ಜಾರ್ಖಂಡ್ ನಲ್ಲಿ 6 ಜನರನ್ನೊಳಗೊಂಡ ಕುಟುಂಬದಿಂದ ಸಾಮೂಹಿಕ ಆತ್ಮಹತ್ಯೆ

       

Last Updated : Jul 15, 2018, 12:36 PM IST
ಜಾರ್ಖಂಡ್ ನಲ್ಲಿ 6 ಜನರನ್ನೊಳಗೊಂಡ ಕುಟುಂಬದಿಂದ ಸಾಮೂಹಿಕ ಆತ್ಮಹತ್ಯೆ  title=

ನವದೆಹಲಿ: ಭಾನುವಾರದಂದು  ಜಾರ್ಖಂಡ್ನ ಹಝಾರಿಬಾಗ್ ನಲ್ಲಿ ಆರು ಕುಟುಂಬ ಸದಸ್ಯರು ಮೃತಪಟ್ಟಿದ್ದಾರೆ. ಸತ್ತವರಲ್ಲಿ ಇಬ್ಬರು ಹೆಣ್ಣುಮಕ್ಕಳು, ಇಬ್ಬರು ವ್ಯಕ್ತಿಗಳು ಮತ್ತು ಇಬ್ಬರು ಮಕ್ಕಳಿದ್ದಾರೆ. ಸಾಲದ ಒತ್ತಡದಿಂದ ಮನನೊಂದು ಇಡೀ ಕುಟುಂಬವು ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಡೆತ್ ನೋಟ್ ನಿಂದ ತಿಳಿದು ಬಂದಿದೆ.

ಈ ಮರ್ವಾಡಿಯ ಐದು ಸದಸ್ಯರು ಆತ್ಮಹತ್ಯೆ ಮಾಡಿಕೊಂಡರೆ  ಉಳಿದ ಆರನೇ ವ್ಯಕ್ತಿ ಮನೆಯ ಛಾವಣಿಯ ಮೇಲೆ ಹಾರಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.ಮೃತಪಟ್ಟವರಲ್ಲಿ 70 ವರ್ಷ ವಯಸ್ಸಿನ ಮಹಾವೀರ್ ಮಹೇಶ್ವರಿ, ಅವರ ಪತ್ನಿ 65 ವರ್ಷದ ಕಿರಣ್ ಮಹೇಶ್ವರಿ, ಅವರ ಮಗ 40 ವರ್ಷದ ನರೇಶ್ ಅಗರ್ವಾಲ್, ಹೆಂಡತಿ 38 ವರ್ಷದ ಪ್ರಿತಿ ಅಗರ್ವಾಲ್, ಅವರ ಇಬ್ಬರು ಮಕ್ಕಳು ಅಮನ್ ಮತ್ತು 6 ವರ್ಷದ ಅಂಜಲಿ ಎಂದು ಗುರುತಿಸಲಾಗಿದೆ.

ಈಗಾಗಲೇ ಪೊಲೀಸರು ಆತ್ಮಹತ್ಯೆಯ ಸ್ಥಳದಿಂದ ಡೆತ್ ನೋಟ್ ಪಡೆದು  ಇನ್ನು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಒಣ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಈ ಕುಟುಂಬವು ಸಾಲದ ಹೊರೆಯಿಂದ ಬೇಸತ್ತಿತ್ತು ಎನ್ನಲಾಗಿದೆ.

Trending News