Loan For Covid-19 Treatment: ಕೋವಿಡ್ ಚಿಕಿತ್ಸೆಗೆ 5 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ಲಭ್ಯ

ಇಂಡಿಯನ್ ಬ್ಯಾಂಕುಗಳ ಸಂಘ (ಐಬಿಎ) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಡಿದ ಈ ಪ್ರಕಟಣೆಗಳ ಪ್ರಕಾರ, ಸಂಬಳ ಪಡೆಯುವವರು, ಸಂಬಳ ಪಡೆಯದವರು ಮತ್ತು ಪಿಂಚಣಿದಾರರು ಸೇರಿದಂತೆ ವ್ಯಕ್ತಿಗಳು ಕೋವಿಡ್ ಚಿಕಿತ್ಸೆಗಾಗಿ (Covid-19 Treatment) ಅಸುರಕ್ಷಿತ ವೈಯಕ್ತಿಕ ಸಾಲಗಳನ್ನು ₹ 25,000 ದಿಂದ 5 ಲಕ್ಷದವರೆಗೆ ಈ ಸಾಲವನ್ನು ಪಡೆಯಬಹುದು.

Written by - Yashaswini V | Last Updated : May 31, 2021, 10:55 AM IST
  • ಸಾರ್ವಜನಿಕ ವಲಯದ ಬ್ಯಾಂಕುಗಳು (ಪಿಎಸ್‌ಬಿ) ತಮ್ಮ ಮತ್ತು ಕುಟುಂಬ ಸದಸ್ಯರ COVID-19 ಚಿಕಿತ್ಸಾ ವೆಚ್ಚವನ್ನು ಪೂರೈಸಲು ಅಸುರಕ್ಷಿತ ವೈಯಕ್ತಿಕ ಸಾಲವನ್ನು ನೀಡುವುದಾಗಿ ಘೋಷಿಸಿವೆ
  • ಕೋವಿಡ್ ಚಿಕಿತ್ಸೆಗಾಗಿ ₹ 25,000 ದಿಂದ 5 ಲಕ್ಷದವರೆಗೆ ಈ ಸಾಲವನ್ನು ಪಡೆಯಬಹುದು
  • ಈ ಸಾಲದ ಮೇಲೆ ಎಸ್‌ಬಿಐ ವಾರ್ಷಿಕ 8.5% ಬಡ್ಡಿ ವಿಧಿಸುತ್ತದೆ
Loan For Covid-19 Treatment: ಕೋವಿಡ್ ಚಿಕಿತ್ಸೆಗೆ 5 ಲಕ್ಷ ರೂ.ವರೆಗೆ ಸಾಲ ಸೌಲಭ್ಯ ಲಭ್ಯ title=
Loan For Covid-19 Treatment

Loan For Covid-19 Treatment: ಸಾರ್ವಜನಿಕ ವಲಯದ ಬ್ಯಾಂಕುಗಳು (ಪಿಎಸ್‌ಬಿ) ತಮ್ಮ ಮತ್ತು ಕುಟುಂಬ ಸದಸ್ಯರ COVID-19 ಚಿಕಿತ್ಸಾ ವೆಚ್ಚವನ್ನು ಪೂರೈಸಲು ಅಸುರಕ್ಷಿತ ವೈಯಕ್ತಿಕ ಸಾಲವನ್ನು ನೀಡುವುದಾಗಿ ಘೋಷಿಸಿವೆ. ಇದರಿಂದ ಜನರು ಕೋವಿಡ್ -19 ಚಿಕಿತ್ಸೆಯನ್ನು (Covid 19 Treatment) ಪಡೆಯಬಹುದು. ಕರೋನಾ ಸಾಂಕ್ರಾಮಿಕದ ಎರಡನೇ ಅಲೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಬ್ಯಾಂಕುಗಳ ಸಂಘ (ಐಬಿಎ) ಜಂಟಿಯಾಗಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿವೆ.

