ಉತ್ತರ ಪ್ರದೇಶ: ಕನ್ನೌಜ್ ನಲ್ಲಿ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದು ಬೆಂಕಿ, ಅನೇಕರು ನಾಪತ್ತೆ

ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯಲ್ಲಿ ಸುಮಾರು 50 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದು ಬೆಂಕಿ ಕಾಣಿಸಿಕೊಂಡ ನಂತರ ಅನೇಕ ಜನರು ನಾಪತ್ತೆಯಾಗಿದ್ದಾರೆ.ಕನಿಷ್ಠ 21 ಪ್ರಯಾಣಿಕರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Last Updated : Jan 10, 2020, 11:48 PM IST
ಉತ್ತರ ಪ್ರದೇಶ: ಕನ್ನೌಜ್ ನಲ್ಲಿ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದು ಬೆಂಕಿ, ಅನೇಕರು ನಾಪತ್ತೆ title=
Photo courtesy: ANI

ನವದೆಹಲಿ: ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯಲ್ಲಿ ಸುಮಾರು 50 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದು ಬೆಂಕಿ ಕಾಣಿಸಿಕೊಂಡ ನಂತರ ಅನೇಕ ಜನರು ನಾಪತ್ತೆಯಾಗಿದ್ದಾರೆ.ಕನಿಷ್ಠ 21 ಪ್ರಯಾಣಿಕರನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಟ್ರಕ್ ಮತ್ತು ಖಾಸಗಿ ಸ್ಲೀಪರ್ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ ಎಂದು ಪೊಲೀಸರು ಹೇಳುತ್ತಾರೆ. ಎರಡೂ ವಾಹನಗಳಲ್ಲಿ ಬೆಂಕಿಯನ್ನು ನಂದಿಸಲು ಮೂರರಿಂದ ನಾಲ್ಕು ಅಗ್ನಿಶಾಮಕ ವಾಹನಗಳು 30-40 ನಿಮಿಷಗಳನ್ನು ತೆಗೆದುಕೊಂಡವು ಎನ್ನಲಾಗಿದೆ.

ಈಗ ಈ ಘಟನೆ ಕುರಿತಾಗಿ ಪ್ರತಿಕ್ರಿಯಿಸಿರುವ ಕಾನ್ಪುರ ರೇಂಜ್ ನ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಮೋಹಿತ್ ಅಗರ್ವಾಲ್ 'ರಕ್ಷಿಸಿದ 21 ಜನರು ಅಪಾಯದಿಂದ ಪಾರಾಗಿದ್ದಾರೆ. ಬಸ್ ಮತ್ತು ಟ್ರಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಸ್‌ನೊಳಗೆ ಯಾರೊಬ್ಬರೂ ಜೀವಂತವಾಗಿ ಕಂಡುಬರುವುದು ಬಹಳ ಅಸಂಭವವಾಗಿದೆ. ನಮ್ಮ ತಂಡಗಳು ಎಷ್ಟು ಜನರು ಸತ್ತಿದ್ದಾರೆಂದು ಈಗ ಪತ್ತೆ ಹಚ್ಚುತ್ತೇವೆ' ಎಂದು ತಿಳಿಸಿದ್ದಾರೆ.

ಗಾಯಾಳುಗಳಿಗೆ ಎಲ್ಲಾ ಸಹಾಯವನ್ನು ನೀಡುವಂತೆ ಸೂಚನೆ ನೀಡಲಾಗಿದೆ. ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂ. ಮತ್ತು ಗಾಯಾಳುಗಳಿಗೆ ಪರಿಹಾರವಾಗಿ ತಲಾ 50,000 ರೂ, ರಾಜ್ಯ ಸರ್ಕಾರ ನೀಡಲಿದೆ. ಘಟನೆ ವಿಚಾರವಾಗಿ  ಜಿಲ್ಲಾಧಿಕಾರಿಗಳಿಂದ ವರದಿ ಕೇಳಿದ್ದೇನೆ ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ 

Trending News