ಯುಪಿಯಲ್ಲಿ ಹೀನಾಯ ಸೋಲು: ಬಿಎಸ್‌ಪಿ ನಾಯಕರ ವಿರುದ್ಧ ಮಾಯಾವತಿ ಶಿಸ್ತುಕ್ರಮ!

ಮಾಯಾವತಿ ಅವರು ಶನಿವಾರ ಟ್ವೀಟ್‌ನಲ್ಲಿ ಮಾಧ್ಯಮಗಳು ತಮ್ಮ ಮೇಲಧಿಕಾರಿಗಳ ನಿರ್ದೇಶನದಂತೆ ಯುಪಿ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಕೆಲಸ ಮಾಡಿವೆ ಎಂದು ಆರೋಪಿಸಿದ್ದಾರೆ.

Written by - Zee Kannada News Desk | Last Updated : Mar 12, 2022, 04:14 PM IST
  • ಯುಪಿ ಚುನಾವಣೆಯ ಸೋಲಿನ ನಂತರ ಮಾಧ್ಯಮಗಳ ವಿರುದ್ಧ ಮಾಯಾವತಿ ಆಕ್ರೋಶ
  • ಬಿಎಸ್‌ಪಿಯ ಯಾವುದೇ ವಕ್ತಾರರು ಟಿವಿ ಚರ್ಚೆಯಲ್ಲಿ ಭಾಗಿಯಾಗುವುದಿಲ್ಲವೆಂದು ಘೋಷಣೆ
  • ಮುಸ್ಲಿಂ-ದಲಿತ ಮತಗಳು ಬಂದಿದ್ದರೆ ಫಲಿತಾಂಶವೇ ಬೇರೆಯಾಗುತ್ತಿತ್ತು ಎಂದ ಮಾಯಾವತಿ
ಯುಪಿಯಲ್ಲಿ ಹೀನಾಯ ಸೋಲು: ಬಿಎಸ್‌ಪಿ ನಾಯಕರ ವಿರುದ್ಧ ಮಾಯಾವತಿ ಶಿಸ್ತುಕ್ರಮ! title=
ಮಾಧ್ಯಮಗಳ ವಿರುದ್ಧ ಮಾಯಾವತಿ ಆಕ್ರೋಶ

ಲಕ್ನೋ: ‘ಪಂಚ’ ರಾಜ್ಯಗಳ ಚುನಾವಣೆ(5 State Election 2022)ಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಭಾರಿಸಿದೆ. ಉತ್ತರಪ್ರದೇಶದಲ್ಲಿ ಪ್ರಧಾನಿ ಮೋದಿ-ಸಿಎಂ ಯೋಗಿ ಆದಿತ್ಯನಾಥ್(Yogi Adityanath) ಕಮಾಲ್ ಮಾಡಿದ್ದಾರೆ. ಪರಿಣಾಮ 402 ಕ್ಷೇತ್ರಗಳ ಪೈಕಿ ಬಿಜೆಪಿ 255+ ಸ್ಥಾನಗಳನ್ನು ಬಾಚಿಕೊಂಡಿದೆ. ಕೇಸರಿ ಪಡೆ ಎದುರು ಕಾಂಗ್ರೆಸ್ ಪಕ್ಷ ಧೂಳಿಪಟವಾಗಿದೆ. ಬಿಎಸ್‌ಪಿಯಂತೂ ಅತ್ಯಂತ ಕಳಪೆ ಸಾಧನೆ ಮಾಡಿದ್ದು, ಕೇವಲ 1 ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿದೆ.

