12 ಮಸೂದೆಗಳಿಗೆ ನಾಂದಿ ಹಾಡಿದ ಚಳಿಗಾಲದ ಸಂಸತ್ ಅಧಿವೇಶನ

      

Last Updated : Jan 5, 2018, 06:07 PM IST
12 ಮಸೂದೆಗಳಿಗೆ ನಾಂದಿ ಹಾಡಿದ ಚಳಿಗಾಲದ ಸಂಸತ್ ಅಧಿವೇಶನ  title=

ನವದೆಹಲಿ: ಚಳಿಗಾಲದ ಸಂಸತ್ ಅಧಿವೇಶನಕ್ಕೆ ಕೊನೆಗೂ ತೆರೆಬಿದ್ದಿದೆ,ಈ ಸಂದರ್ಭದಲ್ಲಿ ಸಂಸತ್  ಹಲವಾರು ಮಹತ್ವದ ಮಸೂದೆಗಳಿಗೆ ಸಾಕ್ಷಿಯಾಗಿದೆ. 

ಅದರಲ್ಲೂ ಪ್ರಮುಖವಾಗಿ ತ್ರಿವಳಿ ತಲಾಖ್ ಈ ಬಾರಿಯ ಅಧಿವೇಶನದಲ್ಲಿ ಹೆಚ್ಚು ಸುದ್ದಿ ಮಾಡಿದ ಮಸೂದೆಯಾಗಿದೆ. ಆ ಮೂಲಕ ತಲಾಖ್ ನ್ನು ದುರುಪಯೋಗಪಡಿಸಿ ಕೊಳ್ಳುತ್ತಿದ್ದವರಿಗೆ ಈ ಕಾಯ್ದೆ ಇನ್ನು ಪಾಠವಾಗಲಿದೆ. ಅಲ್ಲದೆ ಇದರಿಂದ ಬಹುತೇಕ ಮುಸ್ಲಿಂ ಮಹಿಳೆಯರು ಕಾನೂನಾತ್ಮಕ ರಕ್ಷಣೆಯನ್ನು ಪಡೆದುಕೊಂಡಿದ್ದಾರೆ. ಡಿಸೆಂಬರ್  15 ರಿಂದ  ಪ್ರಾರಂಭವಾದ  ಅಧಿವೇಶನವು  ಇದರಲ್ಲಿ 61 ಗಂಟೆ 48 ನಿಮಿಷಗಳ ಕಾಲಾವಧಿಯು ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಉಪಯುಕ್ತಗೊಂಡಿದೆ.

ಲೋಕ ಸಭಾಧ್ಯಕ್ಷೆ  ಸುಮಿತ್ರಾ ಮಹಾಜನ್ ಹೇಳುವಂತೆ ಒಟ್ಟು 16 ಮಸೂದೆಗಳನ್ನು ಈ ಬಾರಿ ಮಂಡಿಸಲಾಗಿತ್ತು, ಅದರಲ್ಲಿ  12 ಮಸೂದೆಗಳು ಜಾರಿಗೆ ಬಂದಿವೆ. ಸಭಾತ್ಯಾಗದಿಂದಾಗಿ  ಸುಮಾರು 14 ಗಂಟೆ 51 ನಿಮಿಷಗಳ ಕಾಲಾವಧಿ ವ್ಯರ್ಥಗೊಂಡಿದೆ ಎಂದು ಅಧೀವೇಶನದ ಮುಕ್ತಾಯದ ದಿನ ಸುಮಿತ್ರಾ ಮಹಾಜನ್ ತಿಳಿಸಿದರು.

Trending News