Medicine For Dengue Fever: ಕೊನೆಗೂ ಸಿಕ್ಕೆ ಬಿಟ್ತು ಡೆಂಗ್ಯೂ ಜ್ವರಕ್ಕೆ ಔಷಧಿ, ದೇಶದ ಈ 20 ಸ್ಥಳಗಳಲ್ಲಿ ನಡೆಯಲಿದೆ ಟ್ರಯಲ್

Dengue Fever: ಡೆಂಗ್ಯೂ ಒಂದು ವೈರಲ್ ಜ್ವರ, ಇದರಲ್ಲಿ ರೋಗಿಯು ಅಸಹನೀಯ ನೋವನ್ನು ಅನುಭವಿಸುತ್ತಾನೆ ಮತ್ತು ಪರಿಸ್ಥಿತಿ ತೀವ್ರವಾಗಿದ್ದರೆ ಅದು ಸಾವಿಗೆ ಕಾರಣವಾಗಬಹುದು. ಇಂದಿಗೂ ಕೂಡ ಈ ಕಾಯಿಲೆಗೆ ರೋಗಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನೀಡಲಾಗುತ್ತದೆ.

Written by - Nitin Tabib | Last Updated : Oct 20, 2021, 12:08 PM IST
  • ಡೆಂಗ್ಯೂ ಜ್ವರದ ಔಷಧಿ ಸಸ್ಯಾಧಾರಿತವಾಗಿದೆ.
  • ಔಷಧಿಯ ಲ್ಯಾಬ್ ಟೆಸ್ಟಿಂಗ್ ಹಾಗೂ ಇಲಿಗಳ ಮೇಲಿನ ಪರೀಕ್ಷೆ ಯಶಸ್ವಿಯಾಗಿದೆ.
  • ಶೀಘ್ರದಲ್ಲಿಯೇ ಡೆಂಗ್ಯೂ ರೋಗಿಗಳ ಮೇಲೆ ಈ ಔಷಧಿಯನ್ನು ಪರೀಕ್ಷಿಸಲಾಗುವುದು.
Medicine For Dengue Fever: ಕೊನೆಗೂ ಸಿಕ್ಕೆ ಬಿಟ್ತು ಡೆಂಗ್ಯೂ ಜ್ವರಕ್ಕೆ ಔಷಧಿ, ದೇಶದ ಈ 20 ಸ್ಥಳಗಳಲ್ಲಿ ನಡೆಯಲಿದೆ ಟ್ರಯಲ್ title=
Medicine For Dengue Fever (File Photo)

ನವದೆಹಲಿ: Dengue Fever Latest Update - ಡೆಂಗ್ಯೂ ಜ್ವರದ  (Dengue Fever) ಚಿಕಿತ್ಸೆಯಲ್ಲಿ ವಿಜ್ಞಾನಿಗಳುಹೊಸ ಮೈಲಿಗಲ್ಲನ್ನು  ಸಾಧಿಸಿದ್ದಾರೆ. ಲಖನೌನಲ್ಲಿರುವ ಕೇಂದ್ರ ಔಷಧ ಸಂಶೋಧನಾ ಸಂಸ್ಥೆಯ (CDRI Lucknow) ವಿಜ್ಞಾನಿಗಳು ಡಂಗಿ ಜ್ವರಕ್ಕೆ ಔಷಧಿಯೊಂದನ್ನು ಕಂಡು ಹಿಡಿದಿದ್ದಾರೆ. ಶೀಘ್ರದಲ್ಲೇ ಈ ಔಷಧವನ್ನು ವೈದ್ಯಕೀಯ ಕಾಲೇಜುಗಳಲ್ಲಿ ಪರೀಕ್ಷೆ ನಡೆಸಲಾಗುವುದು ಎನ್ನಲಾಗಿದೆ.