ಬಿಎಸ್‌ಪಿ ವರಿಷ್ಠೆ ಮಾಯಾವತಿ(Mayawati) ಅವರು ಚುನಾವಣಾ ಫಲಿತಾಂಶಕ್ಕೆ ಮುನ್ನ ಸರ್ಕಾರ ರಚಿಸುವುದಾಗಿ ಹೇಳಿಕೊಂಡಿದ್ದರು. ಆದರೆ ಫಲಿತಾಂಶ ಬಂದ ನಂತರ ಪಕ್ಷದ ಖಾತೆ ತೆರೆಯುವುದೂ ಕಷ್ಟವಾಯಿತು. ಇದಾದ ಬಳಿಕ ಸಿಟ್ಟಿಗೆದ್ದ ಮಾಯಾವತಿ ಮಾಧ್ಯಮಗಳ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ಟಿವಿ ಚರ್ಚೆಯಲ್ಲಿ ಪಕ್ಷದ ಯಾವುದೇ ವಕ್ತಾರರು ಭಾಗವಹಿಸುವುದಿಲ್ಲವೆಂದು ಅವರು ಘೋಷಿಸಿದ್ದಾರೆ.

ಇದನ್ನೂ ಓದಿ: ನಿಮ್ಮ Aadhar ಕಳೆದುಹೋಗಿದೆಯೇ? ಅದನ್ನ Enrollment ID ಇಲ್ಲದೆಯೇ ಡೌನ್‌ಲೋಡ್ ಮಾಡಬಹುದು!

ಪಕ್ಷದ ವಕ್ತಾರರಿಗೆ ಹೊಸ ಜವಾಬ್ದಾರಿ  

ಮಾಯಾವತಿ ಅವರು ಶನಿವಾರ ಟ್ವೀಟ್‌ನಲ್ಲಿ ಮಾಧ್ಯಮಗಳು ತಮ್ಮ ಮೇಲಧಿಕಾರಿಗಳ ನಿರ್ದೇಶನದಂತೆ ಯುಪಿ ವಿಧಾನಸಭಾ ಸಾರ್ವತ್ರಿಕ ಚುನಾವಣೆ(Uttar Pradesh Election 2022)ಯ ಸಮಯದಲ್ಲಿ ಕೆಲಸ ಮಾಡಿವೆ. ಜಾತಿವಾದಿ ಮತ್ತು ದ್ವೇಷದ ಧೋರಣೆ ಅನುಸರಿಸುವ ಮೂಲಕ ಅಂಬೇಡ್ಕರ್ವಾದಿ ಬಿಎಸ್‌ಪಿ ಚಳವಳಿಗೆ ಹಾನಿ ಮಾಡುವ ಕೆಲಸ ಮಾಡಿವೆ. ತಮ್ಮ ಬಾಸ್ ಗಳ ನಿರ್ದೇಶನದಂತೆ ಮೀಡಿಯಾಗಳ ಕೆಲಸ ಮಾಡಿವೆ ಎಂದು ಸಿಟ್ಟು ಹೊರಹಾಕಿದ್ದಾರೆ. ಪಕ್ಷ ಸೋಲು ಕಂಡ ಬಳಿಕ ಬಿಎಸ್‌ಪಿ ವಕ್ತಾರರಿಗೆ ಹೊಸ ಜವಾಬ್ದಾರಿ ನೀಡಲಾಗುವುದು ಅಂತಾ ಹೇಳಿದ್ದಾರೆ.

ಪಕ್ಷದ ವಕ್ತಾರರು ಟಿವಿ ಚರ್ಚೆಯಲ್ಲಿ ಭಾಗವಹಿಸಲ್ಲ 

ಪಕ್ಷದ ವಕ್ತಾರರಾದ ಸುಧೀಂದ್ರ ಭದೌರಿಯಾ, ಧರಂವೀರ್ ಚೌಧರಿ, ಡಾ.ಎಂ.ಎಚ್.ಖಾನ್, ಫೈಜಾನ್ ಖಾನ್ ಮತ್ತು ಸೀಮಾ ಕುಶ್ವಾಹಾ ಇನ್ನು ಮುಂದೆ ಟಿವಿ ಚರ್ಚೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಮಾಯಾವತಿ(Mayawati) ಹೇಳಿದ್ದಾರೆ. ಬಿಎಸ್‌ಪಿ ಹೀನಾಯ ಸೋಲು ಕಂಡಿದ್ದಕ್ಕೆ ಮಾಯಾವತಿಯರು ಮಾಧ‍್ಯಮಗಳ ಮೇಲೆ ಗೂಬೆ ಕೂರಿಸುವ ರೀತಿ ಮಾತನಾಡಿದ್ದಾರೆ.

