ನಿತ್ಯ 500 ಕೋಟಿ ರೂ. ನಷ್ಟ, 70 ಲಕ್ಷ ಕಾರ್ಮಿಕರ ಸಂಕಷ್ಟ! ರೈತ ಚಳವಳಿಯ ಪರಿಣಾಮವೇನು?

Farmers Protest Business Loss: ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಹರಿಯಾಣದ ಅಂಬಾಲದಲ್ಲಿರುವ ಶಂಭು ಗಡಿಯಲ್ಲಿ ರೈತರು ʼದಿಲ್ಲಿ ಚಲೋʼ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತ ಚಳವಳಿ ಹೀಗೆ ಮುಂದುವರಿದರೆ ಜನರ ಸಮಸ್ಯೆಗಳು ಹೆಚ್ಚಾಗಲಿದ್ದು, ವ್ಯಾಪಾರ-ವ್ಯವಹಾರದ ಮೇಲೆ ಹೆಚ್ಚಿನ ನಷ್ಟವುಂಟಾಗಲಿದೆ.

Written by - Puttaraj K Alur | Last Updated : Feb 17, 2024, 10:32 AM IST
  • ಹರಿಯಾಣದ ಅಂಬಾಲದಲ್ಲಿರುವ ಶಂಭು ಗಡಿಯಲ್ಲಿ ರೈತರು ʼದಿಲ್ಲಿ ಚಲೋʼ ಪ್ರತಿಭಟನೆ
  • ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಭಾರೀ ನಷ್ಟು ಉಂಟಾಗುತ್ತಿದೆ
  • ರೈತರ ಆಂದೋಲನ ಮುಂದುವರಿದರೆ ಪ್ರತಿದಿನ 500 ಕೋಟಿ ರೂ.ನಷ್ಟ ಉಂಟಾಗಲಿದೆ
ನಿತ್ಯ 500 ಕೋಟಿ ರೂ. ನಷ್ಟ, 70 ಲಕ್ಷ ಕಾರ್ಮಿಕರ ಸಂಕಷ್ಟ! ರೈತ ಚಳವಳಿಯ ಪರಿಣಾಮವೇನು? title=
ರೈತರ ʼದಿಲ್ಲಿ ಚಲೋʼ ಪ್ರತಿಭಟನೆ

ರೈತರ ಪ್ರತಿಭಟನೆಯಿಂದ ಭಾರೀ ನಷ್ಟ: ರೈತರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಹರಿಯಾಣದ ಅಂಬಾಲದಲ್ಲಿರುವ ಶಂಭು ಗಡಿಯಲ್ಲಿ ರೈತರು ʼದಿಲ್ಲಿ ಚಲೋʼ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ದೆಹಲಿಯ ಗಡಿಗಳನ್ನು ಮುಚ್ಚಲಾಗಿದ್ದು, ಕೆಲಸಕ್ಕಾಗಿ ದೆಹಲಿ ಅಥವಾ NCRಗೆ ಹೋಗುವ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಏತನ್ಮಧ್ಯೆ ರೈತರ ಆಂದೋಲನವು ದೀರ್ಘಕಾಲದವರೆಗೆ ಮುಂದುವರಿದರೆ, ಪ್ರತಿದಿನ 500 ಕೋಟಿ ರೂ. ನಷ್ಟ ಉಂಟಾಗಲಿದೆ ಎಂದು ಕೈಗಾರಿಕಾ ಸಂಸ್ಥೆ ಪಿಎಚ್‌ಡಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (PHDCCI) ಅಂದಾಜಿಸಿದೆ. ಇದರೊಂದಿಗೆ ಸುಮಾರು 70 ಲಕ್ಷ ಉದ್ಯೋಗಿಗಳಿಗೂ ತೊಂದರೆಯಾಗಲಿದೆ. PHDCCI ವರದಿಯಲ್ಲಿ ಏನು ಉಲ್ಲೇಖಿಸಲಾಗಿದೆ ಎಂದು ತಿಳಿಯಿರಿ.

ರೈತ ಚಳವಳಿಯಿಂದ ಎಷ್ಟು ನಷ್ಟ?

