ಜಮ್ಮು-ಕಾಶ್ಮೀರದ ಸೇನಾ ಶಿಬಿರಗಳ ಮೇಲೆ ದಾಳಿ ನಡೆಸಲು LeT ಉಗ್ರರ ಸಂಚು; ಗುಪ್ತಚರ ವರದಿ

ಮೂಲಗಳ ಪ್ರಕಾರ, ಸಾಂಬಾ ಜಿಲ್ಲೆಯ ಬರಿ ಬ್ರಾಹ್ಮಣ ಶಿಬಿರ ಮತ್ತು ಜಮ್ಮು ಪ್ರದೇಶದ ಸುಂಜವಾನ್ ಮತ್ತು ಕಲುಚಕ್ ಸೇನಾ ಶಿಬಿರಗಳ ಮೇಲೆ ಭಯೋತ್ಪಾದಕ ದಾಳಿ ನಡೆಸುವ ಸಾಧ್ಯತೆ ಇದೆ.

Last Updated : Sep 9, 2019, 09:57 AM IST
ಜಮ್ಮು-ಕಾಶ್ಮೀರದ ಸೇನಾ ಶಿಬಿರಗಳ ಮೇಲೆ ದಾಳಿ ನಡೆಸಲು LeT ಉಗ್ರರ ಸಂಚು; ಗುಪ್ತಚರ ವರದಿ title=
File image

ಶ್ರೀನಗರ: ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೈಬಾ (LeT) ಜಮ್ಮು ಮತ್ತು ಕಾಶ್ಮೀರದ ಭಾರತೀಯ ಸೇನೆ ಮತ್ತು ಇತರ ಭದ್ರತಾ ಪಡೆಗಳ ಶಿಬಿರಗಳ ಮೇಲೆ ದಾಳಿ ನಡೆಸಲು ಯೋಜಿಸುತ್ತಿದೆ. ಭದ್ರತಾ ಸ್ಥಾಪನೆಯ ಮೇಲೆ ದಾಳಿ ನಡೆಸಲು ನಾಲ್ಕು ಎಲ್‌ಇಟಿ ಭಯೋತ್ಪಾದಕರು ಭಾಗಿಯಾಗಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳ ಮೂಲಗಳು ಜೀ ನ್ಯೂಸ್‌ಗೆ ತಿಳಿಸಿವೆ.

ಮೂಲಗಳ ಪ್ರಕಾರ, ಸಾಂಬಾ ಜಿಲ್ಲೆಯ ಬರಿ ಬ್ರಾಹ್ಮಣ ಶಿಬಿರ ಮತ್ತು ಜಮ್ಮು ಪ್ರದೇಶದ ಸುಂಜವಾನ್ ಮತ್ತು ಕಲುಚಕ್ ಸೇನಾ ಶಿಬಿರಗಳ ಮೇಲೆ ಭಯೋತ್ಪಾದಕ ದಾಳಿ ನಡೆಸುವ ಸಾಧ್ಯತೆ ಇದೆ. ಶೋಪಿಯಾನ್ ಪ್ರದೇಶದ ಮೂಲಕ ಒಳನುಸುಳಿ, ನಂತರ ಜಮ್ಮು ತಲುಪಲು ಭಯೋತ್ಪಾದಕರು ಯೋಜಿಸುತ್ತಿದ್ದಾರೆ ಎಂಬ ವರದಿಗಳಿವೆ.

ಕಳೆದ ವಾರ 50 ಉಗ್ರರು ಭಾರತದ ಒಳನುಸುಳಲು ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಕಾಯುತ್ತಿದ್ದಾರೆ ಎಂದು ಜೀ ನ್ಯೂಸ್ ವರದಿ ಮಾಡಿತ್ತು. ಗುಲ್ಮಾರ್ಗ್‌ನಿಂದ ಬಂಧಿಸಲ್ಪಟ್ಟ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರು ಈ ವಿಷಯವನ್ನು ಬಹಿರಂಗಪಡಿಸಿದ್ದರು.

