Lok Sabha Elections 2024: ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟಗೊಂಡ ಬೆನ್ನಲ್ಲೇ ಸರಣಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ʼನಾವು ಮಾಡಿರುವ ಸಾಧನೆಯನ್ನು ಮುಂದಿಟ್ಟುಕೊಂಡು ಜನರ ಬಳಿ ಮತಯಾಚನೆ ಮಾಡಲಿದ್ದೇವೆʼ ಅಂತಾ ಹೇಳಿದ್ದಾರೆ. ʼಪ್ರಜಾಪ್ರಭುತ್ವದ ದೊಡ್ಡ ಹಬ್ಬ ಮತ್ತೆ ಬಂದಿದೆ! ಚುನಾವಣಾ ಆಯೋಗವು 2024ರ ಲೋಕಸಭಾ ಚುನಾವಣೆಗೆ ದಿನಾಂಕ ಪ್ರಕಟಿಸಿದೆ. ನಾವು ಅಂದರೆ BJP-NDA ಮೈತ್ರಿಕೂಟವು ಚುನಾವಣೆಗೆ ಸಂಪೂರ್ಣ ಸಿದ್ಧರಾಗಿದ್ದೇವೆ. ಉತ್ತಮ ಆಡಳಿತ ಮತ್ತು ಕ್ಷೇತ್ರಗಳಾದ್ಯಂತ ಉತ್ತಮ ಸೇವೆ ನೀಡಿರುವ ನಮ್ಮ ಟ್ರ್ಯಾಕ್ ರೆಕಾರ್ಡ್ ಆಧಾರದ ಮೇಲೆ ನಾವು ಜನರ ಬಳಿಗೆ ಹೋಗಲಿದ್ದೇವೆʼ ಅಂತಾ ಹೇಳಿದ್ದಾರೆ.
Ten years ago, before we assumed office, the people of India were feeling betrayed and disillusioned thanks to INDI Alliance’s pathetic governance. No sector was left untouched from scams and policy paralysis. The world had given up on India. From there, it’s been a glorious…
— Narendra Modi (@narendramodi) March 16, 2024
ಇದೇ ವೇಳೆ ವಿರೋಧ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ಮೋದಿ, ʼ10 ವರ್ಷಗಳ ಹಿಂದೆ ನಾವು ಅಧಿಕಾರ ವಹಿಸಿಕೊಳ್ಳುವ ಮೊದಲು ‘ಇಂಡಿಯಾ’ ಮೈತ್ರಿಕೂಟ(I.N.D.I.A Alliance)ದ ಪಕ್ಷಗಳ ಸರ್ಕಾರದ ಆಡಳಿತದಿಂದ ದೇಶದ ಜನರು ಭ್ರಮನಿರಸನಗೊಂಡಿದ್ದರು. ಹಗರಣಗಳು ಮತ್ತು ಕೆಟ್ಟ ನೀತಿಗಳಿಂದ ಯಾವುದೇ ಕ್ಷೇತ್ರವನ್ನು ಬಿಟ್ಟಿರಲಿಲ್ಲ. ಇಡೀ ಜಗತ್ತೇ ಭಾರತವನ್ನು ಕೈಬಿಟ್ಟಿತ್ತು. ಅಲ್ಲಿಂದ ಮುಂದಕ್ಕೆ ನಮ್ಮದು ಅದ್ಭುತವಾದ ತಿರುವು. 140 ಕೋಟಿ ಭಾರತೀಯರಿಂದ ಕೂಡಿರುವ ನಮ್ಮ ರಾಷ್ಟ್ರವು ಅಭಿವೃದ್ಧಿಯ ಹೊಸ ದಾಖಲೆ ಸೃಷ್ಟಿಸುತ್ತಿದೆ. ನಾವು 5ನೇ ಅತಿದೊಡ್ಡ ಆರ್ಥಿಕತೆಯಾಗಿದ್ದೇವೆ ಮತ್ತು ಕೋಟಿಗಟ್ಟಲೆ ಜನರನ್ನು ಬಡತನದಿಂದ ಮುಕ್ತಗೊಳಿಸಿದ್ದೇವೆ. ನಮ್ಮ ಯೋಜನೆಗಳು ಭಾರತದ ಎಲ್ಲಾ ಭಾಗಗಳನ್ನು ತಲುಪಿವೆ ಮತ್ತು ಉತ್ತಮ ಫಲಿತಾಂಶಗಳನ್ನು ನೀಡಿದೆʼ ಎಂದು ಮೋದಿ ಹೇಳಿದ್ದಾರೆ.
The people of India are witnessing what a determined, focused and result oriented government can do. And, they want more of it. That is why from every corner of India, cutting across all sections of society, the people are saying in one voice- Ab Ki Baar, 400 Paar!
— Narendra Modi (@narendramodi) March 16, 2024
ಇದನ್ನೂ ಓದಿ: 7ನೇ ವೇತನ ಆಯೋಗದ ಶಿಫಾರಸ್ಸು ಈಡೇರಿಸುವ ಕರ್ತವ್ಯ ಸಿದ್ದರಾಮಯ್ಯ ಅವರದ್ದು:ಬಸವರಾಜ ಬೊಮ್ಮಾಯಿ
In our third term, there’s much work to be done. The last decade was about filling gaps created by those who ruled for seventy years. It was also about instilling a spirit of self-confidence that yes, India can become prosperous and self-reliant. We will build on this spirit.
