KVS Recruitment 2021 : ಕೆವಿಎಸ್‌ನಲ್ಲಿ ಈ ಹುದ್ದೆಗೆ ಅರ್ಜಿ ಆಹ್ವಾನ

KVS Recruitment 2021: ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಈ ಎಲ್ಲ ವಿಷಯಗಳನ್ನು ಎಚ್ಚರಿಕೆಯಿಂದ ಓದಿ...  

Written by - Yashaswini V | Last Updated : Jan 16, 2021, 02:50 PM IST
  • ಕೇಂದ್ರೀಯ ವಿದ್ಯಾಲಯ ಸಂಘಥನ್ (ಕೆವಿಎಸ್) ಡೆಪ್ಯುಟಿ ಕಮಿಷನರ್ (ಗ್ರೂಪ್ ಎ) ಹುದ್ದೆಗಳಿಗೆ ಅರ್ಜಿ ಆಹ್ವಾನ
  • ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ 20 ಫೆಬ್ರವರಿ 2021ಕ್ಕೂ ಮೊದಲು ಅರ್ಜಿ ಸಲ್ಲಿಸಬಹುದು
  • ಅಭ್ಯರ್ಥಿಯು ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಪದವಿ ಹೊಂದಿರಬೇಕು.
KVS Recruitment 2021 : ಕೆವಿಎಸ್‌ನಲ್ಲಿ  ಈ ಹುದ್ದೆಗೆ ಅರ್ಜಿ ಆಹ್ವಾನ title=
KVS Recruitment 2021

KVS Recruitment 2021: ಕೇಂದ್ರೀಯ ವಿದ್ಯಾಲಯ ಸಂಘಥನ್ (ಕೆವಿಎಸ್) ಡೆಪ್ಯುಟಿ ಕಮಿಷನರ್ (ಗ್ರೂಪ್ ಎ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ (KVS Recruitment 2021) ನಿಗದಿತ ರೂಪದಲ್ಲಿ 20 ಫೆಬ್ರವರಿ 2021ಕ್ಕೂ ಮೊದಲು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳನ್ನು ಕೇಂದ್ರೀಯ ವಿದ್ಯಾಲಯ ಸಂಘಥನ್ ಪ್ರಧಾನ ಕಚೇರಿ / ವಿವಿಧ ಪ್ರಾದೇಶಿಕ ಕಚೇರಿಗಳು / ವಲಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳಲ್ಲಿ ನೇಮಿಸಲಾಗುವುದು.

ಇದಲ್ಲದೆ, ಅಭ್ಯರ್ಥಿಗಳು ಈ ಲಿಂಕ್ https://www.kvsangathan.nic.in/ ಅನ್ನು ಕ್ಲಿಕ್ ಮಾಡುವುದರ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು. ಅಲ್ಲದೆ ಈ ಲಿಂಕ್ ಮೂಲಕ ನೀವು ಅಧಿಕೃತ ಅಧಿಸೂಚನೆಗಳನ್ನು https://www.kvsangathan.nic.in/sites/default/files/hq/ANN%28E1%29-11-01-... ಮೂಲಕ ಪರಿಶೀಲಿಸಬಹುದು.

ಇದನ್ನೂ ಓದಿ - Sarkari Naukri: 10ನೇ ತರಗತಿ ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ

ಕೆವಿಎಸ್ (KVS) ನೇಮಕಾತಿ 2021 ರ ಹುದ್ದೆಯ ವಿವರಗಳು : 

  • ಡೆಪ್ಯುಟಿ ಕಮಿಷನರ್ (ಗ್ರೂಪ್ ಎ)  - 8 ಹುದ್ದೆಗಳು.
  • Ur - 5 ಪೋಸ್ಟ್ಗಳು
  • OBC - 2 ಪೋಸ್ಟ್‌ಗಳು
  • SC - 1 ಹುದ್ದೆ

ಇದನ್ನೂ ಓದಿ - Indian Railway Recruitment 2021: 10ನೇ ತರಗತಿ ಪಾಸ್ ಆದವರಿಗೆ ಬಂಪರ್ ಉದ್ಯೋಗಾವಕಾಶ

ಕೆವಿಎಸ್ ನೇಮಕಾತಿ 2021 ಗೆ ಅರ್ಹತಾ ಮಾನದಂಡ :
ಅಭ್ಯರ್ಥಿಯು ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಪದವಿ ಹೊಂದಿರಬೇಕು. ಅಲ್ಲದೆ, ಸಹಾಯಕ ಆಯುಕ್ತರಾಗಿ 05 ವರ್ಷಗಳ ನಿಯಮಿತ ಸೇವಾ ಅನುಭವವನ್ನು ಹೊಂದಿರಬೇಕು.

ಕೆವಿಎಸ್ ನೇಮಕಾತಿ 2021 ಕ್ಕೆ ವೇತನ ಪ್ರಮಾಣ :
ಅಭ್ಯರ್ಥಿಗಳಿಗೆ ಲೆವೆಲ್ -12 (ರೂ .78,800-2,09,200 / -) ಅಡಿಯಲ್ಲಿ ಕೆವಿಎಸ್‌ಗೆ ಅನ್ವಯವಾಗುವ ಎಲ್ಲಾ ಭತ್ಯೆಗಳನ್ನು ಸಂಬಳವಾಗಿ ನೀಡಲಾಗುವುದು.

ಕೆವಿಎಸ್ ನೇಮಕಾತಿ 2021 ರ ವಯಸ್ಸಿನ ಮಿತಿ :

  • ಅಭ್ಯರ್ಥಿಗಳ ವಯಸ್ಸಿನ ಮಿತಿ 50 ವರ್ಷಗಳು 

ಕೆವಿಎಸ್ ನೇಮಕಾತಿ 2021 ಗೆ ಅರ್ಜಿ ಶುಲ್ಕ : 

  • ಯುಆರ್ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ - ರೂ. 1500
  • ಎಸ್‌ಸಿ (SC) / ಎಸ್‌ಟಿ / ಪಿಎಚ್ / ಎಕ್ಸ್-ಎಸ್‌ಎಂ - ಯಾವುದೇ ಶುಲ್ಕವಿಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News