾಣೆಯಲ್ಲಿ ಎರಡು ಅಂಗಡಿಗಳನ್ನು ನಿರ್ಮಿಸಿದ್ದಾರೆ. ಅಲ್ಲಿಂದ ಅವರು ಮಾಸಿಕ 30,000 ರೂಪಾಯಿ ಬಾಡಿಗೆ ಪಡೆಯುತ್ತಾರೆ. ಭಾರತ್ ಜೈನ್ ಛತ್ರಪತಿ ಶಿವಾಜಿ ಟರ್ಮಿನಸ್ ಅಥವಾ ಆಜಾದ್ ಮೈದಾನದಂತಹ ಪ್ರಮುಖ ಸ್ಥಳಗಳಲ್ಲಿ ಭಿಕ್ಷೆ ಬೇಡುವುದನ್ನು ಕಾಣಬಹುದು. ಇಷ್ಟೆಲ್ಲಾ ಸಂಪತ್ತು ಇದ್ದರೂ ಮುಂಬೈನ ಬೀದಿಗಳಲ್ಲಿ ಭಿಕ್ಷೆ ಬೇಡುವ ಕೆಲಸವನ್ನು ಭರತ್ ಜೈನ್ ಮಾಡುತ್ತಾರೆ. ಭರತ್ ಜೈನ್ 10 ರಿಂದ 12 ಗಂಟೆಗಳ ಒಳಗೆ ದಿನಕ್ಕೆ 2,000 ರಿಂದ 2,500 ರೂ. ಸಂಪಾದನೆ ಮಾಡುತ್ತಾರಂತೆ.

ಇದನ್ನೂ ಓದಿ: ಮಾರುಕಟ್ಟೆಗೆ 32 ಇಂಚಿನ ಸ್ಮಾರ್ಟ್ LED ಟಿವಿ ಗ್ರ್ಯಾಂಡ್ ಎಂಟ್ರಿ: ಊಹೆಗೂ ಮೀರಿದ ವೈಶಿಷ್ಟ್ಯ! ಬೆಲೆ 10,000ಕ್ಕಿಂತ ಕಡಿಮೆ

ಮಕ್ಕಳಿಗೆ ಕಾನ್ವೆಂಟ್ ಶಾಲೆಯಲ್ಲಿ ವಿದ್ಯಾಭ್ಯಾಸ!

ಅವರ ವ್ಯವಹಾರದಿಂದ ಆದಾಯದ ಹೊರತಾಗಿಯೂ, ಭರತ್ ಜೈನ್ ಮತ್ತು ಅವರ ಕುಟುಂಬವು ಪರೇಲ್‌ ನಲ್ಲಿರುವ 1BHK ಡ್ಯುಪ್ಲೆಕ್ಸ್ ನಿವಾಸದಲ್ಲಿ ವಾಸಿಸುತ್ತಿದ್ದಾರೆ. ಮಕ್ಕಳು ಕಾನ್ವೆಂಟ್ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಇದಲ್ಲದೆ, ಇತರ ಕುಟುಂಬ ಸದಸ್ಯರು ಸ್ಟೇಷನರಿ ಅಂಗಡಿಯನ್ನು ನಡೆಸುತ್ತಿದ್ದಾರೆ. ಇದು ಮತ್ತೊಂದು ಆದಾಯದ ಮೂಲವಾಗಿದೆ. ಇನ್ನು ವರದಿಗಳ ಪ್ರಕಾರ, ಭಿಕ್ಷಾಟನೆಯನ್ನು ನಿಲ್ಲಿಸುವಂತೆ ಭರತ್ ಕುಟುಂಬವು ಸಲಹೆ ನೀಡಿದರೂ ಆ ವೃತ್ತಿಯನ್ನು ಮಾತ್ರ ಬಿಡುತ್ತಿಲ್ಲವಂತೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News