ಮೂರನೇ 'ಮೇವು' ಪ್ರಕರಣವನ್ನು ಎದುರಿಸಲಿರುವ ಲಾಲು

      

Last Updated : Jan 23, 2018, 08:44 PM IST
ಮೂರನೇ 'ಮೇವು' ಪ್ರಕರಣವನ್ನು ಎದುರಿಸಲಿರುವ ಲಾಲು   title=
ಸಂಗ್ರಹ ಚಿತ್ರ

ನವದೆಹಲಿ: ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ರವರು ಬುಧವಾರದಂದು ಮೇವು ಪ್ರಕರಣಕ್ಕೆ ಸಂಬಂಧಿಸಿದ ಮೂರನೇ ಕೇಸನ್ನು ಎದುರಿಸಲಿದ್ದಾರೆ. 

ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯವು ನೀಡಲಿರುವ ಈ ಪ್ರಕರಣದಲ್ಲಿ ಬಿಹಾರದ  ಮಾಜಿ ಮುಖ್ಯಮಂತ್ರಿ ಜಗನ್ನಾಥ ಮಿಶ್ರಾ ಅವರು ಕೂಡಾ ಭಾಗಿಯಾಗಿದ್ದಾರೆನ್ನಲಾಗಿದೆ. ಈ ಪ್ರಕರಣವು 1990 ರ ದಶಕದ ಆರಂಭದಲ್ಲಿ ಚೈಬಾಸ ಖಜಾನೆಯಿಂದ ಸಮ್ಮತಿಸಿದ ರೂ. 7.1 ಲಕ್ಷ ರೂಪಾಯಿಗಳ ಬದಲಾಗಿ  33.7 ಕೋಟಿ ರೂ.ವಂಚಿಸಿದ ವಿಷಯಕ್ಕೆ ಸಂಬಂಧಿಸಿದೆ ಎಂದು ಹೇಳಲಾಗಿದೆ.
 
ಲಾಲು ಮತ್ತು ಮಿಶ್ರಾ ಹೊರತುಪಡಿಸಿ, 54 ಮಂದಿಗೆ ಈ ಪ್ರಕರಣದಲ್ಲಿ ಅಪರಾಧಿಗಳೆಂದು ಹೇಳಾಗಿದೆ. ಆದ್ದರಿಂದ ಈ ಪ್ರಕರಣದ ಕುರಿತಾದ ತೀರ್ಪನ್ನು ನ್ಯಾಯಾಧೀಶ ಎಸ್.ಎಸ್. ಪ್ರಸಾದ್ ನೀಡಲಿದ್ದಾರೆ, ಎಂದು ತಿಳಿದುಬಂದಿದೆ. ಮೇವು ಹಗರಣದಲ್ಲಿ ಲಾಲು ಪ್ರಸಾದ್ ಈಗಾಗಲೇ ಎರಡು ಪ್ರಕರಣಗಳಲ್ಲಿ ದೋಷಾರೋಪ ಹೊಂದಿದ್ದಾರೆ. ಮಿಶ್ರಾ ಅವರನ್ನು ಮೊದಲ ಪ್ರಕರಣದಲ್ಲಿ ದೋಷಿ ಎಂದು ಪರಿಗಣಿಸಲಾಗಿದೆ.

ರಾಂಚಿಯ ಬಿರ್ಸಾ ಮುಂಡಾ ಜೈಲಿನಲ್ಲಿ ಲಾಲು ಪ್ರಸಾದ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಅವರು ಡಿಸೆಂಬರ್ 23 ರಂದು ಮೇವು ಹಗರಣಕ್ಕೆ ಸಂಬಂಧಪಟ್ಟ ಎರಡನೇಯ ಕೇಸ್ ನಲ್ಲಿ  ದೋಷಿಯಾಗಿದ್ದರು. ಅದರ ನಂತರ ನ್ಯಾಯಾಲಯವು ಮೂರುವರೆ ವರ್ಷ ಜೈಲು ಶಿಕ್ಷೆ  5 ಲಕ್ಷ ರೂ ದಂಡವನ್ನು ವಿಧಿಸಲಾಗಿದೆ.

Trending News