Lion funny video: ಪಂಜರದೊಳಗಿದ್ದರೇನಂತೆ! ಗೇಲಿ ಮಾಡಿದರೆ ಹೀಗೂ ತಿರುಗಿ ಬೀಳುತ್ತದೆ ಕಾಡಿನ ರಾಜ!

Lion Funny Video: ಇಂದು ನಾವು ಹಂಚಿಕೊಳ್ಳುತ್ತಿರುವ ವೀಡಿಯೊ ನೋಡಿದ್ರೆ ನೀವು ಹೊಟ್ಟೆ ಹುಣ್ಣಾಗುವಂತೆ ನಗುವುದಲ್ಲದೆ, ಸಿಂಹ ಒಳ್ಳೆಯ ಪಾಠ ಕಲಿಸಿದೆ ಎಂದು ಹೇಳುತ್ತೀರಿ. ಒಂದು ಸಿಂಹವನ್ನು ಬೋನಿನೊಳಗೆ ಇಡಲಾಗಿದೆ. ಈ ಸಿಂಹವನ್ನು ನೋಡಲು ಅನೇಕರು ಅಲ್ಲಿಗೆ ಬರುತ್ತಿದ್ದಾರೆ. ಆದರೆ ಒಂದು ಬಾರಿ ಕೋಪಗೊಂಡ ಸಿಂಹ ಪ್ರವಾಸಿಗರ ಮೇಲೆ ಮೂತ್ರವನ್ನೇ ಮಾಡುತ್ತದೆ.

Written by - Bhavishya Shetty | Last Updated : Apr 6, 2023, 05:50 PM IST
    • ಜೂ’ಗೆ ಭೇಟಿ ನೀಡುವವರು ತಮ್ಮ ನಡವಳಿಕೆಯಿಂದ ಪ್ರಾಣಿಗಳಿಗೆ ತೊಂದರೆಯಾಗದಂತೆ ನಡೆದುಕೊಳ್ಳುವುದು ಉತ್ತಮ
    • ಇದಕ್ಕೆ ಸಂಬಂಧಿಸಿದ ನಿಯಮಗಳನ್ನು ಅಲ್ಲಿ ಮೊದಲೇ ತಿಳಿಸಿಕೊಡುತ್ತಾರೆ.
    • ಒಂದು ಬಾರಿ ಕೋಪಗೊಂಡ ಸಿಂಹ ಪ್ರವಾಸಿಗರ ಮೇಲೆ ಮೂತ್ರವನ್ನೇ ಮಾಡುತ್ತದೆ
Lion funny video: ಪಂಜರದೊಳಗಿದ್ದರೇನಂತೆ! ಗೇಲಿ ಮಾಡಿದರೆ ಹೀಗೂ ತಿರುಗಿ ಬೀಳುತ್ತದೆ ಕಾಡಿನ ರಾಜ! title=
funny video

Lion Funny Video: ಅನೇಕ ಜನರಿಗೆ ಮೃಗಾಲಯಕ್ಕೆ ಹೋಗುವಿದೆಂದರೆ ಪಂಚಪ್ರಾಣ. ಅಲ್ಲಿರುವ ವಿಧವಿಧವಾದ ಪ್ರಾಣಿ ಪಕ್ಷಿಗಳನ್ನು ಕಂಡು ಮನಸ್ಸು ಹಗುರ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರು ಸಫಾರಿಗೆ ಕೂಡ ಹೋಗುತ್ತಾರೆ. ಆದರೆ ಮೃಗಾಲಯಕ್ಕೆ ಭೇಟಿ ನೀಡುವವರು ತಮ್ಮ ನಡವಳಿಕೆಯಿಂದ ಪ್ರಾಣಿಗಳಿಗೆ ತೊಂದರೆಯಾಗದಂತೆ ಅಥವಾ ಕಿರಿಕಿರಿಗೊಳ್ಳದಂತೆ ನಡೆದುಕೊಳ್ಳುವುದು ಉತ್ತಮ. ಇದಕ್ಕೆ ಸಂಬಂಧಿಸಿದ ನಿಯಮಗಳನ್ನು ಅಲ್ಲಿ ಮೊದಲೇ ತಿಳಿಸಿಕೊಡುತ್ತಾರೆ.

