LIC ಕುರಿತು ಈ Fake Call ಬಂದರೆ ಕೂಡಲೇ ಎಚ್ಚೆತ್ತುಕೊಳ್ಳಿ....!

ಗ್ರಾಹಕರಿಗೆ ವಂಚನೆ ಎಸಗುವ ಉದ್ದೇಶದಿಂದ ಅಧಿಕಾರಿಗಳು ಹಾಗೂ ನಿಯಂತ್ರಕರ ಸೋಗು ಧರಿಸುವ ಮೂಲಕ ವಂಚನೆ ಎಸಗಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ. ದೊಡ್ಡ ಲಾಟರಿ ಹಾಗೂ ದೊಡ್ಡ ಭರವಸೆಗಳನ್ನು ನೀಡಿ ನಕಲಿ ಯೋಜನೆಗಳಿಗೆ ಜನರಿಗೆ ಆಮೀಷವೊಡ್ಡಿ ಈ ಕರೆಗಳನ್ನು ಮಾಡಲಾಗುತ್ತಿದೆ.

Last Updated : Jul 10, 2020, 11:11 PM IST
LIC ಕುರಿತು ಈ Fake Call ಬಂದರೆ ಕೂಡಲೇ ಎಚ್ಚೆತ್ತುಕೊಳ್ಳಿ....! title=

ನವದೆಹಲಿ: ಒಂದು ವೇಳೆ ನೀವೂ ಕೂಡ ಭಾರತೀಯ ಜೀವವಿಮಾ ನಿಗಮದ ಗ್ರಾಹಕರಾಗಿದ್ದರೆ, ಕಂಪನಿ ನಕಲಿ ಕರೆಗಳ ಕುರಿತು ಒಂದು ವಿಶೇಷ ಎಚ್ಚರಿಕೆಯ ಸಂದೇಶ ರವಾನಿಸಿದೆ. ದೇಶದ ಅತ್ಯಂತ ದೊಡ್ಡ ಜೀವವಿಮಾ ನಿಗಮ ಕಂಪನಿಯಾಗಿರುವ ಭಾರತೀಯ ಜೀವವಿಮಾ ನಿಗಮ ತನ್ನ ಗ್ರಾಹಕರಿಗೆ LIC ಅಧಿಕಾರಿ, ಏಜೆಂಟ್, IRDAI ಅಧಿಕಾರಿ, EIC ಅಧಿಕಾರಿಗಳ ಹೆಸರಿನಲ್ಲಿ ಬರುವ ಫೇಕ್ ಕಾಲ್ ಗಳಿಂದ ಜಾಗರೂಕರಾಗಿರಲು ಎಚ್ಚರಿಕೆ ನೀಡಿದೆ.

ಗ್ರಾಹಕರಿಗೆ ವಂಚನೆ ಎಸಗುವ ಉದ್ದೇಶದಿಂದ ಅಧಿಕಾರಿಗಳು ಹಾಗೂ ನಿಯಂತ್ರಕರ ಸೋಗು ಧರಿಸುವ ಮೂಲಕ ವಂಚನೆ ಎಸಗಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ. ದೊಡ್ಡ ಲಾಟರಿ ಹಾಗೂ ದೊಡ್ಡ ಭರವಸೆಗಳನ್ನು ನೀಡಿ ನಕಲಿ ಯೋಜನೆಗಳಿಗೆ ಜನರಿಗೆ ಆಮೀಷವೊಡ್ಡಿ ಈ ಕರೆಗಳನ್ನು ಮಾಡಲಾಗುತ್ತಿದೆ. ಈ ಕುರಿತು ಮಾಹಿತಿ ನೀಡಿರುವ ಕಂಪನಿ, ಗ್ರಾಹಕರಿಗೆ ಕಂಪನಿ ಫೋನ್ ಕರೆ ಮಾಡುವ ಮೂಲಕ ಯಾವುದೇ ರೀತಿಯ ಬೋನಸ್ ನೀಡುವುದನ್ನು ಘೋಷಿಸುವುದಿಲ್ಲ ಎಂದಿದೆ. ಅಷ್ಟೇ ಅಲ್ಲ ಯಾವುದೇ ಚಾಲ್ತಿಯಲ್ಲಿರುವ ಪಾಲಸಿಯನ್ನು ಬಂದ್ ಮಾಡಲು ಕಂಪನಿ ತನ್ನ ಗ್ರಾಹಕರಿಗೆ ಪ್ರೋತ್ಸಾಹಿಸುವುದಿಲ್ಲ ಎಂದಿದೆ.