ಪಾಕಿಸ್ತಾನ ಸೇನೆಯು ಭಾರತದೊಳಗೆ ಭಯೋತ್ಪಾದಕರು ಒಳನುಸುಳಲು ಸಹಾಯ ಮಾಡುವ ಸಲುವಾಗಿ ನಿಯಂತ್ರಣ ರೇಖೆಯ ಜೊಹ್ಲಿ, ಬಾರ್ಗಿ ಮತ್ತು ನ್ಯೂ ಬಾಥ್ಲಾದಲ್ಲಿ ತನ್ನ ಹುದ್ದೆಗಳನ್ನು ಬಳಸುತ್ತಿದೆ ಎಂದು ಮೂಲಗಳು ಜೀ ಮೀಡಿಯಾಕ್ಕೆ ತಿಳಿಸಿವೆ. ಕಚಾರ್ಬನ್ ಲಾಂಚಿಂಗ್ ಪ್ಯಾಡ್‌ನಲ್ಲಿ ಭಯೋತ್ಪಾದಕರು ಭಾರತವನ್ನು ಪ್ರವೇಶಿಸಲು ಹೊಂಚು ಹಾಕಿ ಕಾಯುತ್ತಿದ್ದರೆ ಎನ್ನಲಾಗಿದೆ.

ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಲು ಕಾಶ್ಮೀರ ಕಣಿವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಗುಂಪುಗಳಿಗೆ ಪಾಕಿಸ್ತಾನದ ಐಎಸ್‌ಐ ಆದೇಶಿಸಿದೆ ಎಂದು ಗುಪ್ತಚರ ಸಂಸ್ಥೆಗಳ ಮೂಲಗಳು ಜೀ ನ್ಯೂಸ್‌ಗೆ ತಿಳಿಸಿವೆ. ಭಯೋತ್ಪಾದಕರು ಮತ್ತು ಅವರ ಪಾಕಿಸ್ತಾನ ಮೂಲದ ಹ್ಯಾಂಡ್ಲರ್ಗಳ ನಡುವಿನ ಸಂದೇಶಗಳನ್ನು ತಡೆದ ನಂತರ ಐಎಸ್ಐನ ಯೋಜನೆ ಬಹಿರಂಗವಾಯಿತು.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಕಾಶ್ಮೀರದಲ್ಲಿ ಬೀಡುಬಿಟ್ಟಿರುವ ಭದ್ರತಾ ಪಡೆಗಳ ವಿರುದ್ಧ ಕಾಶ್ಮೀರ ಕಣಿವೆಯಲ್ಲಿ ಉದ್ವಿಗ್ನತೆ ಮತ್ತು ಪ್ರದೇಶದ ಜನರನ್ನು ಪ್ರಚೋದಿಸುವುದು ಐಎಸ್‌ಐನ ಮುಖ್ಯ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.

ಜಮ್ಮು ಮತ್ತು ಕಾಶ್ಮೀರದೊಳಗೆ ಗರಿಷ್ಠ ಭಯೋತ್ಪಾದಕರು ಪ್ರವೇಶಿಸುವಂತೆ ಪಾಕಿಸ್ತಾನ ಪದೇ ಪದೇ ಪ್ರಯತ್ನಿಸುತ್ತಿದೆ ಎಂದು ಸರ್ಕಾರ ಮತ್ತು ಭಾರತೀಯ ಸೇನೆ ದೃಢಪಡಿಸಿದೆ.

ಇತ್ತೀಚೆಗೆ ಪಾಕಿಸ್ತಾನದಿಂದ ಬಂದ ಸಂದೇಶಗಳನ್ನು ತಡೆದಿದ್ದು, ಇದು ನೆರೆಯವರು ಕಣಿವೆಯಲ್ಲಿ ಶಾಂತಿಯನ್ನು ಭಂಗಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸೂಚಿಸಿತ್ತಿದೆ ಎಂಬ ಅಂಶವನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಶನಿವಾರ ತಿಳಿಸಿದ್ದರು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370 ನೇ ವಿಧಿಯನ್ನು ರದ್ದುಪಡಿಸುವುದನ್ನು ಹೆಚ್ಚಿನ ಕಾಶ್ಮೀರಿಗಳು ಬೆಂಬಲಿಸಿದರೆ, ಗಡಿಯುದ್ದಕ್ಕೂ ಇರುವವರು ತೊಂದರೆಗಳನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ದೋವಲ್ ಸ್ಪಷ್ಟವಾಗಿ ಹೇಳಿದ್ದಾರೆ.

Trending News