ಇದನ್ನೂ ಓದಿ: ದೇಶದೆಲ್ಲೆಡೆ 24 ಗಂಟೆಯಲ್ಲಿ 5000 ಸಾವಿರ ಕೊರೊನಾ ಪ್ರಕರಣ ದಾಖಲು

ಇಂದು ನಾವು ಹಂಚಿಕೊಳ್ಳುತ್ತಿರುವ ವೀಡಿಯೊ ನೋಡಿದ್ರೆ ನೀವು ಹೊಟ್ಟೆ ಹುಣ್ಣಾಗುವಂತೆ ನಗುವುದಲ್ಲದೆ, ಸಿಂಹ ಒಳ್ಳೆಯ ಪಾಠ ಕಲಿಸಿದೆ ಎಂದು ಹೇಳುತ್ತೀರಿ. ಒಂದು ಸಿಂಹವನ್ನು ಬೋನಿನೊಳಗೆ ಇಡಲಾಗಿದೆ. ಈ ಸಿಂಹವನ್ನು ನೋಡಲು ಅನೇಕರು ಅಲ್ಲಿಗೆ ಬರುತ್ತಿದ್ದಾರೆ. ಆದರೆ ಒಂದು ಬಾರಿ ಕೋಪಗೊಂಡ ಸಿಂಹ ಪ್ರವಾಸಿಗರ ಮೇಲೆ ಮೂತ್ರವನ್ನೇ ಮಾಡುತ್ತದೆ. ಪ್ರವಾಸಿಗರು ಬಂದು ಸಿಂಹವನ್ನು ಗೇಲಿ ಮಾಡಿದ್ದಾರೆ. ಇದೇ ಕೋಪದಿಂದ ಹಿಂತಿರುಗಿದ ಸಿಂಹ, ಅವರ ಮೇಲೆ ಮೂತ್ರ ವಿಸರ್ಜನೆ ಮಾಡಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಇನ್ನು ಕಾಡಿನಲ್ಲಿ ರಾಜಾರೋಷವಾಗಿ ಸುತ್ತಾಡಬೇಕಿದ್ದ ರಾಜ ಸಿಂಹವನ್ನು ಹೀಗೆ ಸಣ್ಣ ಪಂಜರಕ್ಕೆ ಸೀಮಿತಗೊಳಿಸುವುದು, ಅವುಗಳನ್ನು ಖಿನ್ನತೆ ಮತ್ತು ದುಃಖಕ್ಕೆ ದೂಡುತ್ತವೆ.

ಸಿಂಹದ ವಿಡಿಯೋ ನೋಡಿ:

pic.twitter.com/maFkppj2DJ
— Videos You Scroll Internet For (@ScrollVideos) April 4, 2023

 

ಇದನ್ನೂ ಓದಿ: "ತಾಜ್ ಮಹಲ್ ಪ್ರೀತಿಯ ಸಂಕೇತವಲ್ಲ"ಎಂದು ವಿವಾದಾತ್ಕಕ ಹೇಳಿಕೆ ನೀಡಿದ ಬಿಜೆಪಿ ಶಾಸಕ

ಇನ್ನು ಈ ವಿಡಿಯೋವನ್ನು “Videos For Scroll Internet For” ಎಂಬ ಪೇಜ್ ಟ್ಟಿಟ್ಟರ್’ನಲ್ಲಿ ಹಂಚಿಕೊಂಡಿದೆ. ಈಗಾಗಲೇ ಈ ವಿಡಿಯೋವನ್ನು ಸುಮಾರು 63 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದು, 355ಕ್ಕೂ ಹೆಚ್ಚು ಲೈಕ್ಸ್ ಬಂದಿವೆ, ಅನೇಕ ಜನ ಕಮೆಂಟ್ ಕೂಡ ಮಾಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News