ಇಂಡಿಯನ್ ಬ್ಯಾಂಕುಗಳ ಸಂಘ (ಐಬಿಎ) ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾಡಿದ ಈ ಪ್ರಕಟಣೆಗಳ ಪ್ರಕಾರ, ಸಂಬಳ ಪಡೆಯುವವರು, ಸಂಬಳ ಪಡೆಯದವರು ಮತ್ತು ಪಿಂಚಣಿದಾರರು ಸೇರಿದಂತೆ ವ್ಯಕ್ತಿಗಳು ಕೋವಿಡ್ ಚಿಕಿತ್ಸೆಗಾಗಿ (Covid-19 Treatment) ಅಸುರಕ್ಷಿತ ವೈಯಕ್ತಿಕ ಸಾಲಗಳನ್ನು ₹ 25,000 ದಿಂದ 5 ಲಕ್ಷದವರೆಗೆ ಈ ಸಾಲವನ್ನು ಪಡೆಯಬಹುದು.

ಕೋವಿಡ್ ಚಿಕಿತ್ಸೆಗಾಗಿ (Covid-19 Treatment) ಪಡೆದ ಸಾಲದ ಮರುಪಾವತಿ ಅವಧಿ 5 ವರ್ಷಗಳು. ಈ ಸಾಲದ ಮೇಲೆ ಎಸ್‌ಬಿಐ ವಾರ್ಷಿಕ 8.5% ಬಡ್ಡಿ ವಿಧಿಸುತ್ತದೆ. ಇತರ ಬ್ಯಾಂಕುಗಳು ತಮ್ಮ ಬಡ್ಡಿದರವನ್ನು ನಿರ್ಧರಿಸಲು ಮುಕ್ತವಾಗಿವೆ ಎನ್ನಲಾಗಿದೆ.

ಇದನ್ನೂ ಓದಿ- Covid Patients: ಕರೋನಾದಿಂದ ಚೇತರಿಸಿಕಂಡ ಬಳಿಕ ಎಷ್ಟು ದಿನಗಳವರೆಗೆ ಶಸ್ತ್ರಚಿಕಿತ್ಸೆಗೆ ಒಳಗಾಗಬಾರದು? ಇಲ್ಲಿದೆ ICMR ಸಲಹೆ

ಪಿಎಸ್‌ಬಿಗಳು ಅಸ್ತಿತ್ವದಲ್ಲಿರುವ ಆಸ್ಪತ್ರೆಗಳಿಗೆ ಹೆಲ್ತ್ ಕೇರ್ ವ್ಯವಹಾರ (Healthcare Business) ಸಾಲವಾಗಿ 2 ಕೋಟಿ ವರೆಗೆ ಲೋನ್ ನೀಡಲು ಮುಂದಾಗಿವೆ, ಇಸಿಜಿಎಲ್‌ಎಸ್ ಅಡಿಯಲ್ಲಿ ಪವರ್ ಬ್ಯಾಕ್ ಅಪ್ ವ್ಯವಸ್ಥೆಯೊಂದಿಗೆ ಆಮ್ಲಜನಕ ಘಟಕಗಳನ್ನು ಸ್ಥಾಪಿಸಲು ನರ್ಸಿಂಗ್ ಹೋಂಗಳು ಸಾಲ ಪಡೆಯಬಹುದಾಗಿದೆ. 