ಫೇಕ್ ಕಾಲ್ ಬಂದರೆ ಈ ವಿಷಯಗಳನ್ನು ಗಮನಿಸಿ
-LIC ಯ ಅಧಿಕೃತ ವೆಬ್ ಸೈಟ್ ಆಗಿರುವ www.licindia.inಗೆ ಭೇಟಿ ನೀಡಿ ಪಾಲಸಿ ಕುರಿತಾದ ಮಾಹಿತಿಯನ್ನು ಪರಿಶೀಲಿಸಿ.  ನೀವು ಕಸ್ಟಮರ್ ಕೇರ್ ಸಂಖ್ಯೆಗೆ ಕರೆ ಮಾಡುವ ಮೂಲಕ ಕೂಡ ಮಾಹಿತಿ ಪಡೆಯಬಹುದು. ಬೇಕಾದರೆ ಹತ್ತಿರದ LIC ಶಾಖೆಗೂ ಕೂಡ ನೀವು ಭೇಟಿ ನೀಡಿ ವಿಚಾರಿಸಬಹುದು.
- ಯಾವುದೇ ಕರೆ ನಿಮಗೆ ಶಂಕಿತ ಕರೆ ಎನಿಸಿದರೆ, ನಿಮ್ಮ ಅಧಿಕಾರ ಕ್ಷೇತ್ರದಲ್ಲಿ ಆ ಫೋನ್ ನಂಬರ್ ಜೊತೆಗೆ ದೂರು ದಾಖಲಿಸಿ ಎಂದು LIC ಸಲಹೆ ನೀಡಿದೆ.
- spuriouscalls@licindia.com ಗೆ ಇ-ಮೇಲ್ ಮಾಡುವ ಮೂಲಕ ಕೂಡ ನೀವು ಶಂಕಿತ ಕಾಲ್ ಕುರಿತು ದೂರು ದಾಖಲಿಸಬಹುದಾಗಿದೆ.

ಸುಳ್ಳು ಕರೆ ಬಂದರೆ ಈ ಮಾಹಿತಿ ಹಂಚಿಕೊಳ್ಳಬೇಡಿ
- ಅನ್ ವೆರಿಫೈಡ್ ಕಾಲ್ ಗೆ ಎಂಟರ್ಟೈನ್ ಮಾಡಬೇಡಿ ಎಂದು LIC ಹೇಳಿದೆ.
- ಕರೆ ಮಾಡುವ ವ್ಯಕ್ತಿ ಒಂದು ವೇಳೆ ನಿಮಗೆ ಹೆಚ್ಚಿನ ಲಾಭ ನೀಡುವ ಕುರಿತು ಭರವಸೆ ನೀಡಿದರೆ ಹಾಗೂ ನಿಮಗೆ ನಿಮ್ಮ ಪಾಲಸಿ ಸರೆಂಡರ್ ಮಾಡಲು ಒತ್ತಾಯಿಸುತ್ತಿದ್ದರೆ, ಅಂತಹ ವ್ಯಕ್ತಿಯನ್ನು ನಂಬಬೇಡಿ. ಹಾಗೂ ನಿಮ್ಮ ಪಾಲಸಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಬೇಡಿ.
- ಲೈಫ್ ಇನ್ಸೂರೆನ್ಸ್ ಪಾಲಸಿಯಲ್ಲಿ ಅಧಿಕ ಲಾಭಕ್ಕಾಗಿ ಆಸೆ ಪಡಬೇಡಿ.
- ಎಕ್ಸ್ಟ್ರಾ ಬೋನಸ್ ಹಾಗೂ ಹೆಚ್ಚಿನ ಲಾಭ ನೀಡುವುದಾಗಿ ಹೇಳುವವರ ಆಮೀಷಕ್ಕೆ ಒಳಗಾಗಬೇಡಿ.
- ಕರೆ ಮಾಡುವ ಯಾವುದೇ ವ್ಯಕ್ತಿಗೆ ನಿಮ್ಮ ಪಾಲಸಿ ಕುರಿತಾದ ಡಿಟೆಲ್ಸ್/ ಇತರ ಯಾವುದೇ ಮಾಹಿತಿ ಹಂಚಿಕೊಳ್ಳಬೇಡಿ.

Trending News