ಗುಜರಾತ್ : ಬಿಪರ್ಜಾಯ್ ಚಂಡಮಾರುತ ಗುರುವಾರ ಗುಜರಾತಿನ ಮೇಲೆ ಭಾರಿ ಪರಿಣಾಮ ಬೀರಿದೆ. ವಿನಾಶಕಾರಿ ಚಂಡಮಾರುತದಿಂದ ಅಪಾಯಕ್ಕೊಳಗಾಗಬಹುದಾದ ಸ್ಥಳಗಳನ್ನು ಗುರುತಿಸಿ, ಅಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ. ರಕ್ಷಣಾ ಕಾರ್ಯಾಚರಣೆಯ ಮಧ್ಯೆ, ಗುಜರಾತ್ನ ಮಹಿಳಾ ಪೊಲೀಸ್ ಅಧಿಕಾರಿಯ ಕಾರ್ಯವೈಖರಿಯ ಹೃದಯಸ್ಪರ್ಶಿ ವೀಡಿಯೊ ಒಂದು ನೆಟ್ಟಿಗರ ಮೆಚ್ಚುಗೆ ಪಡೆದುಕೊಂಡಿದೆ.
ಹೌದು.. ದ್ವಾರಕಾ ಜಿಲ್ಲೆಯ ಭನ್ವಾಡ್ ಗ್ರಾಮದಿಂದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಪೊಲೀಸ್ ಪಡೆ ಹರಸಾಹಸ ಪಡುತ್ತಿದೆ. ಚಂಡಮಾರುತದ ಅಬ್ಬರಕ್ಕೆ ಸಿಲುಕುವ ಮುನ್ನೆಚ್ಚರಿಕೆ ಕ್ರಮವಾಗಿ ಜನರನ್ನು ಮುಂಜಾಗೃತ ಕ್ರಮವಾಗಿ ಸ್ಥಳಾಂತರಿಸಲಾಗುತ್ತಿದೆ. ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಪೊಲೀಸ್ ಪಡೆಯ ನಿಸ್ವಾರ್ಥತೆ ಮತ್ತು ಬದ್ಧತೆಯನ್ನು ಎತ್ತಿ ತೋರಿಸುವ ಈ ವೈರಲ್ ವಿಡಿಯೋ ಜನರ ಗಮನ ಸೆಳೆಯುತ್ತಿದೆ.
"સેવા થકી સુરક્ષા સુનિશ્ચિત કરવા ભાણવડનું પ્રશાસન તંત્ર સજગ છે."
પોલીસ તંત્ર દ્વારા બિપરજોય વાવાઝોડાની સ્થિતિને ધ્યાનમાં લેતા બરડા ડુંગરમાં ચાર દિવસ પહેલા પ્રસૂતિ થયેલી માતાને બાળક સાથે સુરક્ષિત સ્થળે સ્થળાંતરિત કરવામાં આવી.#CycloneBiporjoy pic.twitter.com/zF3tSyW9Pc
— Mulubhai Bera (@Mulubhai_Bera) June 15, 2023
ಇದನ್ನೂ ಓದಿ: ವರದಕ್ಷಿಣೆ ಡಿಮ್ಯಾಂಡ್ ಇಟ್ಟ ವರನಿಗೆ ತಕ್ಕ ಪಾಠ ಕಲಿಸಿದ ವಧು ಕುಟುಂಬದವರು; Viral Video
ಗುಜರಾತ್ ಸಚಿವ ಮುಲುಭಾಯ್ ಬೇರಾ ಅವರು ಈ ವೀಡಿಯೊವನ್ನು ತಮ್ಮ ಸೋಷಿಯಲ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ನಾಲ್ಕು ದಿನಗಳ ಹಿಂದೆ ಬರ್ದಾ ಡುಂಗರ್ನಲ್ಲಿ ಜನ್ಮ ನೀಡಿದ ತಾಯಿ ಮತ್ತು ಮಗುವನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಗುಜರಾತ್ನಲ್ಲಿ ಬಿಪರ್ಜೋಯ್ ಚಂಡಮಾರುತದ ಪ್ರಭಾವ ಹಚ್ಚಾಗುತ್ತಿದೆ. ವಿಶೇಷವಾಗಿ ಕಚ್ ಜಿಲ್ಲೆಯಲ್ಲಿ ಜಖೌ ಬಂದರಿನ ಬಳಿ ಭೂಕುಸಿತವನ್ನು ಉಂಟಾಗಿದೆ. ಭಾರೀ ಮಳೆ ಗಾಳಿ ಬೀಸುತ್ತಿದ್ದು, ಮುಂಜಾಗೃತ ಕ್ರಮವಾಗಿ ಸರ್ಕಾರ ತಗ್ಗು ಪ್ರದೇಶಗಳಿಂದ ಸುಮಾರು ಒಂದು ಲಕ್ಷ ಜನರನ್ನು ಸ್ಥಳಾಂತರಿಸಲು ಅಧಿಕಾರಿಗಳು ಈಗಾಗಲೇ ಪೂರ್ವಭಾವಿ ಕ್ರಮಗಳನ್ನು ಕೈಗೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.