ಮೊದಲ ಬಾರಿಗೆ ಹಿಂದುಳಿದ ವರ್ಗದ ಅರ್ಚಕರನ್ನು ನೇಮಿಸಿದ ಮಧುರೈ ದೇವಸ್ಥಾನ

    

Last Updated : Jul 31, 2018, 08:27 PM IST
ಮೊದಲ ಬಾರಿಗೆ ಹಿಂದುಳಿದ ವರ್ಗದ ಅರ್ಚಕರನ್ನು ನೇಮಿಸಿದ ಮಧುರೈ ದೇವಸ್ಥಾನ  title=
ಸಾಂದರ್ಭಿಕ ಚಿತ್ರ

ಚೆನ್ನೈ : ಪ್ರಸಿದ್ಧ ದೇವತೆ ಮೀನಾಕ್ಷಿ ಅಮ್ಮನ್ ದೇವಸ್ಥಾನವು ಮೊದಲ ಬಾರಿಗೆ ಹಿಂದುಳಿದ ಧರ್ಮಕ್ಕೆ ಸೇರಿದ 'ಅರ್ಚಕರನ್ನು ನೇಮಕ ಮಾಡಿದೆ. 

ತಮಿಳುನಾಡು ಸರಕಾರವು ಯಾವುದೇ ಜಾತಿಯ ಜನರನ್ನು ಅರ್ಚಕರನ್ನಾಗಿ  ನೇಮಕ  ಮಾಡುವ ಆದೇಶವನ್ನು ಜಾರಿಗೆ ತಂದ ಹನ್ನೆರಡು ವರ್ಷಗಳ ನಂತರ ಇದೇ ಮೊದಲ ಬಾರಿಗೆ 
ಹಿಂದುಳಿದ ಜಾತಿಗೆ ಸೇರಿದ ಅರ್ಚಕನ್ನು ಆಯ್ಕೆ ಮಾಡಲಾಗಿದೆ.ಪ್ರಾಚೀನ ದೇವಾಲಯದ ಆಡಳಿತ ನಡೆಸಿದ 206 ಜನರ ತರಬೇತಿಯಲ್ಲಿ ಅರ್ಚಕರನ್ನು ಅಂತಿಮಗೊಳಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಮೇ 23, 2006 ರಂದು ಆಗಿನ  ಮುಖ್ಯಮಂತ್ರಿ  ಕರುಣಾನಿಧಿ ನೇತೃತ್ವದ  ರಾಜ್ಯ ಸರ್ಕಾರವು ಯಾವುದೇ ಹಿಂದೂ ದೇವಸ್ಥಾನಗಳಲ್ಲಿ ಅಗತ್ಯ ಅರ್ಹತೆ ಮತ್ತು ತರಬೇತಿಯನ್ನು ಹೊಂದಿರುವ ಅರ್ಚಕರನ್ನು  ಎಂದು ನೇಮಕ ಮಾಡಲು ಆದೇಶ ನೀಡಿತ್ತು. ಆದರೆ ಅದು ಇದುವರೆಗೂ ಸಹಿತ ಜಾರಿಗೆ ಬಂದಿರಲಿಲ್ಲ .ಇನ್ನು ಆಗಿನ ಡಿಎಂಕೆ ಸರ್ಕಾರವು 2007-08 ರಲ್ಲಿ   ಜೂನಿಯರ್ ಅರ್ಚಕರ ಸರ್ಟಿಫಿಕೆಟ್ ನ್ನು ಸಹಿತ ನೀಡಲು ಪ್ರಾರಂಭಿಸಿತ್ತು ಅಲ್ಲದೆ ಇದಕ್ಕಾಗಿ ತರಬೇತಿ ನೀಡಲು  ಸುಮಾರು ಆರು ಕೇಂದ್ರಗಳನ್ನು ಅದು ತೆರೆದಿತ್ತು.

ಈಗ ಅದು 12 ವರ್ಷಗಳ ನಂತರ ಅತಿ ಹಿಂದುಳಿದ ಸಮುದಾಯಕ್ಕೆ ಸೇರಿದ  ಅರ್ಚಕನ್ನು  ಅಯ್ಯಪ್ಪನ್ ದೇವಸ್ತಾನಕ್ಕೆ ನೇಮಿಸಲಾಗಿದೆ.ಹಿಂದೂ ಧಾರ್ಮಿಕ ಮತ್ತು ಚಾರಿಟಬಲ್ ಎಂಡೋಮೆಂಟ್ ಬೋರ್ಡ್ಗೆ ಈ ವ್ಯಕ್ತಿ ಅರ್ಜಿ ಸಲ್ಲಿಸಿದ್ದರು. ಇದು ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ದೇವಸ್ಥಾನಗಳನ್ನು ನಿರ್ವಹಿಸುತ್ತದೆ ಮತ್ತು ಪೋಸ್ಟ್ ಗೆ ಮೌಖಿಕ ಸಂದರ್ಶನದ ನಂತರ ಆಯ್ಕೆ ಮಾಡಲಾಗುತ್ತದೆ. 

ತಮಿಳು ಸಾಹಿತ್ಯದಲ್ಲಿ ಪದವಿಯನ್ನು ಪಡೆದಿರುವ ಈ ವ್ಯಕ್ತಿ  ಹಿಂದೂ ಧರ್ಮದಲ್ಲಿ ಆಸಕ್ತಿ ದಾಯಕನಾಗಿದ್ದು ಶಿವನ ಆರಾಧಕ ಎಂದು ಮೂಲಗಳು ತಿಳಿಸಿ

Trending News