PHDCCI ಪ್ರಕಾರ, ರೈತರ ಚಳವಳಿಯ ದೀರ್ಘಾವಧಿಯು ಉತ್ತರ ಭಾರತದ ರಾಜ್ಯಗಳಲ್ಲಿ ವ್ಯಾಪಾರಕ್ಕೆ 'ಗಂಭೀರ ಹಾನಿ' ಉಂಟುಮಾಡಬಹುದು. ರೈತರ ಆಂದೋಲನದಿಂದ ಉದ್ಯೋಗಕ್ಕೂ ಹೆಚ್ಚಿನ ತೊಂದರೆಯಾಗಲಿದೆ. ಅಂದಾಜಿನ ಪ್ರಕಾರ ರೈತರ ಆಂದೋಲನದಿಂದ ಪ್ರತಿದಿನ 500 ಕೋಟಿ ರೂ.ಗೂ ಹೆಚ್ಚು ಆರ್ಥಿಕ ನಷ್ಟ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: Best Saving Scheme: ಮ್ಯಾಚುರಿಟಿ ಬಳಿಕ ನಿಮ್ಮ ಹಣ ದುಪ್ಪಟ್ಟಾಗಬೇಕೆ? ಕೇವಲ ₹1000 ಮೂಲಕ ಈ ಯೋಜನೆಯಲ್ಲಿ ಹೂಡಿಕೆ ಆರಂಭಿಸಿ!

ಆಂದೋಲನದಿಂದ ನಿತ್ಯ 500 ಕೋಟಿ ರೂ.ನಷ್ಟ!

ರೈತರ ಆಂದೋಲನ ಸುದೀರ್ಘವಾಗಿ ಮುಂದುವರಿದರೆ ನಿತ್ಯ 500 ಕೋಟಿ ರೂ.ನಷ್ಟ ಉಂಟಾಗಲಿದೆ ಎಂದು ಪಿಎಚ್‌ಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಮುಖ್ಯಸ್ಥ ಸಂಜೀವ್ ಅಗರ್‌ವಾಲ್ ಹೇಳಿದ್ದಾರೆ. ಇದು ಉತ್ತರ ಭಾರತದ ರಾಜ್ಯಗಳ, ವಿಶೇಷವಾಗಿ ಹರಿಯಾಣ, ಪಂಜಾಬ್ ಮತ್ತು ದೆಹಲಿಯ ನಾಲ್ಕನೇ ತ್ರೈಮಾಸಿಕ GSDPಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.

MSME ಹೆಚ್ಚು ಪರಿಣಾಮ ಬೀರುತ್ತದೆ

ದೇಶದ ಎಲ್ಲಾ ಜನರ ಕಲ್ಯಾಣಕ್ಕಾಗಿ ಸರ್ಕಾರ ಮತ್ತು ರೈತರ ಒಪ್ಪಿಗೆಯೊಂದಿಗೆ ಶೀಘ್ರವೇ ಇದಕ್ಕೆ ಪರಿಹಾರ ಕಂಡುಕೊಂಡರೆ ಉತ್ತಮವೆಂದು ಉದ್ಯಮ ಸಂಸ್ಥೆ ಆಶಿಸುತ್ತದೆ ಎಂದು ಅವರು ಹೇಳಿದ್ದಾರೆ. ರೈತರ ಆಂದೋಲನವು ಪಂಜಾಬ್, ದೆಹಲಿ, ಹರಿಯಾಣ, ಉತ್ತರಪ್ರದೇಶ ಮತ್ತು ರಾಜಸ್ಥಾನದ ಕೆಲವು ಪ್ರದೇಶಗಳಲ್ಲಿ MSMEಗಳ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತಿದೆ. ಉತ್ಪಾದನೆಗಾಗಿ ಮತ್ತು ಗ್ರಾಹಕರ ಬೇಡಿಕೆಗಳನ್ನು ಪೂರೈಸಲು, ಅಂತಹ ಘಟಕಗಳಿಂದ ಕಚ್ಚಾ ವಸ್ತುಗಳು ದೊಡ್ಡ ಪ್ರಮಾಣದಲ್ಲಿ ಇತರ ರಾಜ್ಯಗಳಿಗೆ ಹೋಗುತ್ತವೆ.

ರೈತರ ಬೇಡಿಕೆಗಳೇನು?

