Horrific Accident: ಭಯಂಕರ ಆಕ್ಸಿಡೆಂಟ್ ನ Live Video, ನಡುರಸ್ತೇಲಿ ಟ್ರ್ಯಾಕ್ಟರ್ ಉಡಾಯಿಸಿದ ಲಾರಿ

Road Accident Viral Video: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿವೆ. ಇಂತಹುದೇ ಒಂದು ವೈರಲ್ ವಿಡಿಯೋದಲ್ಲಿ ಲಾರಿವೊಂದು ನಡು ರಸ್ತೆಯಲ್ಲಿಯೇ ಟ್ರ್ಯಾಕ್ಟರ್ ಗೆ ಗುದ್ದಿದೆ. ಈ ವಿಡಿಯೋ ನೋಡಿ ನೀವೂ ಕೂಡ ಒಂದು ಕ್ಷಣ ಸ್ತಬ್ಧರಾಗುವಿರಿ.

Written by - Nitin Tabib | Last Updated : Feb 7, 2022, 01:25 PM IST
  • ರಸ್ತೆ ಅಪಘಾತದ ಬೆಚ್ಚಿಬೀಳಿಸುವ ವಿಡಿಯೋ.
  • ಟ್ರ್ಯಾಕ್ಟರ್ ಡ್ರೈವರ್ ಸ್ಥಿತಿಯ ಕುರಿತ ಯಾವುದೇ ಮಾಹಿತಿ ಲಭ್ಯವಿಲ್ಲ
  • ಈ ವಿಡಿಯೋಗೆ ನೆಟ್ಟಿಗರು ಭಾರಿ ರಿಯಾಕ್ಷನ್ ನೀಡುತ್ತಿದ್ದಾರೆ.
Horrific Accident: ಭಯಂಕರ ಆಕ್ಸಿಡೆಂಟ್ ನ Live Video, ನಡುರಸ್ತೇಲಿ ಟ್ರ್ಯಾಕ್ಟರ್  ಉಡಾಯಿಸಿದ ಲಾರಿ title=
Horrific Accident (File Photo)

Road Accident Live Video: ರಸ್ತೆಯಲ್ಲಿ ಎಲ್ಲರೂ ಮೈಯಲ್ಲಾ ಕಣ್ಣಾಗಿಸಿ ಸಂಚರಿಸಬೇಕು. ನಡೆದುಕೊಂಡು ಹೋಗುತ್ತಿರಲಿ, ವಾಹನ ಚಲಾಯಿಸುತ್ತಿರಲಿ, ರಸ್ತೆಯಲ್ಲಿ ನಡೆಯುವಾಗ ಎಲ್ಲರೂ ಜಾಗರೂಕರಾಗಿರಬೇಕು, ಇಲ್ಲದಿದ್ದರೆ ಅಪಘಾತಗಳು (Road Accident) ಯಾವಾಗ ವಕ್ಕರಿಸುತ್ತವೆ ಎಂಬುದು ಹಲಲಾಗದು. ಪ್ರತಿದಿನ ಎಷ್ಟೋ ರಸ್ತೆ ಅಪಘಾತಗಳು ಸಂಭವಿಸುವ ಘಟನೆಗಳನ್ನೂ ನೀವು ಸುದ್ದಿಗಳಲ್ಲಿ ಓದಿರಬೇಕು. ಕಳೆದ ವರ್ಷ ವಿಶ್ವಬ್ಯಾಂಕ್ ವರದಿಯ ಪ್ರಕಾರ ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಸಾವುಗಳಲ್ಲಿ ಶೇ.11 ರಷ್ಟು ಸಾವುಗಳು ಭಾರತದಲ್ಲಿ ಸಂಭವಿಸುತ್ತವೆ ಎನ್ನಲಾಗಿದೆ. ಆದ್ದರಿಂದ, ರಸ್ತೆಯಲ್ಲಿ ಅತಿರೇಕ ಮತ್ತು ಅಜಾಗರೂಕತೆಯಿಂದ ವಾಹನ ಚಲಾಯಿಸುವವರಿಂದ ವಿಶೇಷವಾಗಿ ಜಾಗೃತರಾಗಿರಬೇಕು.

ರಸ್ತೆ ಅಪಘಾತದ ಆಘಾತಕಾರಿ ವಿಡಿಯೋ ಹೊರಬಿದ್ದಿದೆ
ಸದ್ಯ ಇಂತಹ ರಸ್ತೆ ಅಪಘಾತದ (Horrific Accident) ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪಿಕಪ್ ಟ್ರಕ್ ಹಿಂದಿನಿಂದ ಬಂದು ಟ್ರ್ಯಾಕ್ಟರ್ ಚಾಲಕನಿಗೆ ಡಿಕ್ಕಿ (Truck Hit The Tractor) ಹೊಡೆದಿದೆ. ವಿಡಿಯೋ ನೋಡಿದರೆ ಟ್ರ್ಯಾಕ್ಟರ್ ಚಾಲಕನ ತಪ್ಪೇನೂ ಇಲ್ಲ ಎಂದು ಅನಿಸುತ್ತಿದೆ. ವೈರಲ್ ಆದ ವೀಡಿಯೊದಲ್ಲಿ (Accident Video), ಟ್ರ್ಯಾಕ್ಟರ್ ತನ್ನದೇ ಆದ ವೇಗದಲ್ಲಿ ರಸ್ತೆಯಲ್ಲಿ ಹೋಗುತ್ತಿರುವುದನ್ನು ನೀವು ನೋಡಬಹುದು, ಆದರೆ ಟ್ರಕ್ ಅದರ ಹಿಂದೆಯೇ ಇತ್ತು ಮತ್ತು ನಂತರ ಅದು ಬಲವಾಗಿ ಡಿಕ್ಕಿ ಹೊಡೆದಿದೆ. ಈ ವಿಡಿಯೋ ಆಘಾತಕಾರಿಯಾಗಿದ್ದು, ಟ್ರಕ್ ಚಾಲಕ ಟ್ರಾಕ್ಟರ್ ಅನ್ನು ಎಡಭಾಗದಿಂದ ಅತಿವೇಗದಿಂದ ಡಿಕ್ಕಿ ಹೊಡೆದಿದ್ದರಿಂದ ಟ್ರ್ಯಾಕ್ಟರ್ ಪಲ್ಟಿಯಾಗಿದೆ.