ಇದು ಕೋವಿಡ್  ಲಸಿಕೆ (Covid Vaccine) ತಯಾರಕರು, ಆಸ್ಪತ್ರೆಗಳು, ಔಷಧಾಲಯಗಳು, ರೋಗಶಾಸ್ತ್ರ ಪ್ರಯೋಗಾಲಯಗಳು, ಆಮ್ಲಜನಕದ ತಯಾರಕರು ಮತ್ತು ಪೂರೈಕೆದಾರರು, ಆಕ್ಸಿಜನ್ ಪೂರೈಕೆ, ಲಸಿಕೆಗಳನ್ನು ಆಮದು ಮಾಡಿಕೊಳ್ಳುವವರು ಮತ್ತು COVID ಸಂಬಂಧಿತ ಔಷಧಿಗಳ ಲಾಜಿಸ್ಟಿಕ್ಸ್ ಸಂಸ್ಥೆಗಳು ಮತ್ತು ಬಳಲುತ್ತಿರುವ ವ್ಯಕ್ತಿಗಳಿಗೆ ಹೊಸ ಸಾಲ ನೀಡುವಿಕೆಯನ್ನು ಒದಗಿಸಲು ಅವರು ಭಾನುವಾರ ಘೋಷಿಸಿದ ಮೂರು ಹೊಸ ಸಾಲ ಉತ್ಪನ್ನಗಳ ಭಾಗವಾಗಿದೆ.  7.5% ನಷ್ಟು ಬಡ್ಡಿದರದಲ್ಲಿ ಈ ಸಾಲಗಳನ್ನು ಇಸಿಎಲ್‌ಜಿಎಸ್ 4.0 ರ ಅಡಿಯಲ್ಲಿ ನ್ಯಾಷನಲ್ ಕ್ರೆಡಿಟ್ ಗ್ಯಾರಂಟಿ ಟ್ರಸ್ಟೀ ಕಂಪನಿ ಲಿಮಿಟೆಡ್ (ಎನ್‌ಸಿಜಿಟಿಸಿ) ಯ 100% ಗ್ಯಾರಂಟಿ ಕವರ್ ಬೆಂಬಲಿಸುತ್ತದೆ. ಇದನ್ನು ಹಣಕಾಸು ಸೇವೆಗಳ ಇಲಾಖೆ ಮತ್ತು ಭಾರತ ಸರ್ಕಾರ ಘೋಷಿಸಿದೆ. ಸಾಲದ ಅವಧಿ 5 ವರ್ಷಗಳು.

ಇದನ್ನೂ ಓದಿ- DRDO ಅಭಿವೃದ್ಧಿಪಡಿಸಿರುವ 2 DG Drug ಔಷಧ ಪ್ರತಿ ಪ್ಯಾಕೆಟ್​ಗೆ ₹ 990! 

ಆರೋಗ್ಯ ಸೌಲಭ್ಯಗಳಿಗಾಗಿ ಬ್ಯಾಂಕುಗಳು ವ್ಯಾಪಾರ ಸಾಲದೊಂದಿಗೆ ಹೊರಬಂದಿವೆ. ಆರೋಗ್ಯ ಮೂಲಸೌಕರ್ಯಗಳನ್ನು ಸ್ಥಾಪಿಸಲು / ವಿಸ್ತರಿಸಲು ಮತ್ತು ಲಸಿಕೆ ಮತ್ತು ವೆಂಟಿಲೇಟರ್‌ಗಳಂತಹ ಆರೋಗ್ಯ ಉತ್ಪನ್ನಗಳ ತಯಾರಕರಿಗೆ ಮೆಟ್ರೊ ಉಲ್ಲೇಖಿಸಿದ ಸಂಸ್ಥೆಗಳಿಗೆ ತಲಾ 100 ಕೋಟಿ ರೂ. ಒದಗಿಸಲಾಗುವುದು. ಶ್ರೇಣಿ 1 ಮತ್ತು ನಗರ ಕೇಂದ್ರಗಳಲ್ಲಿನ ಸಂಸ್ಥೆಗಳು ₹ 20 ಕೋಟಿ ವರೆಗೆ ಸಾಲ ಪಡೆಯಬಹುದು, ಆದರೆ ಶ್ರೇಣಿ II ರಿಂದ ಶ್ರೇಣಿ IV ವರೆಗಿನ ಸಂಸ್ಥೆಗಳು ₹ 10 ಕೋಟಿ ವರೆಗೆ ಸಾಲ ಪಡೆಯಬಹುದು. ಇವುಗಳ ಸಾಲದ ಅವಧಿ 10 ವರ್ಷಗಳು.

ಪಿಎಸ್‌ಬಿಗಳು ನೀಡುವ ಈ ಎಲ್ಲಾ ಯೋಜನೆಗಳು ಕೋವಿಡ್ ಲೋನ್ ಬುಕ್ (COVID loan book) ಭಾಗವಾಗುತ್ತವೆ ಮತ್ತು ಆದ್ಯತೆಯ ವಲಯದ ಸಾಲದಲ್ಲಿವೆ ಎಂದು ತಿಳಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News