ನವದೆಹಲಿ: ಏಷ್ಯಾದ ನೊಬೆಲ್ ಎಂದೇ ಪ್ರಸಿದ್ದಿಯನ್ನು ಪಡೆದಿರುವ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿಗೆ ಎನ್ಡಿಟಿವಿ ಇಂಡಿಯಾ ದ ಹಿರಿಯ ಕಾರ್ಯನಿರ್ವಾಹಕ ಸಂಪಾದಕರಾಗಿರುವ ರವೀಶ್ ಕುಮಾರ್ (44) 2019 ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
2019ನೇ ಪ್ರಶಸ್ತಿ ಸಾಲಿಗೆ ಪ್ರಶಸ್ತಿ ಪಡೆದ ಐವರು ವ್ಯಕ್ತಿಗಳಲ್ಲಿ ಹಿರಿಯ ಪತ್ರಕರ್ತ ರವೀಶ್ ಕುಮಾರ್ ಅವರು ಸೇರಿದ್ದಾರೆ.ಇತರ ನಾಲ್ಕು ವಿಜೇತರೆಂದರೆ ಮ್ಯಾನ್ಮಾರ್ನ ಕೋ ಸ್ವೀ ವಿನ್, ಥೈಲ್ಯಾಂಡ್ನ ಅಂಖಾನಾ ನೀಲಾಪೈಜಿತ್, ಫಿಲಿಪೈನ್ಸ್ನ ರೇಮುಂಡೋ ಪೂಜಂಟೆ ಕಯಾಬ್ಯಾಬ್ ಮತ್ತು ದಕ್ಷಿಣ ಕೊರಿಯಾದ ಕಿಮ್ ಜೊಂಗ್-ಕಿ ಪ್ರಶಸ್ತಿಗೆ ಆಯ್ಕೆಯಾದವರಲ್ಲಿ ಪ್ರಮುಖರಾಗಿದ್ದಾರೆ.
ರವೀಶ್ ಕುಮಾರ್ ಎನ್.ಡಿ.ಟಿ.ವಿ ಯಲ್ಲಿನ ಪ್ರೈಮ್ ಟೈಮ್ ಕಾರ್ಯಕ್ರಮದ ಮೂಲಕ ದಿನನಿತ್ಯದ ಸರ್ಕಾರದ ನೀತಿಗಳನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸುವುದಲ್ಲದೆ, ಜನಸಾಮಾನ್ಯರ ನೈಜ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುತ್ತಿದ್ದರು. ಈ ಹಿನ್ನಲೆಯಲ್ಲಿ ಅವರ ಕಾರ್ಯಕ್ರಮ ದೇಶದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿತ್ತು.
These are the five recipients of Asia’s premier prize and highest honor, the 2019 Ramon Magsaysay Awardees. #RamonMagsaysayAward pic.twitter.com/HrLG1qVt6L
— Ramon Magsaysay Award (@MagsaysayAward) August 2, 2019
ಈಗ ಮ್ಯಾಗ್ಸೆಸೆ ಪ್ರಶಸ್ತಿಯು ರವೀಶ್ ಅವರ ಸಾಧನೆಗಳ ಬಗ್ಗೆ ಉಲ್ಲೇಖಿಸುತ್ತಾ ' ಭಾರತದ ಪ್ರಭಾವಿ ಟಿವಿ ಪತ್ರಕರ್ತರಲ್ಲಿ ರವೀಶ್ ಅವರು ಒಬ್ಬರಾಗಿದ್ದಾರೆ ಎಂದು ಹೇಳಿದೆ. ಇನ್ನು ಮುಂದುವರೆದು ಜನ ಸಾಮಾನ್ಯ ಸಮಸ್ಯೆಗಳಿಗೆ ಧ್ವನಿಯಾದರೆ ಮಾತ್ರ ನೀವು ಪತ್ರಕರ್ತರಾಗುತ್ತಿರಿ ಎಂದು ಅದು ಉಲ್ಲೇಖಿಸಿದೆ.
1957 ರಲ್ಲಿ ಸ್ಥಾಪಿತವಾದ ಮ್ಯಾಗ್ಸೆಸೆ ಪ್ರಶಸ್ತಿಯು ಏಷ್ಯಾದ ಅತ್ಯಂತ ದೊಡ್ಡ ಗೌರವವಾಗಿದೆ. ಫಿಲಿಪೈನ್ಸ್ ನ ಮೂರನೇ ಅಧ್ಯಕ್ಷರ ಸ್ಮರಣಾರ್ಥವಾಗಿ ಪ್ರತಿ ವರ್ಷ ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಏಷ್ಯಾದ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.