ಜೋ ಬೈಡನ್ ಗೆ 'ಗಜನಿ' ಎಂದು ಕರೆದ ಕಂಗನಾ..! ಯಾಕೆ ಗೊತ್ತಾ?

ಯುಎಸ್ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿದ ಬಾಲಿವುಡ್ ನಟಿ 

Last Updated : Nov 9, 2020, 01:34 PM IST
  • ಯುಎಸ್ ಚುನಾವಣೆ ಫಲಿತಾಂಶದ ಬಗ್ಗೆ ಮಾತನಾಡಿದ ಬಾಲಿವುಡ್ ನಟಿ
  • ಜೋ ಬೈಡನ್ (Joe Biden) ಒಬ್ಬ "ಗಜನಿ"
  • ಕಮಲಾ ಹ್ಯಾರಿಸ್ ವಿಜಯಕ್ಕೆ ಚಿಯರ್ಸ್
ಜೋ ಬೈಡನ್ ಗೆ  'ಗಜನಿ' ಎಂದು ಕರೆದ ಕಂಗನಾ..! ಯಾಕೆ ಗೊತ್ತಾ? title=

ಬಾಲಿವುಡ್ ನಟಿ ಕಂಗನಾ ರನೌತ್ (Kangana Ranaut) ಯುಎಸ್ ಚುನಾವಣಾ (US Election) ಫಲಿತಾಂಶಗಳ ಬಗ್ಗೆ ಮಾತನಾಡಿದ್ದು ಜೋ ಬೈಡನ್ (Joe Biden) ಒಬ್ಬ "ಗಜನಿ" ಎಂದು ಕರೆದಿದ್ದಾರೆ. ಬೈಡನ್ ಅಧ್ಯಕ್ಷರಾಗಿ ಮತ್ತು ಕಮಲಾ ಹ್ಯಾರಿಸ್ (Kamala Harris) ಅಮೇರಿಕಾದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನೆಲೆ ಟ್ವೀಟ್ ಮಾಡಿರುವ ಕಂಗನಾ ಕಮಲಾ ಅವರ ಆಯ್ಕೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಟ್ವಿಟ್ಟರ್ ನಲ್ಲಿ ನಟಿ ಕಂಗನಾ ಅಮೆರಿಕದ ಭವಿಷ್ಯದ ಬಗ್ಗೆ ತಮ್ಮದೇ ಆದ ಮುನ್ಸೂಚನೆಗಳನ್ನು ನೀಡಿದ್ದಾರೆ. ಕಮಲಾ ಅವರ ವಿಜಯದ ಭಾಷಣದ ವಿಡಿಯೋ ಹಂಚಿಕೊಂಡ ಕಂಗನ ಗಜನಿ (ಅಮೀರ್ ಖಾನ್ ನಟನೆಯ ಗಜನಿ ಪಾತ್ರಕ್ಕೆ ಹೋಲಿಕೆ) ಬೈಡನ್‌ ಅವರ ಡೇಟಾ ಪ್ರತಿ 5 ನಿಮಿಷಕ್ಕೆ ಕ್ರ್ಯಾಶ್ ಆಗುತ್ತದೆ, ಅವರು ಚುಚ್ಚಿದ ಮೆಡಿಸಿನ್ಗಳ ಬಗ್ಗೆ ನಮಗೆ ಖಾತ್ರಿಯಿಲ್ಲ. ಅವರು ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಮುಂದುವರಿಯುವುದಿಲ್ಲ ಎಂದಿದ್ದಾರೆ. 

ನಟಿ ಕಂಗನಾ ರನೌತ್ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ ಜಾವೇದ್ ಅಖ್ತರ್

ಆದರೆ ಕಮಲಾ ಹ್ಯಾರಿಸ್ ವಿಜಯ ಮಹತ್ವದ್ದಾಗಿದೆ. ಒಬ್ಬ ಮಹಿಳೆ ಎತ್ತರಕ್ಕೇರಿದಾಗ ಅವಳು ಪ್ರತಿಯೊಬ್ಬ ಮಹಿಳೆಗೆ ದಾರಿ ತೋರುತ್ತಾಳೆ. ಈ ಐತಿಹಾಸಿಕ ದಿನಕ್ಕಾಗಿ ಚಿಯರ್ಸ್ ಎಂದು ಬರೆದು ಕೊಂಡಿದ್ದಾರೆ.
 

Trending News