'ಮ್ಯಾನ್​ VS ವೈಲ್ಡ್' ನಲ್ಲಿ ಪ್ರಧಾನಿ ಮೋದಿ! ಇಂದು ರಾತ್ರಿ ಡಿಸ್ಕವರಿ ಚಾನಲ್‍ನಲ್ಲಿ ಕಾರ್ಯಕ್ರಮ ಪ್ರಸಾರ!

ಉತ್ತರಾಖಂಡದ ಜಿಮ್ ಕಾರ್ಬೆಟ್ ಮತ್ತು ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನಗಳಲ್ಲಿ ಈ ಕಾರ್ಯಕ್ರಮದ ಚಿತ್ರೀಕರಣ ನಡೆಸಲಾಗಿದ್ದು, ಪ್ರಧಾನಿ ಮೋದಿ ಇದರಲ್ಲಿ ಪಾಲ್ಗೊಂಡಿದ್ದಾರೆ. 

Last Updated : Aug 12, 2019, 10:48 AM IST
'ಮ್ಯಾನ್​ VS ವೈಲ್ಡ್' ನಲ್ಲಿ ಪ್ರಧಾನಿ ಮೋದಿ! ಇಂದು ರಾತ್ರಿ ಡಿಸ್ಕವರಿ ಚಾನಲ್‍ನಲ್ಲಿ ಕಾರ್ಯಕ್ರಮ ಪ್ರಸಾರ!  title=

ನವದೆಹಲಿ: ಸಾಹಸಿಗ ಎಡ್ವರ್ಡ್ ಮೈಕಲ್ ಗ್ರಿಲ್ಸ್ ನಡೆಸಿಕೊಡುವ 'ಮ್ಯಾನ್​ VS ವೈಲ್ಡ್' ಕ್ರಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿರುವ ವಿಶೇಷ ಸಂಚಿಕೆ ಸೋಮವಾರ ರಾತ್ರಿ 9 ಗಂಟೆಗೆ ಡಿಸ್ಕವರಿ ಚಾನೆಲ್ ನಲ್ಲಿ ಪ್ರಸಾರವಾಗಲಿದೆ.

ಉತ್ತರಾಖಂಡದ ಜಿಮ್ ಕಾರ್ಬೆಟ್ ಮತ್ತು ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನಗಳಲ್ಲಿ ಈ ಕಾರ್ಯಕ್ರಮದ ಚಿತ್ರೀಕರಣ ನಡೆಸಲಾಗಿದ್ದು, ಪ್ರಧಾನಿ ಮೋದಿ ಇದರಲ್ಲಿ ಪಾಲ್ಗೊಂಡಿದ್ದಾರೆ. ಕೇಂದ್ರ ಪ್ರವಾಸೋದ್ಯಮ ಇಲಾಖೆಯು ಈ ಕಾರ್ಯಕ್ರಮದ ಟೀಸರ್ ಅನ್ನು ತನ್ನ 'ಇನ್​ಕ್ರೆಡಿಬಲ್ ಇಂಡಿಯಾ' ವೆಬ್​ಸೈಟ್​ನಲ್ಲಿ ಬಿಡುಗಡೆ ಮಾಡಿದ್ದು, ಇದರಲ್ಲಿ ದಟ್ಟ ಅರಣ್ಯದಲ್ಲಿ ಪ್ರಧಾನಿ ಪಯಣದ ಕೆಲವು ದೃಶ್ಯಗಳನ್ನು ಹಂಚಿಕೊಳ್ಳಲಾಗಿತ್ತು. ಆದರೆ ಇಂದು ರಾತ್ರಿ ಪೂರ್ಣ ಸಂಚಿಕೆ ಪ್ರಸಾರವಾಗಲಿದ್ದು, ಪ್ರಧಾನಿ ಮೋದಿ ಅವರು ಗ್ರಿಲ್ಸ್ ಜೊತೆ ಕಾಡಿನೊಳಗೆ ಓಡಾಡಿರುವ ಮತ್ತು ವನ್ಯ ಜೀವಿ ಸಂರಕ್ಷಣೆ ಬಗ್ಗೆ ಮಾತನಾಡಿದ್ದಾರೆ. 

ಈ ಕಾರ್ಯಕ್ರಮ ಡಿಸ್ಕವರಿಯ 12 ಚಾನೆಲ್ ಗಳಲ್ಲಿ ಪ್ರಸಾರವಾಗಲಿದ್ದು, ಭಾರತದಲ್ಲಿ ಮಾತ್ರವಲ್ಲೆಡೆ ಇತರ 180 ರಾಷ್ಟ್ರಗಳಲ್ಲಿ ಪ್ರಸಾರವಾಗಲಿದೆ. 

ಡಿಸ್ಕವರಿ ಚಾನೆಲ್ ನಲ್ಲಿ ಮಾತ್ರವಲ್ಲದೆ, ಪ್ರಧಾನಮಂತ್ರಿ ಕಾರ್ಯಾಲಯದ ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿಯೂ ಸಹ ಈ ಕಾರ್ಯಕ್ರಮ ಪ್ರಸಾರವಾಗುವ ಸಾಧ್ಯತೆಯಿದೆ. ಆದರೆ ಈ ಬಗ್ಗೆ ಯಾವುದೇ ಖಚಿತ ಮಾಹಿತಿ ದೊರೆತಿಲ್ಲ. 

Trending News