ನವದೆಹಲಿ: ಮಹಾರಾಷ್ಟ್ರದಲ್ಲಿ ವಾರಾಂತ್ಯದ ಲಾಕ್‌ಡೌನ್ ಅನ್ನು 15 ದಿನಗಳವರೆಗೆ ವಿಸ್ತರಿಸಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ರಾಜೇಶ್ ಟೊಪೆ ಬುಧವಾರ ಹೇಳಿದ್ದಾರೆ.ಏಪ್ರಿಲ್ 4 ರಂದು ವಿಧಿಸಲಾಗಿದ್ದ ಹಿಂದಿನ ಲಾಕ್‌ಡೌನ್ ಏಪ್ರಿಲ್ 30 ಕ್ಕೆ ಕೊನೆಗೊಳ್ಳಲಿದೆ.
ಮಹಾರಾಷ್ಟ್ರ ಸರ್ಕಾರದ ನಿರ್ಧಾರವು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಸೋಂಕುಗಳ ಮಧ್ಯೆ, ಎಲ್ಲಾ ಕ್ಯಾಬಿನೆಟ್ ಮಂತ್ರಿಗಳು ಲಾಕ್ಡೌನ್ ವಿಸ್ತರಣೆಯನ್ನು ಕೋರಿದ್ದಾರೆ ಎಂದು ಟೋಪೆ ಹೇಳಿದರು.
ಇದನ್ನೂ ಓದಿ: ಮತದಾನ ಕೇಂದ್ರದಲ್ಲಿ ಯಾವುದೇ ಅಡೆತಡೆ ಇಲ್ಲ ಎಂದ ಚುನಾವಣಾ ಆಯೋಗ
ಕರೋನವೈರಸ್ (Coronavirus) ಸೋಂಕಿನಲ್ಲಿ ಭಾರಿ ಏರಿಕೆಯ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಏಪ್ರಿಲ್ 4 ರಂದು ವಾರಾಂತ್ಯದ ಲಾಕ್‌ಡೌನ್ ಘೋಷಿಸಿತ್ತು ಮತ್ತು ವಾರದ ದಿನಗಳಲ್ಲಿ ಏಪ್ರಿಲ್ 30 ರವರೆಗೆ ಜನರ ಸಂಚಾರಕ್ಕೆ ಕಡಿವಾಣ ಹಾಕಿತು. ಪ್ರಕರಣಗಳಲ್ಲಿ ಅಭೂತಪೂರ್ವ ಉಲ್ಬಣವನ್ನು ತಡೆಯಲು ಖಾಸಗಿ ಕಚೇರಿಗಳು, ಚಿತ್ರಮಂದಿರಗಳಿಗೆ ಸರ್ಕಾರ ನಿರ್ಬಂಧ ವಿಧಿಸಿತ್ತು. ಪ್ರಸ್ತುತ, ವಾರಾಂತ್ಯದ ಲಾಕ್‌ಡೌನ್ ಶುಕ್ರವಾರ ರಾತ್ರಿ 8 ರಿಂದ ಜಾರಿಯಲ್ಲಿದೆ ಮತ್ತು ಸೋಮವಾರದಂದು ಬೆಳಿಗ್ಗೆ 7 ಗಂಟೆಯವರೆಗೆ ಇರುತ್ತದೆ.
ಇದನ್ನೂ ಓದಿ: ಚುನಾವಣಾ ರ್ಯಾಲಿ ಹಾಗೂ ರೋಡ್ ಷೋ ನಿಷೇಧಿಸಿದ ಚುನಾವಣಾ ಆಯೋಗ
ಕೋವಿಡ್ -19 ವಿರುದ್ಧ 18-44 ವರ್ಷ ವಯಸ್ಸಿನ ಎಲ್ಲ ವಯಸ್ಕರಿಗೆ ಲಸಿಕೆ ಹಾಕುವ ನಿರ್ಧಾರವನ್ನು ರಾಜ್ಯ ಸರ್ಕಾರ ಬುಧವಾರ ಪ್ರಕಟಿಸಿದೆ.ಇದಕ್ಕಾಗಿ ರಾಜ್ಯ ಸರ್ಕಾರ 6,500 ಕೋಟಿ ರೂ.ಗಳನ್ನು ವ್ಯಯ ಮಾಡಲಿದೆ ಎನ್ನಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.