ಲೋಕಸಭಾ ಚುನಾವಣೆಯಲಿ ಶಬರಿಮಲೆ ವಿವಾದವನ್ನು ಬಳಸಿಕೊಳ್ಳದಂತೆ ರಾಜಕೀಯ ಪಕ್ಷಗಳು ಮತ್ತು ಮುಖಂಡರಿಗೆ ಕೇರಳ ಮುಖ್ಯ ಚುನಾವಣಾ ಅಧಿಕಾರಿ ಟಿ.ಆರ್. ಮೀನಾ ಸೋಮವಾರ ಎಚ್ಚರಿಕೆ ನೀಡಿದ್ದಾರೆ.
ಶಬರಿಮಲೆ ವಿವಾದ ಮಾತು ಸುಪ್ರೀಂಕೋರ್ಟ್ ತೀರ್ಪಿನ ಆಧಾರದ ಮೇಲೆ ಕೆಲವು ವಿಧದ ಧಾರ್ಮಿಕ ಪ್ರಚಾರವನ್ನು ಮಾಡುವುದು ಮತ್ತು ಆಪಾದಿಸುವುದು ಚುನಾವಣಾ ನೀತಿ ಸಂಹಿತೆ ನಿಯಮದ ಸ್ಪಷ್ಟ ಉಲ್ಲಂಘನೆಯಾಗಿದ್ದು, ಅಂತಹವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಮೀನಾ ಹೇಳಿದ್ದಾರೆ.
Kerala Chief Electoral Officer T R Meena: Citing/invoking or doing some sort of religious propaganda based on #Sabarimala issue/judgement will be a clear violation of the model code of conduct and we will be taking action.#LokSabhaElections2019 pic.twitter.com/ACnDvMJxfA
— ANI (@ANI) March 11, 2019
ಚುನಾವಣಾ ಆಯೋಗವು ಲೋಕಸಭೆ ಚುನಾವಣೆ 2019ರ ದಿನಾಂಕಗಳನ್ನು ಘೋಷಿಸಿದ ಒಂದು ದಿನದೊಳಗೆ ಕೇರಳದ ಮುಖ್ಯ ಚುನಾವಣಾಧಿಕಾರಿಗಳು ಈ ಎಚ್ಚರಿಕೆ ನೀಡಿದ್ದಾರೆ.
ಭಾನುವಾರ ದೆಹಲಿಯ ವಿಜ್ಞಾನ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರು 543 ಲೋಕಸಭಾ ಕ್ಷೇತ್ರಗಳಿಗೆ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತದ ಮತದಾನ ಏಪ್ರಿಲ್ 11ರಂದು ನಡೆಯಲಿದೆ. ಮೇ 23ರಂದು ಎಲ್ಲಾ ಹಂತಗಳ ಮತದಾನದ ಫಲಿತಾಂಶ ಪ್ರಕಟವಾಗಲಿದ್ದು, ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ.