Earthquake In Andaman Nicobar: ಅಂಡಮಾನ್- ನಿಕೋಬಾರ್‌ನಲ್ಲಿ 5 ತೀವ್ರತೆಯ ಭೂಕಂಪ

Earthquake In Andaman Nicobar: ಬುಧವಾರ ಮುಂಜಾನೆ 5:40 ರ ಸುಮಾರಿಗೆ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಲ್ಲಿ ಸಂಭವಿಸಿದ 5.0 ತೀವ್ರತೆಯ ಭೂಕಂಪವು ನಿಕೋಬಾರ್ ದ್ವೀಪಗಳನ್ನು ತಲ್ಲಣಗೊಳಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (NCS) ವರದಿ ಮಾಡಿದೆ.

Written by - Yashaswini V | Last Updated : Aug 2, 2023, 12:17 PM IST
  • ನಿಕೋಬಾರ್ ದ್ವೀಪಗಳು ಆಗಸ್ಟ್ 2 ರಂದು 5.0 ತೀವ್ರತೆಯ ಭೂಕಂಪ ಸಂಭವಿಸಿದೆ.
  • ಇಂದು ಬೆಳಿಗ್ಗೆ 5:40 ರ ಸುಮಾರಿಗೆ ಭೂಕಂಪ ಸಂಭವಿಸಿದೆ.
  • ಈ ಕುರಿತಂತೆ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದೆ.
Earthquake In Andaman Nicobar: ಅಂಡಮಾನ್- ನಿಕೋಬಾರ್‌ನಲ್ಲಿ  5 ತೀವ್ರತೆಯ ಭೂಕಂಪ title=

Earthquake In Andaman Nicobar: ಅಂಡಮಾನ್ ಮತ್ತು ನಿಕೊಬಾರ್ ದ್ವೀಪದಲ್ಲಿ ಇಂದು ಮುಂಜಾನೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆ 5.0  ಎಂದು ದಾಖಲಾಗಿದೆ. 

ಬುಧವಾರ ಮುಂಜಾನೆ 5:40 ರ ಸುಮಾರಿಗೆ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಲ್ಲಿ ಸಂಭವಿಸಿದ 5.0 ತೀವ್ರತೆಯ ಭೂಕಂಪವು ನಿಕೋಬಾರ್ ದ್ವೀಪಗಳನ್ನು ತಲ್ಲಣಗೊಳಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (NCS) ವರದಿ ಮಾಡಿದೆ.

ಇದನ್ನೂ ಓದಿ- ಓಣಂ ಪ್ರಯುಕ್ತ ಕೊಚುವೇಲಿ-ಬೆಂಗಳೂರು ನಡುವೆ ವಿಶೇಷ ರೈಲು ಆರಂಭ: ದಕ್ಷಿಣ ರೈಲ್ವೆ ನಿರ್ಧಾರ

ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ (NCS), ನಿಕೋಬಾರ್ ದ್ವೀಪದ ಅಕ್ಷಾಂಶ: 9.32 ಮತ್ತು ರೇಖಾಂಶ: 94.03ರ ನಡುವೆ 10 ಕಿಮೀ ಆಳದಲ್ಲಿ ಭೂಕಂಪದ ಅಧಿಕೇಂದ್ರವು ಪತ್ತೆಯಾಗಿದೆ ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದೆ. ಇನ್ನೂ ಈ ಗಃಟನೆಯಲ್ಲಿ ಯಾವುದೇ ರೀತಿಯ ಪ್ರಾಣ ಹಾನಿ, ಆಸ್ತಿ ಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. 

ಇದನ್ನೂ ಓದಿ- Rain Alert: ಈ ಭಾಗಗಳಲ್ಲಿ ಧಾರಾಕಾರ ಮಳೆಯ ಮುನ್ಸೂಚನೆ-ಹಲವೆಡೆ ಸಿಡಿಲು ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ

ಐದು ದಿನಗಳಲ್ಲಿ ಎರಡನೇ ಭೂಕಂಪ: 
ಐದು ದಿನಗಳ ಹಿಂದೆಯಷ್ಟೆ ಜುಲೈ 29 ರ ಬೆಳಿಗ್ಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಸಂಭವಿಸಿದ್ದ ರಿಕ್ಟರ್ ಮಾಪಕದಲ್ಲಿ 5.8ತೀವ್ರತೆಯ ಭೂಕಂಪವು ಇಲ್ಲಿನ ಜನರನ್ನು ಬೆಚ್ಚಿಬೀಳಿಸಿತ್ತು. ಇಲ್ಲಿನ ಸ್ಥಳೀಯ ಕಾಲಮಾನ ಮಧ್ಯರಾತ್ರಿ 12:53ರ ಸುಮಾರಿಗೆ ಪೋರ್ಟ್ ಬ್ಲೇರ್‌ನಿಂದ ಸರಿಸುಮಾರು 126 ಕಿಮೀ ಆಗ್ನೇಯಕ್ಕೆ ಈ ಭೂಕಂಪ ಸಂಭವಿಸಿತ್ತು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News