— Narendra Modi (@narendramodi) March 16, 2024
ದೃಢಸಂಕಲ್ಪ, ಕೇಂದ್ರೀಕೃತ ಮತ್ತು ಫಲಿತಾಂಶ ಆಧಾರಿತ ಸರ್ಕಾರ ಏನು ಮಾಡಬಹುದೆಂಬುದನ್ನು ಭಾರತದ ಜನರು ನೋಡುತ್ತಿದ್ದಾರೆ. ಮತ್ತು ಅವರು ಅದಕ್ಕಿಂತಲೂ ಹೆಚ್ಚಿನದನ್ನು ಬಯಸುತ್ತಾರೆ. ಅದಕ್ಕಾಗಿಯೇ ಭಾರತದ ಮೂಲೆ ಮೂಲೆಯಿಂದ, ಸಮಾಜದ ಎಲ್ಲಾ ವರ್ಗಗಳನ್ನು ಒಳಗೊಂಡಂತೆ ಜನರು ಒಂದೇ ಧ್ವನಿಯಲ್ಲಿ ‘ಅಬ್ ಕೀ ಬಾರ್, 400 ಪಾರ್’ ಎಂದು ಹೇಳುತ್ತಿದ್ದಾರೆ ಅಂತಾ ಮೋದಿ ಹೇಳಿದ್ದಾರೆ.
ವಿಪಕ್ಷಗಳಿಗೆ ಯಾವುದೇ ವಿಷಯವಸ್ತುವಿಲ್ಲ. ಹೀಗಾಗಿಯೇ ನಮ್ಮನ್ನು ನಿಂದಿಸುವುದು ಮತ್ತು ವೋಟ್‌ಬ್ಯಾಂಕ್ ರಾಜಕಾರಣ ಮಾಡುವುದನ್ನಷ್ಟೇ ಅವರು ಮಾಡಬಲ್ಲರು. ಅವರ ವಂಶಾಡಳಿತದ ಧೋರಣೆ ಮತ್ತು ಸಮಾಜವನ್ನು ವಿಭಜಿಸುವ ಪ್ರಯತ್ನಗಳನ್ನು ಒಪ್ಪಿಕೊಳ್ಳಲಾಗುತ್ತಿಲ್ಲ. ಅವರ ಭ್ರಷ್ಟಾಚಾರದ ದಾಖಲೆ ಅವರಿಗೆ ಸಮಸ್ಯೆ ಉಂಟುಮಾಡುತ್ತಿದೆ. ಅಂತಹ ನಾಯಕತ್ವ ಜನರಿಗೆ ಬೇಕಾಗಿಲ್ಲವೆಂದು ಮೋದಿ ಕಿಡಿಕಾರಿದ್ದಾರೆ.
I can clearly see that the coming five years will be about our collective resolve of establishing the roadmap that will guide our trajectory as a nation for the next thousand years and make India the embodiment of prosperity, all-round growth and global leadership.
— Narendra Modi (@narendramodi) March 16, 2024
ನಮ್ಮ ಮೂರನೇ ಅವಧಿಯಲ್ಲಿ ಬಹಳಷ್ಟು ಕೆಲಸಗಳನ್ನು ಮಾಡಬೇಕಾಗಿದೆ. ಕಳೆದ ದಶಕವು ಎಪ್ಪತ್ತು ವರ್ಷಗಳ ಕಾಲ ಆಳಿದವರು ಮಾಡಿದ ಲೋಪಗಳನ್ನು ಸರಿಪಡಿಸಬೇಕಾಯಿತು. ಆ ಅವಧಿಯು ಭಾರತ ಸಮೃದ್ಧ ಮತ್ತು ಸ್ವಾವಲಂಬಿಯಾಗಬಹುದು ಎಂಬ ಆತ್ಮವಿಶ್ವಾಸದ ಮನೋಭಾವ ಹುಟ್ಟುಹಾಕುವುದಕ್ಕೆ ಬೇಕಾಯಿತು. ಬಡತನ ಮತ್ತು ಭ್ರಷ್ಟಾಚಾರದ ವಿರುದ್ಧದ ಯುದ್ಧವು ಇನ್ನೂ ಹೆಚ್ಚಿನ ವೇಗದಲ್ಲಿ ಮುಂದುವರಿಯಲಿದೆ. ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗುವುದು. ಭಾರತವನ್ನು ಮೂರನೇ ಅತಿದೊಡ್ಡ ಜಾಗತಿಕ ಆರ್ಥಿಕತೆಯನ್ನಾಗಿ ಮಾಡುವ ನಿಟ್ಟಿನಲ್ಲಿ ನಾವು ಕೆಲಸ ಮಾಡಲಿದ್ದೇವೆ. ಯುವಕರ ಕನಸುಗಳನ್ನು ನನಸು ಮಾಡುವ ನಮ್ಮ ಪ್ರಯತ್ನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತೇವೆ ಎಂದು ಮೋದಿ ಇದೇ ವೇಳೆ ಭರವಸೆ ನೀಡಿದ್ದಾರೆ.
I derive great strength from people’s blessings, especially the poor, our farmers, Yuva and Nari Shakti. When they say ‘मैं हूँ मोदी का परिवार’, it fills me with joy and makes me work harder to build a Viksit Bharat. This is THE era to make it happen and together we will! यही समय…
— Narendra Modi (@narendramodi) March 16, 2024
ಇದನ್ನೂ ಓದಿ: ಲೋಕಸಭಾ ಚುನಾವಣೆ ವೇಳಾಪಟ್ಟಿ ಪ್ರಕಟ ಬೆನ್ನಲ್ಲೇ ನೀತಿ ಸಂಹಿತೆ ಜಾರಿ: ಯಾವ ಚಟುವಟಿಕೆಗೆ ನಿರ್ಬಂಧ..?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