Lok Sabha Elections 2024 Prediction: ಸದ್ಯ ದೇಶದೆಲ್ಲೆಡೆ ಬೇಸಿಗೆ ಬೇಗೆಯ ಜೊತೆಗೆ ಚುನಾವಣೆಗಳ ಕಾವು ಕೂಡ ದಿನದಿಂದ ದಿನಕ್ಕೆ ಹೇಚ್ಚಾಗುತ್ತಿದೆ. ಆದರೆ, ಕಡಲೂರಿನಿಂದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಲೋಕಸಭೆ ಚುನಾವಣೆಯ ಮತದಾನಕ್ಕೂ ಮುನ್ನ ರಸ್ತೆಬದಿಯಲ್ಲಿ ಕುಳಿತು ಪಂಜರದ ಗಿಳಿಗಳ ಮೂಲಕ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳ ಬಗ್ಗೆ ಭವಿಷ್ಯ ನುಡಿಸುತ್ತಿದ್ದ ಇಬ್ಬರು ಜ್ಯೋತಿಷಿಗಳನ್ನು ಬಂದಿಡಲಾಗಿದೆ. ಇಬ್ಬರೂ ಇಲ್ಲಿಂದ ಪಟ್ಟಾಲಿ ಮಕ್ಕಳ್ ಕಚ್ಚಿ (ಪಿಎಂಕೆ) ಅಭ್ಯರ್ಥಿ ಥಂಕರ್ ಬಚನ್ ಗೆಲುವಿನ ಭವಿಷ್ಯವನ್ನು ಗಿಲಿಗಳ ಮೂಲಕ ಹೇಳಿಸುತ್ತಿದ್ದರು. ಆದರೆ, ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಈ ಮಾಹಿತಿ ನೀಡಿದ್ದಾರೆ.
ಚಲನಚಿತ್ರ ನಿರ್ದೇಶನದಿಂದ ರಾಜಕೀಯಕ್ಕೆ ಬಂದ ಥಂಕರ್ ಬಚನ್ ಕಡಲೂರಿನ ಪಿಎಂಕೆ ಅಭ್ಯರ್ಥಿಯಾಗಿದ್ದಾರೆ, ಅವರು ಸಹೋದರರಾದ ಇಬ್ಬರೂ ಜ್ಯೋತಿಷಿಗಳನ್ನು ಸಂಪರ್ಕಿಸಿದ್ದಾರೆ. ಅವರು ನಾಲ್ಕು ಗಿಳಿಗಳಲ್ಲಿ ಒಂದು ಗಿಳಿಗೆ ಕಾರ್ಡ್ ಎತ್ತಿಕೊಳ್ಳಲು ಹೇಳಿದ್ದಾರೆ. ಅದರ ಆಧಾರದ ಮೇಲೆ ಬಚನ್ ವಿಜಯದ ಕುರಿತು ಗಿಳಿಗಳು ಭವಿಷ್ಯ ನುಡಿದಿವೆ.
ಇಬ್ಬರೂ ಜ್ಯೋತಿಷಿಗಳ ಭವಿಷ್ಯವನ್ನು ಬಚನ್ ಪಡೆದುಕೊಳ್ಳುತ್ತಿರುವುದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಈ ವಿಡಿಯೋದಲ್ಲಿ ಅಭ್ಯರ್ಥಿಯು ಪಕ್ಷಿಗಳಿಗೆ ಆಹಾರ ನೀಡುತ್ತಿರುವುದನ್ನು ಮತ್ತು ಭವಿಷ್ಯದ ಬಗ್ಗೆ ಕೇಳಿದ ನಂತರ ಜ್ಯೋತಿಷಿಗಳಿಗೆ ಬಾಳೆಹಣ್ಣುಗಳನ್ನು ನೀಡುತ್ತಿರುವುದನ್ನು ನೋಡಬಹುದು.
ಇದನ್ನೂ ಓದಿ-Free IPL 2024 ತೋರಿಸಿಯೂ ಎಷ್ಟು ಕೋಟಿ ಹಣ ಸಂಪಾದಿಸಿದ್ದಾರೆ ಮುಕೇಶ್ ಅಂಬಾನಿ ಗೊತ್ತಾ? ಇಲ್ಲಿದೆ ಅದರ ಲೆಕ್ಕಾಚಾರ!
ಇದರಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ನೇರ ಉಲ್ಲಂಘನೆಯಾಗಿರುವ ಕಾರಣ, ಎರಡು ಪಂಜರಗಳಲ್ಲಿನ ನಾಲ್ಕು ಗಿಳಿಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ನಂತರ ಜ್ಯೋತಿಷಿ ಸಹೋದರರನ್ನು ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಕಡಲೂರು ಸಮೀಪದ ತೆನ್ನಂಪಕ್ಕಂನಲ್ಲಿರುವ ಅಜಗು ಮುತ್ತು ಅಯ್ಯನಾರ್ ದೇವಸ್ಥಾನಕ್ಕೆ ಭೇಟಿ ನೀಡಿದ ಬಚನ್ ಅವರು ತಮ್ಮ ಚುನಾವಣಾ ಭವಿಷ್ಯವನ್ನು ತಿಳಿದುಕೊಳ್ಳಲು ಜ್ಯೋತಿಷಿಗಳ ಸೇವೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ-IPL 2024: ಮಗನನ್ನು ಕ್ರಿಕೆಟ್ ಆಟಗಾರನನ್ನಾಗಿಸಲು ನೌಕರಿ ತೊರೆದ ತಂದೆ, ವಿರಾಟ್ ಈತನ ಆದರ್ಶ!
ಜ್ಯೋತಿಷಿಯೊಬ್ಬರು ಪಂಜರದಿಂದ ಗಿಳಿಯನ್ನು ಹೊರತೆಗೆದು ಕಾರ್ಡ್ ತೆಗೆದುಕೊಳ್ಳಲು ಹೇಳಿದ್ದಾರೆ. ಅಳಗು ಮುತ್ತು ಅಯ್ಯನಾರ್ ದೇವಸ್ಥಾನದ ಪ್ರಧಾನ ದೇವರ ಚಿತ್ರವಿರುವ ಕಾರ್ಡ್ ಅನ್ನು ಪಕ್ಷಿ ಎತ್ತಿದಾಗ, ಜ್ಯೋತಿಷಿ ಅದನ್ನು ಶುಭ ಸಂಕೇತವೆಂದು ವ್ಯಾಖ್ಯಾನಿಸಿ ಬಚ್ಚನ್ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ಹೇಳಿದ್ದಾರೆ. ಮತ್ತೊಂದೆಡೆ, ಮಂಗಳವಾರ (ಏಪ್ರಿಲ್ 9) ಇಬ್ಬರೂ ಜ್ಯೋತಿಷಿಗಳ ಬಂಧನವನ್ನು ಪಿಎಂಕೆ ನಾಯಕ ಡಾ.ಅನ್ಬುಮಣಿ ರಾಮದಾಸ್ ಖಂಡಿಸಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