ಮುಸ್ಲಿಂ-ದಲಿತ ಮತಗಳು ಬಂದಿದ್ದರೆ ಫಲಿತಾಂಶವೇ ಬೇರೆಯಾಗುತ್ತಿತ್ತು!

ಇದಕ್ಕೂ ಮೊದಲು ಶುಕ್ರವಾರ ಮಾಯಾವತಿಯರು ತಮ್ಮ ಪಕ್ಷದ ಕಾರ್ಯಕ್ಷಮತೆಯ ಬಗ್ಗೆ ಮಾತನಾಡಿದ್ದರು. ಈ ಬಾರಿ ಮುಸ್ಲಿಂ ಸಮುದಾಯವು ಬಿಎಸ್‌ಪಿಯಲ್ಲೇ ಉಳಿದಿದೆ, ಆದರೆ ಅವರ ಸಂಪೂರ್ಣ ಮತ ಸಮಾಜವಾದಿ ಪಕ್ಷದತ್ತ ಹೊರಳಿದೆ. ಈ ಬಾರಿ ಬಿಎಸ್‌ಪಿ ಭಾರಿ ನಷ್ಟ ಅನುಭವಿಸಿದೆ. ಮುಸ್ಲಿಂ-ದಲಿತ ಮತಗಳು ಬಂದಿದ್ದರೆ ಫಲಿತಾಂಶವೇ ಬೇರೆಯಾಗುತ್ತಿತ್ತು. ಯಶಸ್ಸು ಮುಂದೊಂದು ದಿನ ನಮ್ಮ ಪಾದಗಳಿಗೆ ಮುತ್ತಿಕ್ಕುತ್ತದೆ ಎಂದು ನಾವು ನಂಬುತ್ತೇವೆ. ಬಿಎಸ್ಪಿ ಮಾತ್ರ ಬಿಜೆಪಿಯ ಗೆಲುವಿನ ಆಟಕ್ಕೆ ಬ್ರೇಕ್ ಹಾಕಲಿದೆ. ಬಿಎಸ್‌ಪಿ(BSP) ಶ್ರಮಕ್ಕೆ ತಕ್ಕ ಫಲ ಸಿಕ್ಕಿಲ್ಲವೆಂದು ಬೇಸರ ವ್ಯಕ್ತಪಡಿಸಿರುವ ಅವರು, ನಾವು ಹೋರಾಟ ಮಾಡುತ್ತಿದ್ದೇವೆ, ಆ ಹೋರಾಟಕ್ಕೆ ಫಲ ಸಿಗಲಿದೆ ಅಂತಾ ಹೇಳಿದ್ದಾರೆ.  ಮಾಯಾವತಿ ಅವರು ಇದೇ ವೇಳೆ ಸಾರ್ವಜನಿಕರು, ಕಾರ್ಯಕರ್ತರು ಮತ್ತು ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: FD Rules : FD ಗೆ ಸಂಬಂಧಿಸಿದ ನಿಯಮಗಲ್ಲಿ ಭಾರಿ ಬದಲಾವಣೆ ಮಾಡಿದ RBI

ಯುಪಿಯಲ್ಲಿ ಬಿಎಸ್‌ಪಿಗೆ ಹೀನಾಯ ಸೋಲು  

ಗುರುವಾರ ಪ್ರಕಟವಾದ ಚುನಾವಣಾ ಫಲಿತಾಂಶ(Elections Result 2022)ದಲ್ಲಿ ಬಿಜೆಪಿ ಮೈತ್ರಿಕೂಟ 273 ಸ್ಥಾನಗಳನ್ನು ಗೆದ್ದಿದೆ. 2ನೇ ಸ್ಥಾನಕ್ಕೆ ತಲುಪಿರುವ ಎಸ್‌ಪಿ 125 ಸ್ಥಾನಗಳನ್ನು ಗೆದ್ದಿದ್ದರೆ, ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಸಾಧನೆ ಹದಗೆಟ್ಟಿದೆ. ಬಿಎಸ್‌ಪಿ ಕೇವಲ 1 ಸ್ಥಾನದಲ್ಲಿ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News