1000 ಕೆ.ಜಿ. ಸ್ಪೋಟಕ ವಸ್ತು ಸಾಗಿಸುತ್ತಿದ್ದ ವಾಹನ ಪೋಲೀಸರ ವಶಕ್ಕೆ; ಇಬ್ಬರ ಬಂಧನ

ವಾಹನದಲ್ಲಿ 27 ಚೀಲಗಳಲ್ಲಿದ್ದ 1000 ಕೆ.ಜಿ. ಸ್ಫೋಟಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ವಾಹನದ ಚಾಲಕ ಹಾಗೂ ಸಹಾಯಕನನ್ನು ಬಂಧಿಸಿದ್ದಾರೆ. 

Last Updated : Mar 9, 2019, 02:12 PM IST
1000 ಕೆ.ಜಿ. ಸ್ಪೋಟಕ ವಸ್ತು ಸಾಗಿಸುತ್ತಿದ್ದ ವಾಹನ ಪೋಲೀಸರ ವಶಕ್ಕೆ; ಇಬ್ಬರ ಬಂಧನ title=

ಕೊಲ್ಕತ್ತಾ: ಬರೋಬ್ಬರಿ 1,000 ಕೆ.ಜಿ. ಸ್ಫೋಟಕ ಸಾಮಗ್ರಿ ಸಾಗಿಸುತ್ತಿದ್ದ ವಾಹನವನ್ನು ಸೀಸ್ ಮಾಡಿರುವ ಕೊಲ್ಕತ್ತಾ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. 

ಶನಿವಾರ ಬೆಳಿಗ್ಗೆ ಚಿತ್ಪುರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಡಿಷಾದಿಂದ ಬರುತ್ತಿದ್ದ ಮೆಟಡೋರ್ (Tata-407)ಅನ್ನು ಬಿಟಿ ರಸ್ತೆಯ ತಾಲಾ ಸೇತುವೆ ಬಳಿ ಎಸ್ಐಟಿ ಪೊಲೀಸರು ಪರಿಶೀಲೇನ್ ನಡೆಸಿದಾಗ ಸ್ಫೋಟಕಗಳಿರುವುದು ಪತ್ತೆಯಾಗಿದೆ. 

ವಾಹನದಲ್ಲಿ 27 ಚೀಲಗಳಲ್ಲಿದ್ದ 1000 ಕೆ.ಜಿ. ಸ್ಫೋಟಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ವಾಹನದ ಚಾಲಕ ಹಾಗು ಸಹಾಯಕನನ್ನು ಬಂಧಿಸಿದ್ದಾರೆ. ಬಂಧಿತರನ್ನು ಇಂದ್ರಜಿತ್ ಭುಯಿ(25) ಮತ್ತು ಪದ್ಮೊಲೋಚನ್ ದೇ(31) ಎಂದು ಗುರುತಿಸಲಾಗಿದೆ. ಇದೇ ವೇಳೆ ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Trending News