ಸರ್ಕಾರಿ ಬಿಲ್ಡಿಂಗ್ ಗಳಲ್ಲಿ ಆರೆಸೆಸ್ಸ್ ಶಾಖೆಗೆ ನೋ ಎಂಟ್ರಿ ಎಂದ ಕಾಂಗ್ರೆಸ್

ಮುಂಬರುವ ವಿಧಾನಸಭಾ ಚುನಾವಣೆಯ ಪ್ರಯುಕ್ತ ಪ್ರಣಾಳಿಕೆ ಬಿಡುಗಡೆ ಮಾಡಿರುವ ಕಾಂಗ್ರೆಸ್ ಪಕ್ಷ ತಾನು ಅಧಿಕಾರಕ್ಕೆ ಬಂದರೆ ಸರ್ಕಾರಿ ಕಟ್ಟಡಗಳಲ್ಲಿ ಆರೆಸೆಸ್ಸ್ ಶಾಖೆಗಳಲ್ಲಿ ಅವಕಾಶ ನೀಡುವುದಕ್ಕೆ ನಿರ್ಬಂಧ ಹೇರಲಾಗುತ್ತದೆ ಎಂದು ತನ್ನ ಪ್ರಮುಖ ಘೋಷಣೆಗಳಲ್ಲಿ ತಿಳಿಸಿದೆ.

Last Updated : Nov 11, 2018, 12:09 PM IST
 ಸರ್ಕಾರಿ ಬಿಲ್ಡಿಂಗ್ ಗಳಲ್ಲಿ ಆರೆಸೆಸ್ಸ್ ಶಾಖೆಗೆ ನೋ ಎಂಟ್ರಿ ಎಂದ ಕಾಂಗ್ರೆಸ್ title=

ನವದೆಹಲಿ: ಮುಂಬರುವ ವಿಧಾನಸಭಾ ಚುನಾವಣೆಯ ಪ್ರಯುಕ್ತ ಪ್ರಣಾಳಿಕೆ ಬಿಡುಗಡೆ ಮಾಡಿರುವ ಕಾಂಗ್ರೆಸ್ ಪಕ್ಷ ತಾನು ಅಧಿಕಾರಕ್ಕೆ ಬಂದರೆ ಸರ್ಕಾರಿ ಕಟ್ಟಡಗಳಲ್ಲಿ ಆರೆಸೆಸ್ಸ್ ಶಾಖೆಗಳಲ್ಲಿ ಅವಕಾಶ ನೀಡುವುದಕ್ಕೆ ನಿರ್ಬಂಧ ಹೇರಲಾಗುತ್ತದೆ ಎಂದು ತನ್ನ ಪ್ರಮುಖ ಘೋಷಣೆಗಳಲ್ಲಿ ತಿಳಿಸಿದೆ.
 
112 ಪುಟಗಳ ವಚನ ಪತ್ರ ಎಂದು ಹೆಸರಿಸಲಾದ ಚುನಾವಣಾ ಪ್ರಣಾಳಿಕೆ ಈ ಹಿಂದೆ ಸರ್ಕಾರಿ ನೌಕರರು ಸಹಿತ ಆರೆಸೆಸ್ಸ್ ಶಾಖಾಗಳಲ್ಲಿ ಪಾಲ್ಗೊಳ್ಳಬೇಕೆಂಬ ನಿಯಮವನ್ನು ಸಹ ರದ್ದುಪಡಿಸಲಿದೆ ಎಂದು ಕಾಂಗ್ರೆಸ್ ತಿಳಿಸಿದೆ. ಸಾಮಾನ್ಯವಾಗಿ ಆರೆಸ್ಸೆಸ್ಸ್ ಶಾಖಾಗಳಲ್ಲಿ ಕಾರ್ಯಕರ್ತರ ಸಭೆ ಹಾಗೂ ಇತರ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ.

ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಪ್ರಚಾರ ಸಮಿತಿ ಅಧ್ಯಕ್ಷ ಜ್ಯೋತಿರಾದಿತ್ಯ ಸಿಂಧ್ಯಾ ಮತ್ತು ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರ ಉಪಸ್ಥಿತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿತು.

ಇನ್ನು ರಾಜ್ಯದಲ್ಲಿ ಆಧ್ಯಾತ್ಮಿಕ ಇಲಾಖೆ ಮತ್ತು ಸಂಸ್ಕೃತ ಭಾಷೆಗೆ ಉತ್ತೇಜಿಸುವ ಯೋಜನೆ ಹಾಗೂ ರಾಮ್ ಪಥವನ್ನು ಅಭಿವೃದ್ಧಿಪಡಿಸುವ ಬಗ್ಗೆಯೂ ಕೂಡ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾಗಿದೆ. ಇದೇ ನವಂಬರ್ 28 ರಂದು ಮಧ್ಯಪ್ರದೇಶದಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 11 ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.

 

Trending News