ಬೆಗುಸರಾಯ್ ಕ್ಷೇತ್ರದಿಂದ ಸಿಪಿಐ ಅಭ್ಯರ್ಥಿಯಾಗಿ ಕನ್ಹಯ್ಯ ಕುಮಾರ್ ನಾಮಪತ್ರ ಸಲ್ಲಿಕೆ

ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಮುಖಂಡ ಕನ್ಹಯ್ಯ ಕುಮಾರ್ ಬಿಹಾರದ ಬೆಗುಸರಾಯ್ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದರು.

Last Updated : Apr 9, 2019, 05:30 PM IST
ಬೆಗುಸರಾಯ್ ಕ್ಷೇತ್ರದಿಂದ ಸಿಪಿಐ ಅಭ್ಯರ್ಥಿಯಾಗಿ ಕನ್ಹಯ್ಯ ಕುಮಾರ್ ನಾಮಪತ್ರ ಸಲ್ಲಿಕೆ title=

ಬಿಹಾರ: ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಮುಖಂಡ ಕನ್ಹಯ್ಯ ಕುಮಾರ್ ಬಿಹಾರದ ಬೆಗುಸರಾಯ್ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಮಂಗಳವಾರ(ಏಪ್ರಿಲ್ 9) ನಾಮಪತ್ರ ಸಲ್ಲಿಸಿದರು.

ಬೆಗುಸಾರೈನಲ್ಲಿ ಕನ್ಹಯ್ ಬಿಜೆಪಿ ಪಕ್ಷವನ್ನು ಎದುರಿಸಲಿದ್ದಾರೆ. ಬಿಹಾರನಲ್ಲಿ ಆರ್​ಜೆಡಿ ಮತ್ತು ಕಾಂಗ್ರೆಸ್​​​ ಎರಡು ಪಕ್ಷಗಳು ಮಹಾಘಟಬಂದನ್​ ಮಾಡಿಕೊಂಡಿದ್ದು, ಆರ್​​ಜೆಡಿ 20 ಕ್ಷೇತ್ರಗಳಲ್ಲಿ, ಕಾಂಗ್ರೆಸ್​​ 9 ಕ್ಷೇತ್ರಗಳಲ್ಲಿ, ಹೆಚ್ಎ​ಎಂ 3, ಆರ್​ಎಲ್​​​​​ಎಸ್​​​ಪಿ 5, ವಿಐಪಿ 3 ಮತ್ತು ಸಿಪಿಐ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದೆ. 

ಬಿಹಾರ ರಾಜ್ಯದಲ್ಲಿ 7 ಹಂತದಲ್ಲಿ ಚುನಾವಣೆ ನಡೆಯಲಿದ್ದು, ಏಪ್ರಿಲ್​ 11, 18, 23, 29 ಮತ್ತು ಮೇ 6, 12, 19 ರಂದು ಚುನಾವಣೆ ನಡೆಯಲಿದೆ. ಮೇ 23 ರಂದು ಚುನಾವಣಾ ಫಲಿತಾಂಶ ಹೊರ ಬೀಳಲಿದೆ.
 

Trending News