Karnataka Hijab ವಿವಾದದ ಹಿಂದೆ ಪಾಕ್ ಕೈವಾಡ, ಅಲರ್ಟ್ ಜಾರಿಗೊಳಿಸಿದ IB

Hijab Controversy - ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್ ವಿವಾದದ (Karnataka Hijab Controversy) ಹಿಂದೆ ISI ಷಡ್ಯಂತ್ರವಿರುವ ಸಂಗತಿ ಇದೀಗ ಬಹಿರಂಗವಾಗುತ್ತಿದೆ. ಈ ಕುರಿತು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

Written by - Nitin Tabib | Last Updated : Feb 12, 2022, 11:54 AM IST
  • ಹಿಜಾಬ್ ವಿವಾದದ ಹಿಂದೆ ISI ಕೈವಾಡ
  • ಗುಪ್ತಚರ ಸಂಸ್ಥೆಗಳಿಗೆ ಅಲರ್ಟ್ ಜಾರಿಗೊಳಿಸಿದ IB
  • ದೇಶದ ವಿವಿಧ ರಾಜ್ಯಗಳಲ್ಲಿ ಹಿಜಾಬ್ ಜನಾಭಿಪ್ರಾಯ ಸಂಗ್ರಹಣೆಗೆ ಕಾರ್ಯಸೂಚಿ ಜಾರಿ ಸಾಧ್ಯತೆ!
Karnataka Hijab ವಿವಾದದ ಹಿಂದೆ ಪಾಕ್ ಕೈವಾಡ, ಅಲರ್ಟ್ ಜಾರಿಗೊಳಿಸಿದ IB title=
Karnataka Hijab Controversy (File Photo)

ನವದೆಹಲಿ: Hijab Congroversy - ಹಿಜಾಬ್ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗಗೊಂಡಿದೆ. ಮಾಹಿತಿ ಪ್ರಕಾರ, ಪಾಕಿಸ್ತಾನಿ ಗುಪ್ತಚರ ಸಂಸ್ಥೆ ISI ಖಾಲಿಸ್ತಾನಿ ಭಯೋತ್ಪಾದಕ ಸಂಘಟನೆಯಿಂದ ಹಿಜಾಬ್ ಜನಾಭಿಪ್ರಾಯ (Referendum On Hijab) ಸಂಗ್ರಹಣೆಯ ಮೂಲಕ ಭಾರತದಲ್ಲಿ ಅರಾಜಕತೆಯನ್ನು ಹರಡಲು ಸಂಚು ರೂಪಿಸುತ್ತಿದೆ. ಈ ಬಗ್ಗೆ ಭಾರತದ ಗುಪ್ತಚರ ಸಂಸ್ಥೆ IB ಎಚ್ಚರಿಕೆ ನೀಡಿದೆ.

ಮಾಹಿತಿಯ ಪ್ರಕಾರ, ಭಾರತದಲ್ಲಿ ಹಿಜಾಬ್ (Hijab Controversy) ಜನಾಭಿಪ್ರಾಯ ಸಂಗ್ರಹಕ್ಕಾಗಿ ISI ವೆಬ್‌ಸೈಟ್ ಅನ್ನು ರಚಿಸಿದೆ. ಇದಲ್ಲದೇ ಸಿಖ್ ಫಾರ್ ಜಸ್ಟಿಸ್ (Sikh For Justice) ಸಂಘಟನೆಯ ಗುರುಪಂತ್ವಂತ್ ಸಿಂಗ್ ಪನ್ನು (Gurupatwant Singh Pannu) ಅವರ ಮೂಲಕ ISI ವೀಡಿಯೋವೊಂದನ್ನು ಬಿಡುಗಡೆ ಮಾಡಿಸಿದೆ ಎನ್ನಲಾಗಿದೆ. ಐಎಸ್‌ಐ ಷಡ್ಯಂತ್ರದ ನಂತರ ಭಾರತದ ಗುಪ್ತಚರ ಸಂಸ್ಥೆಗಳು ಸಕ್ರಿಯವಾಗಿವೆ ಮತ್ತು ಈ ಬಗ್ಗೆ IB ಎಚ್ಚರಿಕೆ ನೀಡಿದೆ.

ಸಿಖ್ ಫಾರ್ ಜಸ್ಟಿಸ್ ಮುಖ್ಯಸ್ತ  ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ
ಸಿಖ್ ಫಾರ್ ಜಸ್ಟಿಸ್ ಮುಖ್ಯಸ್ಥ ಗುರುಪಂತ್ವಂತ್ ಸಿಂಗ್ ಪನ್ನು ಅವರು ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ, ಇದರಲ್ಲಿ ಅವರು ಭಾರತವನ್ನು ಒಡೆಯಲು ಹಿಜಾಬ್ ಜನಾಭಿಪ್ರಾಯ ಸಂಗ್ರಹದಂತೆ ಅಜೆಂಡಾವನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ ಎಂದು ಎಚ್ಚರಿಕೆಯಲ್ಲಿ ತಿಳಿಸಲಾಗಿದೆ. ಹಿಜಾಬ್ ಜನಾಭಿಪ್ರಾಯ ಸಂಗ್ರಹವನ್ನು ಪ್ರಾರಂಭಿಸಲು ಮತ್ತು ಭಾರತವನ್ನು ಉರ್ದು ಮಾಡುವತ್ತ ಸಾಗುವಂತೆ ಪನ್ನು ಭಾರತೀಯ ಮುಸ್ಲಿಮರಿಗೆ ಮನವಿ ಮಾಡಿದ್ದಾರೆ.