ರೈತರು ಮತ್ತು ಕೇಂದ್ರ ಸರ್ಕಾರದ ನಡುವಿನ ಸಮಸ್ಯೆ ಎಲ್ಲಿದೆ ಎಂಬುದನ್ನು ಈಗ ಅರ್ಥಮಾಡಿಕೊಳ್ಳೋಣ. ವಾಸ್ತವವಾಗಿ ಪ್ರತಿಭಟನಾನಿರತ ರೈತರ ಬೇಡಿಕೆ ಕೇವಲ MSPಗೆ ಸಂಬಂಧಿಸಿದೆ. ಇದಲ್ಲದೇ MNREGA ಮತ್ತು ಪಿಂಚಣಿಗೂ ಸಂಬಂಧಿಸಿದೆ. ಈ ಬೇಡಿಕೆಗಳನ್ನು ಅಂಗೀಕರಿಸಿದರೆ ಸರ್ಕಾರದ ಮೇಲೆ ಆರ್ಥಿಕ ಹೊರೆ ಎಷ್ಟು ಹೆಚ್ಚಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿರಿ. MNREGA ಅಡಿಯಲ್ಲಿ ಪ್ರತಿವರ್ಷ 200 ದಿನಗಳ ಉದ್ಯೋಗದ ಖಾತರಿಯೊಂದಿಗೆ ದಿನಕ್ಕೆ 700 ರೂ.ಗಳನ್ನು ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಈ ಬೇಡಿಕೆಯ ಪರಿಣಾಮ ಸರ್ಕಾರದ ಮೇಲೆ 5ರಿಂದ 8 ಸಾವಿರ ಕೋಟಿ ರೂ.ಗಳ ಹೊರೆ ಬೀಳಲಿದೆ. ಈ ವರ್ಷ 2024-25ರ ಬಜೆಟ್‌ನಲ್ಲಿ MNREGAಗಾಗಿ ಕೇವಲ 86 ಸಾವಿರ ಕೋಟಿ ರೂ.ಗಳನ್ನು ಒದಗಿಸಲಾಗಿದೆ.

ಇದನ್ನೂ ಓದಿ: DA Hike: ಸರ್ಕಾರ ನೌಕರರು, ಪಿಂಚಣಿದಾರರಿಗೆ ಜಾಕ್‌ಪಾಟ್ ಸುದ್ದಿ, ತಿಂಗಳ ಕೊನೆಗೆ ಕೈ ಸೇರುವುದು ಇಷ್ಟು ಹಣ!

ಬೇಡಿಕೆ ಈಡೇರಿಸಲು ಏಕೆ ಸಾಧ್ಯವಾಗಿಲ್ಲ?

ರೈತರ ಪ್ರಮುಖ ಬೇಡಿಕೆಯೂ ಪಿಂಚಣಿಗೆ ಸಂಬಂಧಿಸಿದ್ದು, 60 ವರ್ಷ ಮೇಲ್ಪಟ್ಟ ರೈತರು ಮತ್ತು ಕೃಷಿ ಕಾರ್ಮಿಕರಿಗೆ ತಿಂಗಳಿಗೆ 10,000 ರೂ.ಗಳ ಪಿಂಚಣಿ ನೀಡಬೇಕು. ಇದರ ಪರಿಣಾಮ ನೋಡಿದರೆ 10 ಕೋಟಿ 38 ಲಕ್ಷ ರೈತರಿಗೆ ಪಿಂಚಣಿ ನೀಡಲು ಸರಕಾರಕ್ಕೆ 8ರಿಂದ 9 ಸಾವಿರ ಕೋಟಿ ರೂ. ಬೇಕಾಗುತ್ತದೆ. ಅಂದರೆ ಈ 2 ಬೇಡಿಕೆಗಳನ್ನಷ್ಟೇ ಈಡೇರಿಸಲು ಒಟ್ಟು 15 ರಿಂದ 20 ಸಾವಿರ ಕೋಟಿ ರೂ. ಬೇಕಾಗುತ್ತದೆ. ಆದರೆ 2023-24ರಲ್ಲಿ ಸರ್ಕಾರದ ಒಟ್ಟು ವೆಚ್ಚ 48 ಲಕ್ಷ ಕೋಟಿ ರೂ. ಆಗಿದೆ. MSP ಗ್ಯಾರಂಟಿ ಮತ್ತು ಸಂಪೂರ್ಣ ಸಾಲ ಮನ್ನಾ ಹೊರೆಯು ಸರ್ಕಾರದ ಮೇಲೆ ಹೆಚ್ಚಾಗುತ್ತದೆ. ವಿಶೇಷವೆಂದರೆ ಅನ್ನದಾತರ ಬೇಡಿಕೆಗಳ ಪಟ್ಟಿಯಲ್ಲಿ ಹೆಚ್ಚಿನ ಬೇಡಿಕೆಗಳಿದ್ದು, ಈ ಬಗ್ಗೆ ನಾಳೆ ಅಂದರೆ ಭಾನುವಾರ ಮಹತ್ವದ ಚರ್ಚೆ ನಡೆಯಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News