ಇಂದು ಎರಡನೇ ಬಾರಿಗೆ ಹರ್ಯಾಣ ಸಿಎಂ ಆಗಿ ಖಟ್ಟರ್ ಪ್ರಮಾಣ ವಚನ

ಮನೋಹರ್ ಲಾಲ್ ಖಟ್ಟರ್ ಅವರು ಭಾನುವಾರ ಮಧ್ಯಾಹ್ನ ಹರಿಯಾಣದ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜನ್ನಾಯಕ್ ಜನತಾ ಪಕ್ಷದ (ಜೆಜೆಪಿ) ದುಶ್ಯಂತ್ ಚೌತಲಾ ಅವರು ಉಪ ಮುಖ್ಯಮಂತ್ರಿಯಾಗಲಿದ್ದಾರೆ.

Last Updated : Oct 27, 2019, 11:38 AM IST
ಇಂದು ಎರಡನೇ ಬಾರಿಗೆ ಹರ್ಯಾಣ ಸಿಎಂ ಆಗಿ ಖಟ್ಟರ್ ಪ್ರಮಾಣ ವಚನ  title=
file photo

ನವದೆಹಲಿ: ಮನೋಹರ್ ಲಾಲ್ ಖಟ್ಟರ್ ಅವರು ಭಾನುವಾರ ಮಧ್ಯಾಹ್ನ ಹರಿಯಾಣದ ಮುಖ್ಯಮಂತ್ರಿಯಾಗಿ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಜನ್ನಾಯಕ್ ಜನತಾ ಪಕ್ಷದ (ಜೆಜೆಪಿ) ದುಶ್ಯಂತ್ ಚೌತಲಾ ಅವರು ಉಪ ಮುಖ್ಯಮಂತ್ರಿಯಾಗಲಿದ್ದಾರೆ.

ಪ್ರಮಾಣವಚನ ಸಮಾರಂಭವು ದೀಪಾವಳಿಯ ದಿನವಾದ ಭಾನುವಾರ ಮಧ್ಯಾಹ್ನ 2.15 ಕ್ಕೆ ಹರಿಯಾಣ ರಾಜ್ ಭವನದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ನೆರೆಯ ರಾಜ್ಯಗಳ ಮುಖ್ಯಮಂತ್ರಿಗಳಲ್ಲದೆ ಹಿರಿಯ ಬಿಜೆಪಿ ಮುಖಂಡರು ಭಾಗವಹಿಸುವ ಸಾಧ್ಯತೆ ಇದೆ.'ನಾವು ಮಧ್ಯಾಹ್ನ 1.15 ಕ್ಕೆ ಸಭೆ ಸೇರುತ್ತೇವೆ ಮತ್ತು ಮಧ್ಯಾಹ್ನ 2.15 ಕ್ಕೆ ಪ್ರಮಾಣವಚನ ಸ್ವೀಕರಿಸಲಾಗುವುದು. ದುಶ್ಯಂತ್ ಚೌತಲಾ ಅವರನ್ನು ಇತರರ ಜೊತೆಗೆ ಸೇರಿಸಿಕೊಳ್ಳಲಾಗುತ್ತಿದೆ' ಎಂದು ಮುಖ್ಯಮಂತ್ರಿ-ಚುನಾಯಿತ ಮನೋಹರ್ ಲಾಲ್ ಖಟ್ಟರ್ ಎಂದು ಹೇಳಿದರು. ಇದೇ ವೇಳೆ ಅವರು ಸಂಭಾವ್ಯ ಕ್ಯಾಬಿನೆಟ್ ಮಂತ್ರಿಗಳ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದರು.

ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರ ಸಮ್ಮುಖದಲ್ಲಿ ಖಟ್ಟರ್ ಅವರನ್ನು ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಯಿತು. ಈಗ ಖಟ್ಟರ್ ಅವರು 53 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಂಗ್ರೆಸೇತರ ಮುಖ್ಯಮಂತ್ರಿಯೊಬ್ಬರು ಎರಡನೇ ಬಾರಿಗೆ ಸಿಎಂ ಗದ್ದುಗೆಗೆ ಏರಿದ ಖ್ಯಾತಿಯನ್ನು ಹೊಂದಿದ್ದಾರೆ.

ಭಾರತೀಯ ರಾಷ್ಟ್ರೀಯ ಲೋಕದಳದ (ಐಎನ್‌ಎಲ್‌ಡಿ) ಒಂದು ಅಂಗವಾದ ಜನ್ನಾಯಕ್ ಜನತಾ ಪಾರ್ಟಿ (ಜೆಜೆಪಿ) ಯೊಂದಿಗೆ  ಬಿಜೆಪಿ ಮೈತ್ರಿ ಮಾಡಿಕೊಂಡು ಈಗ ಸರ್ಕಾರ ರಚಿಸಲು ಮುಂದಾಗಿದೆ. ಗುರುವಾರ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ, ಆಡಳಿತಾರೂಢ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು ಆದರೆ ಬಹುಮತ ಪಡೆಯಲು ಆರು ಸ್ಥಾನಗಳ ಕೊರತೆಯಾಯಿತು. 
 

Trending News