ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಇದೇ ಅಕ್ಟೋಬರ್ 2 ರಂದು ಸುಪ್ರೀಂಕೋರ್ಟ್ ನಿಂದ ನಿವೃತ್ತಿ ಹೊಂದಲಿದ್ದಾರೆ.ಆದರೆ ತಿಂಗಳಿಗೂ ಕಡಿಮೆ ಕಾಲಾವಧಿ ಇರುವ ಈ ಸಂದರ್ಭದಲ್ಲಿ ಇನ್ನು ಹಲವು ಮಹತ್ವದ ವಿಷಯಗಳ ಕುರಿತಾದ ತೀರ್ಪುಗಳು ಬಾಕಿ ಇವೆ.ಈ ತೀರ್ಪುಗಳು ದೇಶದ ಸಂವಿಧಾನದ ಮತ್ತು ರಾಜಕೀಯ ಚಿತ್ರಣವನ್ನೇ ಬದಲಿಸಲಿವೆ ಎಂದು ಹೇಳಬಹುದು. ಆದ್ದರಿಂದ ಅಂತ ಇನ್ನು ಕಾಯ್ದಿರಿಸಿರುವ ತೀರ್ಪುಗಳತ್ತ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ.
ಆಧಾರದ ಕಾನೂನು ಮಾನ್ಯತೆ
ಆಧಾರ ಯೋಜನೆ ಕಾಲಾವಧಿಯನ್ನು ಪ್ರಶ್ನಿಸುವ ವಿಚಾರನೆಯೊಂದು 38 ದಿನಗಳ ಕಾಲ ಮ್ಯಾರಥಾನ್ ವಿಚಾರಣೆ ನಡೆಯಿತು. ಕೇಶವಾನಂದ ಭಾರತಿ ಪ್ರಕರಣದ ನಂತರ ಅತಿ ಧೀರ್ಘ ವಿಚಾರಣೆ ಇದಾಗಿದೆ ಎಂದು ಹೇಳಲಾಗುತ್ತದೆ. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ,ಎ.ಕೆ ಸಿಕ್ರಿ,ಎ.ಎಂ.ಖಾನ್ವಿಲ್ಕರ್, ಡಿ.ವೈ ಚಂದ್ರಚೂಡ್, ಮತ್ತು ಅಶೋಕ್ ಭೂಷಣ ಅವರನ್ನು ಒಳಗೊಂಡ ಪೀಠವು ಮೇ 10ಕ್ಕೆ ಇದರ ಅಂತಿಮ ತೀರ್ಪನ್ನು ಕಾಯ್ದಿರಿಸಲಾಗಿದೆ.
ಅರ್ಜಿದಾರರು ಪ್ರಮುಖವಾಗಿ ತಮ್ಮ ಅರ್ಜಿಯಲ್ಲಿ ಆಧಾರದಲ್ಲಿನ ಬಯೋಮೆಟ್ರಿಕ್ ಪದ್ದತಿಯನ್ನು ಪರ್ಶ್ನಿಸಿದ್ದಾರೆ. ಆಧಾರ ಕಾಯ್ದೆ ಸಂಸತ್ತಿನ ಮೂಲಕ 2016 ಜಾರಿಗೆ ಬಂದಿದೆ. ಅಂದಿನಿಂದ ಕಾಯ್ದೆಯಲ್ಲಿನ ಹಲವು ನಿಯಮಗಳನ್ನು ಪ್ರಶ್ನಿಸಲಾಗಿದೆ.ಇನ್ನೊಂದೆಡೆಗೆ ಈ ಕಾಯ್ದೆಯನ್ನು ಹಣಕಾಸು ಕಾಯ್ದೆ ರೀತಿ ಜಾರಿಗೆ ತಂದಿದ್ದುನ್ನು ಕೂಡ ಪ್ರಶ್ನಿಸಲಾಗಿದೆ.ಖಾಸಗಿ ಹಕ್ಕು ಮೂಲಭೂತ ಹಕ್ಕಾಗಿರುವುದರಿಂದ ಈ ಕುರಿತಾಗಿಯೂ ಕೂಡ ಆಧಾರ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಪ್ರಶ್ನೆ ಎತ್ತಲಾಗಿದೆ.ಆದ್ದರಿಂದ ಈ ತೀರ್ಪು ಖಂಡಿತವಾಗಿ ಪುಟ್ಟಸ್ವಾಮಿ ತೀರ್ಪಿನಲ್ಲಿ ಖಾಸಗಿ ಹಕ್ಕುನ್ನು ಮೂಲಭೂತ ಹಕ್ಕು ಎಂದು ತೀರ್ಪು ನೀಡಿದ್ದರ ಬಗ್ಗೆ ಮತ್ತೆ ಪುನರಾವಲೋಕನ ಮಾಡಲಿದೆ.
ಐಪಿಸಿ ಸೆಕ್ಷನ್ 377ರ ನಿಯಮ ವಿಸ್ತರಣೆ
ಐಪಿಸಿ ಸೆಕ್ಷನ್ 377 ಸಲಿಂಗಿ ಮತ್ತು ಸ್ವಾಭಾವಿಕವಲ್ಲದ ಲೈಂಗಿಕತೆಯನ್ನು ಅಪರಾಧ ಎಂದು ಹೇಳುತ್ತದೆ.ಈ ನಿಯಮ ಪ್ರಮುಖವಾಗಿ ವಿಕ್ಟೋರಿಯನ್ ನೈತಿಕ ನಿಯಮದ ಪ್ರೆರಣೆಯನ್ನು ಹೊಂದಿದೆ.ಈಗ ಈ ವಿಚಾರವಾಗಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾರನ್ನು ಒಳಗೊಂಡ ಸಂವಿಧಾನಿಕ ಪೀಠ ಈ ತೀರ್ಪನ್ನು ಜುಲೈ 17ಕ್ಕೆ ಕಾಯ್ದಿರಿಸಲಾಗಿದೆ.
ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ
ಈ ಪ್ರಕರಣ ಹಲವಾರು ಸಂವಿಧಾನಾತ್ಮಕ ಸವಾಲುಗಳನ್ನು ಎದುರಿಸಲಿದೆ.ಆ ಮೂಲಕ ರಾಜ್ಯವು ಧಾರ್ಮಿಕ ಚಟುವಟಿಕೆಗಳಲ್ಲಿ ಮಧ್ಯಸ್ಥಿಕೆ ವಹಿಸಬಹುದೇ ಎನ್ನುವುದನ್ನು ಅದು ಪರಿಶೀಲಿಸಲಿದೆ. ಈಗಾಗಲೇ ಸಂವಿಧಾನದ ಅಡಿಯಲ್ಲಿ ವಿಧಿ 25 ರಂತೆ ಸಾಂವಿಧಾನಾತ್ಮಕವಾಗಿ ನೀಡಲಾಗಿರುವ ಧಾರ್ಮಿಕ ಸ್ವಾತಂತ್ರ್ಯ ಮತ್ತು ಇನ್ನೊಂದೆಡೆ ವಿಧಿ 14 ಮತ್ತು 15ರ ಅಡಿಯಲ್ಲಿ ಲಿಂಗದ ಆಧಾರದ ಮೇಲೆ ಮಾಡಲಾಗುತ್ತಿರುವ ಲೈಂಗಿಕ ತಾರತಮ್ಯದ ಸವಾಲನ್ನು ಕೂಡ ಈ ಪ್ರಕರಣ ಚರ್ಚಿಸಲಿದೆ. ಈ ಪ್ರಕರಣದ ವಿಚಾರಣೆ ಅಗಸ್ಟ್ 1 ರಂದು ಕಾಯ್ದಿರಿಸಲಾಗಿದೆ.
ವ್ಯಭಿಚಾರ ಅಪರಾಧದ ವಿಸ್ತರಣೆ
ಈ ಕಾನೂನಿನ ಪ್ರಕಾರ ಸೆಕ್ಷನ್ ಐಪಿಸಿ 497 ಲಿಂಗ ಸಮಾನತೆ,ಖಾಸಗಿ ಮತ್ತು ಘನತೆ ಹಕ್ಕು ಇತ್ಯಾದಿ ವಿಷಯಗಳನ್ನು ಪ್ರಶ್ನಿಸುತ್ತದೆ.ಈ ಕಾನೂನಿನಡಿಯಲ್ಲಿ ಮಹಿಳೆಯನ್ನು ಪರಿಗಣನೆಗೆ ತೆಗೆದುಕೊಳ್ಳದೆ ಇರುವುದನ್ನು ಈಗ ಪ್ರಶ್ನಿಸಲಾಗಿದೆ.ಇದನ್ನು ಸಂವಿಧಾನ ಪೀಠ ಅಗಸ್ಟ್ 8ಕ್ಕೆ ತೀರ್ಪನ್ನು ಕಾಯ್ದಿರಿಸಲಾಗಿದೆ.
ಅಯೋಧ್ಯ ಪ್ರಕರಣ
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ರನ್ನೋಳಗೊಂಡ ತ್ರೀಸದಸ್ಯ ಪೀಠವು ಈ ಹಿಂದೆ 1994 ರಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಈಗ ಕಾಯ್ದಿರಿಸಿದ್ದಾರೆ.ಈ ತೀರ್ಪು ಹಿಂದೆ ಮಸೀದಿಯಲ್ಲಿ ನಮಾಜ್ ಮಾಡುವುದು ಇಸ್ಲಾಮ್ ಅಂಗವಲ್ಲ ಎಂದು ಹೇಳಿತ್ತು. ಈ ಹಿನ್ನಲೆಯಲ್ಲಿ ಈಗ ಸುನ್ನಿ ವಕ್ಪ್ ಬೋರ್ಡ್ ಪರವಾಗಿ ರಾಜೀವ್ ಧವನ್ ಅವರು ಅರ್ಜಿ ಸಲ್ಲಿಸಿದ್ದಾರೆ. ಇಲ್ಲದೆ ಹೋದರೆ ಪೀಠ 2010 ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪನ್ನು ವಿಚಾರಣೆಗೆ ಒಳಪಡಿಸಿ ಮೂರನೇ ಪಕ್ಷ ಸಲ್ಲಿಸಿರುವ ಅರ್ಜಿಯನ್ನು ವಜಾಗೊಳಿಸಲಿದೆ ಎಂದು ಹೇಳಲಾಗಿದೆ.ಆದರೆ ಧವನ್ ಅವರು ಹೇಳವಂತೆ 1994 ರಲ್ಲಿ ನೀಡಿರುವ ತೀರ್ಪನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ವಾದಿಸಿದ್ದಾರೆ.ಈ ಹಿನ್ನಲೆಯಲ್ಲಿ ಈಗ ಈ ತೀರ್ಪನ್ನು ಜುಲೈ 20ಕ್ಕೆ ಕಾಯ್ದಿರಿಸಲಾಗಿದೆ.