ಮೇವು ಹಗರಣ : ಲಾಲುಗೆ 3.5 ವರ್ಷ ಜೈಲು ಶಿಕ್ಷೆ, 5 ಲಕ್ಷ ರೂಪಾಯಿ ತಂಡ ವಿಧಿಸಿದ ಸಿಬಿಐ ನ್ಯಾಯಾಲಯ

  

Last Updated : Jan 6, 2018, 04:56 PM IST
ಮೇವು ಹಗರಣ : ಲಾಲುಗೆ 3.5 ವರ್ಷ ಜೈಲು ಶಿಕ್ಷೆ, 5 ಲಕ್ಷ ರೂಪಾಯಿ ತಂಡ ವಿಧಿಸಿದ ಸಿಬಿಐ ನ್ಯಾಯಾಲಯ  title=

ಪಾಟ್ನಾ /ರಾಂಚಿ:  1996 ರ ಮೇವು ಹಗರಣಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಒಂದನ್ನು ವಿಚಾರಣೆ ನಡೆಸಿದ  ವಿಶೇಷ ಸಿಬಿಐ ನ್ಯಾಯಾಧೀಶ ಶಿವ ಪಾಲ್ ಸಿಂಗ್ ಅವರು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ 3.5 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ. ಜೊತೆಗೆ 5 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದೆ. ಅವರು ದಂಡವನ್ನು ನೀಡಲು ವಿಫಲವಾದರೆ, ಅವರ ಜೈಲು ಶಿಕ್ಷೆಯು ಆರು ತಿಂಗಳು ವಿಸ್ತರಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.

ಬಿರ್ಸಾ ಮುಂಡಾ ಸೆಂಟ್ರಲ್ ಜೈಲ್ ನಿಂದ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಕೇಳಿದ ಸಿಬಿಐ ವಿಶೇಷ ನ್ಯಾಯಾಧೀಶ ಶಿವ ಪಾಲ್ ಸಿಂಗ್ ಅವರ ಮುಂದೆ ಪ್ರತ್ಯಕ್ಷರಾದ ಲಾಲು ನ್ಯಾಯಾಲಯಕ್ಕೆ ತೆರಳಿ ತನ್ನ ಅನಾರೋಗ್ಯ ಮತ್ತು ವಯಸ್ಸಿನ ಕಾರಣದಿಂದಾಗಿ ಅವರು ಕಾನೂನಿನ ಸಹಾನೂಭೂತಿ ಕೇಳಿದರು .69 ರ ಹರೆಯದ ಆರ್ಜೆಡಿ ನಾಯಕನನ್ನು ಡಿಸೆಂಬರ್ 23 ರಂದು ಶಿಕ್ಷೆಯನ್ನು ಪ್ರಕಟಿಸಿದ ನಂತರ  ಕೇಂದ್ರ ಜೈಲಿನಲ್ಲಿ ದಾಖಲಿಸಲಾಗಿದೆ.

ಲಾಲೂ ಅವರನ್ನು ಹೊರತು ಪಡಿಸಿ ಉಳಿದ ಅಪರಾಧಿಗಳು ಶಿಕ್ಷೆ ಪ್ರಮಾಣ ಪ್ರಕಟಿಸುವ ಸಮಯದಲ್ಲಿ ನ್ಯಾಯಾಲಯದಲ್ಲಿ ಹಾಜರಿದ್ದರು. ಇದೇ ಸಂದರ್ಭದಲ್ಲಿ ಕೋರ್ಟಿನ ಸುತ್ತ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. 

Trending News