ಟ್ರ್ಯಾಕ್ಟರ್ ಚಾಲಕನ ಸ್ಥಿತಿ ಕುರಿತು ಮಾಹಿತಿ ಲಭ್ಯವಾಗಿಲ್ಲ
ಅಪಘಾತದಲ್ಲಿ ಟ್ರ್ಯಾಕ್ಟರ್ ಚಾಲಕನ ಸ್ಥಿತಿ ತಿಳಿದುಬಂದಿಲ್ಲ. ಆದರೆ, ಅಪಘಾತದ ತೀವ್ರತೆಯನ್ನು ಗಮನಿಸಿದರೆ ಅವರು ಗಾಯಗೊಂಡಿರುವ ಸಾಧ್ಯತೆಯಿದೆ. ಆಘಾತಕಾರಿ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ jayesh_jangid_rj04 ಎಂಬ ಹೆಸರಿನಲ್ಲಿ ಹಂಚಿಕೊಳ್ಳಲಾಗಿದೆ, ಇದರ ಶೀರ್ಷಿಕೆಯಲ್ಲಿ  'ಸಾವಧಾನಿ ಹಟಿ, ದುರ್ಘಟನಾ ಘಟಿ (ಜಾಗರೂಕತೆ ತಪ್ಪಿದರೆ, ಅಪಘಾತ ಸಂಭವಿಸುತ್ತದೆ)' ಎಂದು ಬರೆಯಲಾಗಿದೆ. ಈ ವೀಡಿಯೊವನ್ನು (Viral Video) ಇದುವರೆಗೆ 7.7 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ ಮತ್ತು 3.5 ಮಿಲಿಯನ್‌ಗಿಂತಲೂ ಹೆಚ್ಚು ಜನರು ವೀಡಿಯೊವನ್ನು ಇಷ್ಟಪಟ್ಟಿದ್ದಾರೆ. ಈ ವಿಡಿಯೋಗೆ ಜನರು ವಿಭಿನ್ನ ರೀತಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಇದನ್ನೂ ಓದಿ-ಈ 4 ರಾಶಿಯವರ ಮೇಲೆ ಸದಾ ಇರುತ್ತದೆ ಲಕ್ಷ್ಮೀ ಕೃಪೆ, ಜೀವನಪೂರ್ತಿ ಶ್ರೀಮಂತರಾಗಿಯೇ ಇರುತ್ತಾರೆ ಇವರು

ವಿಡಿಯೋ ನೋಡಿ-

ಇದನ್ನೂ ಓದಿ-'ಧರ್ಮ ಸಂಸತ್'ನಲ್ಲಿನ ವಿವಾದಾತ್ಮಕ ಹೇಳಿಕೆಗಳಿಗೆ RSS ಮುಖ್ಯಸ್ಥ ಮೋಹನ್ ಭಾಗವತ್ ತೀವ್ರ ಆಕ್ಷೇಪ

ವಿಡಿಯೋ ನೋಡಿದ ವೀಕ್ಷಕರ ಪ್ರತಿಕ್ರಿಯೆ ಹೇಗಿದೆ?
ವಿಡಿಯೋ ವಿಕ್ಷೀಸಿದ ಓರ್ವ ಬಳಕೆದಾರ 'ಟ್ರ್ಯಾಕ್ಟರ್ ಡ್ರೈವರ್ ಯಾವುದೇ ಕಾರಣವಿಲ್ಲದೆ ಪ್ರಾಣ ಕಳೆದುಕೊಂಡಿರಬೇಕು' ಎಂದು ಹೇಳಿದ್ದರೆ ಮತ್ತೋರ್ವ ಬಳಕೆದಾರ 'ಈ ಅಪಾಯಕಾರಿ ಅಪಘಾತದಲ್ಲಿ ಟ್ರ್ಯಾಕ್ಟರ್ ಚಾಲಕ ಬದುಕುಳಿದಿರಲಿಕ್ಕಿಲ್ಲ' ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರ ಟ್ರಕ್ ಬ್ರೇಕ್ ಫೇಲ್ ಆಗಿರುವ ಸಾಧ್ಯತೆ ಇದೆ. ಏಕೆಂದರೆ ಟ್ರಕ್ ಡ್ರೈವರ್ ಪದೇ ಪದೇ ಹಾರ್ನ್ ಹಾಕುತ್ತಿದ್ದಾನೆ' ಎಂದಿದ್ದಾನೆ.

ಇದನ್ನೂ ಓದಿ-ICSE, ISC Result 2022: ಐಸಿಎಸ್ಇ ಹಾಗೂ ಐಎಸ್ ಸಿ ಸೆಮಿಸ್ಟರ್ 1 ಫಲಿತಾಂಶ ಪ್ರಕಟ, ಇಲ್ಲಿ ಫಲಿತಾಂಶ ಪರಿಶೀಲಿಸಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News