IB ಎಚ್ಚರಿಕೆ
ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಂತಹ ಮುಸ್ಲಿಂ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಹಿಜಾಬ್ ಜನಾಭಿಪ್ರಾಯ ಸಂಗ್ರಹಣೆಯ ಕಾರ್ಯಸೂಚಿಯನ್ನು ಹರಡಲು ಪ್ರಯತ್ನಿಸಬಹುದು ಎಂದು IB ಹೇಳಿದೆ. ಈ ಎಲ್ಲಾ ರಾಜ್ಯಗಳಿಗೆ ಐಬಿ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಫೆಬ್ರವರಿ 11 ರಂದು ನೀಡಲಾದ IB ಎಚ್ಚರಿಕೆಯ ಪ್ರಕಾರ,  ಪ್ರಚೋದನಕಾರಿ ವೀಡಿಯೊದಲ್ಲಿ ಪನ್ನು ಹಿಜಾಬ್ ಜನಾಭಿಪ್ರಾಯ ಸಂಗ್ರಹಣೆಯ ಮೂಲಕ ಭಾರತೀಯ ಮುಸ್ಲಿಮರನ್ನು ಪ್ರಚೋದಿಸಲು ಪ್ರಯತ್ನಿಸಿದ್ದಾರೆ ಮತ್ತು ಇಂದು ಹಿಜಾಬ್ ಅನ್ನು ನಿಷೇಧಿಸಲಾಗುತ್ತಿದೆ, ನಾಳೆ ಆಜಾನ್ ಮತ್ತು ನಂತರ ಕುರಾನ್ ಅನ್ನು ಗುರಿಯಾಗಿಸಲಾಗುವುದು. ಅದಕ್ಕಾಗಿಯೇ ಭಾರತವನ್ನು ಉರ್ದುಸ್ತಾನ್ ಮಾಡಿ ಪ್ರತಿಭಟಿಸುವ ಸಮಯ ಬಂದಿದೆ. ಪ್ರತ್ಯೇಕ ಮುಸ್ಲಿಂ ದೇಶವನ್ನು ಹೇಗೆ ಮಾಡಲಾಗಿದೆ ಎಂಬುದನ್ನು ಪಾಕಿಸ್ತಾನದಿಂದ ಕಲಿಯಿರಿ ಎಂದು ಪನ್ನು ಹೇಳಿದ್ದಾನೆ.

ಇದನ್ನೂ ಓದಿ-ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಕಾಲೇಜು ರಜೆ ಫೆ.16 ವರೆಗೆ ಮುಂದುವರಿಕೆ

ಸಂಚಿನ ಹಿಂದ ISI ಬ್ರೇನ್ 
ಹಿಜಾಬ್ ಜನಾಭಿಪ್ರಾಯ ಸಂಗ್ರಹಣೆಗೆ ಬೃಹತ್ ಪ್ರಮಾಣದ ನಿಧಿಯನ್ನೂ ಒದಗಿಸಲಾಗುವುದು ಎಂದು ಪನ್ನು ವಿಡಿಯೋದಲ್ಲಿ ಹೇಳಿದ್ದಾನೇ. ಆದ್ದರಿಂದ, ಐಬಿ ಎಲ್ಲಾ ಸ್ಥಳೀಯ ಪೊಲೀಸರು ಮತ್ತು ಏಜೆನ್ಸಿಗಳಿಗೆ ಅಲರ್ಟ್ ಆಗಿರಲು ಸೂಚಿಸಿದೆ.

ಇದನ್ನೂ ಓದಿ-Karnataka Hijab Row: Video - 'ಅಲ್ಲಾಹ್ ಹು ಅಕ್ಬರ್' ಘೋಷಣೆ ಕೂಗಲು ಕಾರಣ ಹೇಳಿದ Muskaan Khan

ಹಿಜಾಬ್ ಜನಾಭಿಪ್ರಾಯ ಸಂಗ್ರಹಕ್ಕಾಗಿ ವೆಬ್‌ಸೈಟ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ, ಇದರಲ್ಲಿ ಜನರು ಆನ್‌ಲೈನ್‌ಗೆ ಬಂದು ಬೆಂಬಲ ನೀಡುವಂತೆ ಕೇಳಿಕೊಂಡಿದ್ದಾರೆ. ಇದೆಲ್ಲದರ ಹಿಂದೆ ಪಾಕಿಸ್ತಾನಿ ಗುಪ್ತಚರ ಸಂಸ್ಥೆ ISIನ ದುಷ್ಟಬುದ್ಧಿ ಅಡಗಿದೆ ಎಂದು ಗುಪ್ತಚರ ಸಂಸ್ಥೆಗಳು ಹೇಳುತ್ತಿವೆ.

ಇದನ್ನೂ ಓದಿ-ಸುಪ್ರೀಂ ಕೋರ್ಟ್ ಕದ ತಟ್ಟಿದ ಹಿಜಾಬ್ ವಿವಾದ ಪ್ರಕರಣ, ಹೈಕೋರ್ಟ್ ಆದೇಶ ಪ್ರಶ್ನಿಸಿ ಅರ್ಜಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News