ಗೂಗಲ್ ಸರ್ಚ್ ನ ಟಾಪ್ ಸುದ್ದಿಯಲ್ಲಿ ಸ್ಥಾನ ಪಡೆದ ಕರ್ನಾಟಕದ ಚುನಾವಣಾ ಫಲಿತಾಂಶ.!

ದೇಶದ ಕೂತೂಹಲ ಕೆರಳಿಸಿದ್ದ ಕರ್ನಾಟಕದ ಚುನಾವಣೆ ಈ ವರ್ಷದ ನ್ಯೂಸ್ ವಿಭಾಗದಲ್ಲಿ ಅತಿ ಸರ್ಚ್ ಮಾಡಿದ ಸುದ್ದಿಯಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ.

Last Updated : Dec 12, 2018, 06:49 PM IST
ಗೂಗಲ್ ಸರ್ಚ್ ನ ಟಾಪ್ ಸುದ್ದಿಯಲ್ಲಿ ಸ್ಥಾನ ಪಡೆದ ಕರ್ನಾಟಕದ ಚುನಾವಣಾ ಫಲಿತಾಂಶ.!  title=
photo: India.com

ನವದೆಹಲಿ: ದೇಶದ ಕೂತೂಹಲ ಕೆರಳಿಸಿದ್ದ ಕರ್ನಾಟಕದ ಚುನಾವಣೆ ಈ ವರ್ಷದ ನ್ಯೂಸ್ ವಿಭಾಗದಲ್ಲಿ ಅತಿ ಸರ್ಚ್ ಮಾಡಿದ ಸುದ್ದಿಯಲ್ಲಿ ಎರಡನೇ ಸ್ಥಾನವನ್ನು ಪಡೆದಿದೆ.

ಗೂಗಲ್ ಸರ್ಚ್ ನ ನ್ಯೂಸ್ ವಿಭಾಗದಲ್ಲಿ ಕರ್ನಾಟಕ ಚುನಾವಣೆ ಫಲಿತಾಂಶ ಟಾಪ್ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ, ಮೊದಲನೇ ಸ್ಥಾನವನ್ನು ಫಿಫಾ ವಿಶ್ವಕಪ್ 2018 ಪಡೆದುಕೊಂಡಿದ್ದರೆ,ಪ್ರಿಯಾಂಕಾ ಚೋಪ್ರಾ- ನಿಕ್ ಜೋನಾಸ್ ಮದುವೆ, ಏಕತಾ ಮೂರ್ತಿ, ನಿಫಾ ವೈರಸ್ ಕ್ರಮವಾಗಿ ಮೂರು ನಾಲ್ಕು ಐದನೇ ಸ್ಥಾನವನ್ನು ಪಡೆದುಕೊಂಡಿವೆ.

ನ್ಯೂಸ್ ವಿಭಾಗ

1) ಫಿಫಾ ವಿಶ್ವಕಪ್ 2018
2) ಕರ್ನಾಟಕ ಚುನಾವಣಾ ಫಲಿತಾಂಶಗಳು
3) ಪ್ರಿಯಾಂಕಾ ಚೋಪ್ರಾ ನಿಕ್ ಜೊನಸ್  ಮದುವೆ
4) ಏಕತಾ ಪ್ರತಿಮೆ
5) ನಿಪಾ ವೈರಸ್
6)ಬಿಟ್ ನಾಣ್ಯದ ಬೆಲೆ
7) ಬಜೆಟ್ 2018
8) ದೀಪಿಕಾ ಪಡುಕೋಣೆ ವಿವಾಹ
9) ಸೆಕ್ಷನ್ 377
10) ಸೋನಮ್ ಕಪೂರ್ ವಿವಾಹ

ಇನ್ನು ಒಟ್ಟಾರೆ ಸರ್ಚ್ ವಿಭಾಗದಲ್ಲಿ ನೋಡುವುದಾದರೆ, ಫಿಫಾ ವಿಶ್ವಕಪ್ 2018, ಲೈವ್ ಸ್ಕೋರ್, ಐಪಿಎಲ್ 2018, ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಆಕ್ರಮಿಸಿಕೊಂಡಿವೆ, ಇಲ್ಲಿ ಕರ್ನಾಟಕ ಚುನಾವಣೆ ಫಲಿತಾಂಶ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ.

ಒಟ್ಟಾರೆ ವಿಭಾಗ

1) ಫಿಫಾ ವಿಶ್ವಕಪ್ 2018
2) ಲೈವ್ ಸ್ಕೋರ್
3) ಐಪಿಎಲ್ 2018
4) ಕರ್ನಾಟಕ ಚುನಾವಣಾ ಫಲಿತಾಂಶಗಳು
5) ಬಾಲ್ ವೀರ್
6) ಬಿಗ್ ಬಾಸ್
7) ರೋಬೋಟ್ 2.0
8) ಏಷ್ಯಾ ಕಪ್ 2018
9) ಮೊಟು ಪಟ್ಲು
10) ಏಷ್ಯನ್ ಗೇಮ್ಸ್ 2018

ಈ ಸ್ಥಾನವನ್ನು ಗಮನಿಸಿದಾಗ ರಾಜಕೀಯ ವಿಚಾರವಾಗಿ ಗೂಗಲ್ ನಲ್ಲಿ ಸರ್ಚ್ ಮಾಡಿದ ಸುದ್ದಿಯಲ್ಲಿ ಕರ್ನಾಟಕದ ಚುನಾವಣಾ ಫಲಿತಾಂಶದ ಸುದ್ದಿ ಅಗ್ರಸ್ಥಾನದಲ್ಲಿದೆ ಎಂದು ಹೇಳಬಹುದು.

ಇನ್ನು ಮದುವೆ ವಿಷಯ ಬಂದಾಗ ಪ್ರಿಯಾಂಕಾ ಚೋಪ್ರಾ / ನಿಕ್ ಜೊನಾಸ್, ದೀಪಿಕಾ ಪಡುಕೋಣೆ / ರಣವೀರ ಸಿಂಗ್, ಸೋನಮ್ ಕಪೂರ್ / ಆನಂದ್ ಅಹುಜಾ ಮೊದಲಾದ ಮೂರು ವಿವಾಹಗಳು ಪ್ರಮುಖವಾಗಿ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.

Trending News