ಡೆಂಗ್ಯೂ ಒಂದು ವೈರಲ್ ಜ್ವರ (Dengue Viral Fever). ಇದರಲ್ಲಿ ರೋಗಿಯು ಅಸಹನೀಯ ನೋವನ್ನು ಅನುಭವಿಸುತ್ತಾನೆ (Dengue Fever Symptoms) ಮತ್ತು ಒಂದು ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿದರೆ  ಸಾವು ಕೂಡ ಸಂಭವಿಸುತ್ತದೆ. ಮೂಳೆಗಳಲ್ಲಿ ತೀವ್ರವಾದ ನೋವು ಇರುವುದರಿಂದ ಇದನ್ನು ಬ್ರೇಕ್-ಬೋನ್ ಜ್ವರ (Break Bone Fever) ಎಂದೂ ಕರೆಯುತ್ತಾರೆ. ಇದುವರೆಗೆ ಡೆಂಗ್ಯೂಗೆ (Dengue) ಯಾವುದೇ ಖಚಿತ ಚಿಕಿತ್ಸೆ (Dengue Fever Treatment) ಇಲ್ಲ. ಕಾಯಿಲೆಯ ರೋಗಲಕ್ಷಣಗಳ ಆಧಾರದ ಮೇಲೆ  ಇದಕ್ಕೆ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಇದೀಗ ವಿಜ್ಞಾನಿಗಳು ಅದರ ಚಿಕಿತ್ಸೆಗೆ ಔಷಧಿಯೊಂದನ್ನು (Medicine For Dengue Fever)  ಕಂಡುಹಿಡಿದಿದ್ದಾರೆ. 

ಔಷಧಿಯ ಕ್ಲಿನಿಕಲ್ ಟ್ರಯಲ್ 
ಶೀಘ್ರದಲ್ಲೇ ಔಷಧದ ವೈದ್ಯಕೀಯ ಪ್ರಯೋಗಗಳನ್ನು ರೋಗಿಗಳ ಮೇಲೆ ನಡೆಸಲಾಗುವುದು ಎಂದು ಕೇಂದ್ರ ಹೇಳಿದೆ. ಈ ಔಷಧಿಯನ್ನು ದೇಶದ 20 ಕೇಂದ್ರಗಳಲ್ಲಿ 10 ಸಾವಿರ ಡೆಂಗ್ಯೂ ರೋಗಿಗಳ ಮೇಲೆ ಪ್ರಯೋಗ ಮಾಡಲಾಗುವುದು ಎನ್ನಲಾಗಿದೆ. ಮುಂಬೈನ  ಬೃಹತ್ ಔಷಧ ಕಂಪನಿಯೊಂದು ಈ ಔಷಧವನ್ನು ಉತ್ಪಾದಿಸುತ್ತಿದೆ.

ಮಾಹಿತಿಯ ಪ್ರಕಾರ, ಪ್ರತಿ ಕೇಂದ್ರದಲ್ಲಿ 100 ರೋಗಿಗಳನ್ನು ಪ್ರಯೋಗದಲ್ಲಿ ಇರಿಸಲಾಗುವುದು ಮತ್ತು ಅವರಿಗೆ ಈ ಔಷಧವನ್ನು ನೀಡಲಾಗುವುದು ಎನ್ನಲಾಗಿದೆ.

ಆಂಟಿ ವೈರಲ್ ಔಷಧಿ 
ವಿಜ್ಞಾನಿಗಳ ಪ್ರಕಾರ, ಡೆಂಗ್ಯೂ ಔಷಧವು ಸಸ್ಯಗಳ ಮೇಲೆ ಆಧರಿತವಾಗಿಗೆ. ಇದನ್ನು 'ಕುಕುಲಸ್ ಹಿರ್ಸುಟಸ್‌ನ ಶುದ್ಧೀಕರಿಸಿದ ಜಲೀಯ ಸಾರ' (AQCH) ಎಂದು ಕರೆಯಲಾಗುತ್ತಿದೆ. ಇದು ವೈರಸ್ ನಿರೋಧಕ ಔಷಧಿಯಾಗಿದೆ. 

