Maharashtra News: ಮುಂಬೈ ಎನ್‌ಸಿಬಿ (NCB) ವಲಯ ನಿರ್ದೇಶಕ ಸಮೀರ್ ವಾಂಖೆಡೆ (Sameer Wankhede) ಅವರ ಪತ್ನಿ ಕ್ರಾಂತಿ ರೆಡೆಕರ್ ವಾಂಖೆಡೆ (Kranti Redekar Wankhede) ತಮ್ಮ ಪತಿ ಸಮೀರ್ ಮತ್ತು ಕುಟುಂಬ ಸದಸ್ಯರ ಸುರಕ್ಷತೆ ಅಪಾಯದಲ್ಲಿದೆ ಎಂದು ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಮೂರು ಮಂದಿ ಮನೆಯ ರೆಕೀ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಕುರಿತು ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುತ್ತೇವೆ ಮತ್ತು ತಮ್ಮ ಕುಟುಂಬಕ್ಕೆ ಭದ್ರತೆ ಸಿಗಬೇಕು ಎಂದು ಕ್ರಾಂತಿ ರೆಡೆಕರ್ ಆಗ್ರಹಿಸಿದ್ದಾರೆ.
ಕ್ರೂಜ್ ಡ್ರಗ್ಸ್ ಪ್ರಕರಣ ಬೆಳಕಿಗೆ ಬಂದಾಗಿನಿಂದಲೂ ಸಮೀರ್ ವಾಂಖೆಡೆ ಸುದ್ದಿಯಲ್ಲಿದ್ದಾರೆ. ಈ ಪ್ರಕರಣದಲ್ಲಿ ಶಾರುಖ್ ಖಾನ್ (Sharukh Khan) ಪುತ್ರ ಆರ್ಯನ್ ಖಾನ್ (Aryan Khan) ಸೇರಿದಂತೆ ಹಲವರನ್ನು ಬಂಧಿಸಲಾಗಿದ್ದು, ಬಳಿಕ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ (Nawab Malik) ಸಮೀರ್ ವಾಂಖೆಡೆ ವಿರುದ್ಧ ನಿರಂತರವಾಗಿ ಹಲವು ಆರೋಪಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಸಮೀರ್ ವಾಂಖೆಡೆ ಮತ್ತು ಅವರ ಕುಟುಂಬ ಮುಸ್ಲಿಮರು ಎಂದು ಹೇಳಿಕೊಂಡಿದ್ದ ಅವರು, ಸರ್ಕಾರಿ ನೌಕರಿ ಪಡೆಯಲು ನಕಲಿ ಪ್ರಮಾಣಪತ್ರ ಸಲ್ಲಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಆದರೆ, ನವಾಬ್ ಮಲಿಕ್ ಅವರ ಈ ಆರೋಪಗಳನ್ನು ಸಮೀರ್ ವಾಂಖೆಡೆ ಮತ್ತು ಅವರ ಕುಟುಂಬವು ನಿರಾಕರಿಸಿದೆ.
ಇದನ್ನೂ ಓದಿ-Aryan Khan Drugs Case: 22 ದಿನಗಳ ಬಳಿಕ ಆರ್ಯನ್ ಖಾನ್ ಇಂದು ಜೈಲಿನಿಂದ ಬಿಡುಗಡೆ
2017 ರಲ್ಲಿ ಸಮೀರ್ ವಾಂಖೆಡೆ ಅವರನ್ನು ವಿವಾಹವಾದ ಕ್ರಾಂತಿ ರೆಡೆಕರ್ ಅವರು ಇತ್ತೀಚೆಗೆ ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರ ಸರ್ಕಾರದ ಸಚಿವ ನವಾಬ್ ಮಲಿಕ್ ಅವರ ಆರೋಪಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿ, ಮಲಿಕ್ ತಮ್ಮ ಪತಿಯ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಮೀರ್ ಕುಟುಂಬದ ಬೆಂಬಲಕ್ಕೆ ಇಳಿದ ರಾಮದಾಸ್ ಅಠವಲೆ
ಇನ್ನೊಂದೆಡೆ, NCB ಅಧಿಕಾರಿ ಸಮೀರ್ ವಾಂಖೆಡೆ ಅವರನ್ನು ಬೆಂಬಲಕ್ಕೆ ಇಳಿದಿರುವ ಕೇಂದ್ರ ಸಚಿವ ರಾಮದಾಸ್ ಅಠವಲೆ (Ramdas Athawale), ''ಸಮೀರ್ ವಾಂಖೆಡೆ ಮತ್ತು ಅವರ ಕುಟುಂಬದ ಅವಮಾನಿಸುವ ಸಂಚು ನಿಲ್ಲಿಸುವಂತೆ ನಾನು ನವಾಬ್ ಮಲಿಕ್ (Nawab Malik) ಅವರನ್ನು ಕೇಳಲು ಬಯಸುತ್ತೇನೆ, ಸಮೀರ್ ಮುಸ್ಲಿಂ ಎಂದು ಹೇಳುತ್ತಿರುವ ಅವರು ಮುಸ್ಲಿಮರ ಮೇಲೆ ಆರೋಪ ಏಕೆ ಮಾಡುತ್ತಿದ್ದಾರೆ? ರಿಪಬ್ಲಿಕನ್ ಪಕ್ಷವು ಸಮೀರ್ ವಾಂಖೆಡೆ ಅವರ ಜೊತೆ ನಿಂತಿದೆ, ಸಮೀರ್‌ಗೆ ಯಾವುದೇ ಹಾನಿಯಾಗುವುದಿಲ್ಲ" ಎಂದು ಅಠವಲೆ ಹೇಳಿದ್ದಾರೆ.
ಇದನ್ನೂ ಓದಿ-Aryan Khan get Bail : ಆರ್ಯನ್ ಖಾನ್ ಗೆ ಜಾಮೀನು ಕೊಡಿಸಿದ ವಕೀಲ ಮುಕುಲ್ ರೋಹಟಗಿ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