ನಾಳೆ ದೆಹಲಿಯಲ್ಲಿ ಮಹಾತ್ಮ ಗಾಂಧಿ ಹೃದಯ ಬಡಿತ ಮರುಸೃಷ್ಟಿ ಉದ್ಘಾಟನೆ

1934ರಲ್ಲಿ ತೆಗೆದ ಮಹಾತ್ಮಾ ಗಾಂಧಿ ಇಸಿಜಿ ವರದಿಯನ್ನು ಆಧರಿಸಿ ಹೃದಯ ಬಡಿತವನ್ನು ಮರುಸೃಷ್ಟಿ ಮಾಡಲಾಗಿದೆ.

Last Updated : Oct 1, 2018, 09:03 PM IST
ನಾಳೆ ದೆಹಲಿಯಲ್ಲಿ ಮಹಾತ್ಮ ಗಾಂಧಿ ಹೃದಯ ಬಡಿತ ಮರುಸೃಷ್ಟಿ ಉದ್ಘಾಟನೆ title=

ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಹೃದಯ ಬಡಿತವನ್ನು ಮರುಸೃಷ್ಟಿ ಮಾಡಲಾಗಿದ್ದು, ದೆಹಲಿಯ ಗಾಂಧಿ ನ್ಯಾಷನಲ್ ಮ್ಯೂಸಿಯಂನಲ್ಲಿ ನಾಳೆಯಿಂದ ಕೇಳಬಹುದು.

1934ರಲ್ಲಿ ತೆಗೆದ ಮಹಾತ್ಮಾ ಗಾಂಧಿ ಇಸಿಜಿ ವರದಿಯನ್ನು ಆಧರಿಸಿ ಹೃದಯ ಬಡಿತವನ್ನು ಮರುಸೃಷ್ಟಿ ಮಾಡಲಾಗಿದ್ದು, ಗಾಂಧಿ ಜಯಂತಿ(ಅಕ್ಟೋಬರ್ 2)ಯಂದು ಈ ವ್ಯವಸ್ಥೆ ಉದ್ಘಾಟನೆಯಾಗಲಿದೆ ಎಂದು ಮ್ಯೂಸಿಯಂ ನಿರ್ದೇಶಕ ಎ. ಅಣ್ಣಾಮಲೈ ಹೇಳಿದ್ದಾರೆ.

ಗಾಂಧೀಜಿಯವರು ಉಪವಾಸ ಸತ್ಯಾಗ್ರಹ ಕೈಗೊಂಡ ಸಂದರ್ಭದಲ್ಲಿ ಅವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು. ಆ ಸಂದರ್ಭದಲ್ಲಿ ಡಾ.ಜೀವ್ ರಾಮ್ ಮೆಹ್ತಾ, ಡಾ.ಬಿ.ಸಿ.ರಾಯ್ ಎಂಬ ವೈದ್ಯರು ಗಾಂಧೀಜಿಯವರ ಆರೋಗ್ಯ ತಪಾಸಣೆ ನಡೆಸುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು AIIMS ಸದ್ಯದಲ್ಲೇ ಪ್ರಕಟಿಸಲಿದೆ ಎಂದಿದ್ದಾರೆ.

Trending News