ಔಷಧದ ಪ್ರಯೋಗಾಲಯದ ಫಲಿತಾಂಶಗಳು ಮತ್ತು ಇಲಿಗಳ ಮೇಲಿನ ಪ್ರಯೋಗಗಳು ಯಶಸ್ವಿಯಾಗಿವೆ. ಕಂಪನಿಯು ಭಾರತದ ಡ್ರಗ್ ಕಂಟ್ರೋಲರ್ ಜನರಲ್ (ಡಿಜಿಸಿಐ) ನಿಂದ ಮಾನವ ಪ್ರಯೋಗಗಳಿಗೆ ಅನುಮತಿ ಪಡೆದಿದೆ.

ಇದನ್ನೂ ಓದಿ-ಬಂದೆ ಬಿಟ್ತು ನಿಮ್ಮ PF ಖಾತೆಗೆ ಬಡ್ಡಿ ಹಣ, ಈ ರೀತಿ ಪರಿಶೀಲಿಸಿ, e-statement ಡೌನ್ಲೋಡ್ ಮಾಡಿ

ಈ ಸ್ಥಳಗಳಲ್ಲಿ ಟ್ರಯಲ್ ನಡೆಯಲಿದೆ 
ದೇಶದ 20 ವೈದ್ಯಕೀಯ ಕಾಲೇಜುಗಳಲ್ಲಿ ಡೆಂಗ್ಯೂ ಔಷಧದ ಪ್ರಯೋಗಕ್ಕೆ ಸಿದ್ಧತೆಗಳನ್ನು ನಡೆಸಲಾಗಿದೆ. ಇವುಗಳಲ್ಲಿ ಕಾನ್ಪುರ, ಲಖನೌ, ಆಗ್ರಾ, ಮುಂಬೈ, ಥಾಣೆ, ಪುಣೆ, ಔರಂಗಾಬಾದ್, ಅಹಮದಾಬಾದ್, ಕೋಲ್ಕತಾ, ಬೆಂಗಳೂರು, ಮಂಗಳೂರು, ಬೆಳಗಾವಿ, ಚೆನ್ನೈ, ಚಂಡೀಗಡ, ಜೈಪುರ, ವಿಶಾಖಪಟ್ಟಣಂ, ಕಟಕ್, ಖುರ್ದಾ, ಜೈಪುರ ಮತ್ತು ನಾಥವಾರ ಶಾಮೀಲಾಗಿವೆ. 

ಇದನ್ನೂ ಓದಿ-T20 WC 2021 : ಈ 3 ಸ್ಪಿನ್ನರ್‌ಗಳಿಂದ ಎದುರಾಳಿ ತಂಡಗಳ ಎದೆಯಲ್ಲಿ ಶುರುವಾಗುತ್ತೆ ಭಯ!

ಟ್ರಯಲ್ ಗಾಗಿ ಈ ಷರತ್ತುಗಳು ಪಾಲಿಸಬೇಕಾಗಲಿದೆ
ಡೆಂಗ್ಯೂ ರೋಗಿಯ ವಯಸ್ಸು 18 ವರ್ಷಕ್ಕಿಂತ ಮೇಲ್ಪಟ್ಟಿರಬೇಕು. ರೋಗಿಗೆ 48 ಗಂಟೆಗಳ ಮುಂಚಿತವಾಗಿ ಡೆಂಗ್ಯೂ ದೃಢಪಟ್ಟಿರಬೇಕು. ಪ್ರಯೋಗಕ್ಕಾಗಿ ರೋಗಿಯನ್ನು ಎಂಟು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಿಸಲಾಗುತ್ತದೆ ಮತ್ತು ಏಳು ದಿನಗಳವರೆಗೆ ಒಂದು ಡೋಸ್ ಔಷಧವನ್ನು ನೀಡಲಾಗುತ್ತದೆ. ಚಿಕಿತ್ಸೆಯ ನಂತರ 17 ದಿನಗಳವರೆಗೆ ರೋಗಿಯನ್ನು ಮೇಲ್ವಿಚಾರಣೆಯಲ್ಲಿ ಇರಿಸಲಾಗುತ್ತದೆ.

ಇದನ್ನೂ ಓದಿ-Astrology: ಬುಧವಾರದಂದು ನೀವು ಮಾಡುವ ಈ ಕೆಲಸದಿಂದ ಆರ್ಥಿಕ ನಷ್ಟ ಸಂಭವಿಸಬಹುದು!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News