ಜೆಎನ್‌ಯು ಹಿಂಸಾಚಾರ: ವಾಟ್ಸಾಪ್ ಗ್ರೂಪ್ ನ 37 ಸದಸ್ಯರನ್ನು ಪತ್ತೆ ಹಚ್ಚಿದ ದೆಹಲಿ ಪೊಲೀಸರು

ಕಳೆದ ವಾರ ಜೆಎನ್‌ಯು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಮೇಲೆ ನಡೆದ ಜನಸಮೂಹದ ದಾಳಿಗೆ ಸಂಬಂಧಿಸಿದಂತೆ 'Unity against Left' ಎಂಬ ವಾಟ್ಸಾಪ್ ಗುಂಪಿನ 60 ಸದಸ್ಯರಲ್ಲಿ 37 ಜನರನ್ನು ದೆಹಲಿ ಪೊಲೀಸರು ಗುರುತಿಸಿದ್ದಾರೆ ಎನ್ನಲಾಗಿದೆ.

Last Updated : Jan 11, 2020, 03:49 PM IST
ಜೆಎನ್‌ಯು ಹಿಂಸಾಚಾರ: ವಾಟ್ಸಾಪ್ ಗ್ರೂಪ್ ನ 37 ಸದಸ್ಯರನ್ನು ಪತ್ತೆ ಹಚ್ಚಿದ ದೆಹಲಿ ಪೊಲೀಸರು  title=

ನವದೆಹಲಿ: ಕಳೆದ ವಾರ ಜೆಎನ್‌ಯು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ಮೇಲೆ ನಡೆದ ಜನಸಮೂಹದ ದಾಳಿಗೆ ಸಂಬಂಧಿಸಿದಂತೆ 'Unity against Left' ಎಂಬ ವಾಟ್ಸಾಪ್ ಗುಂಪಿನ 60 ಸದಸ್ಯರಲ್ಲಿ 37 ಜನರನ್ನು ದೆಹಲಿ ಪೊಲೀಸರು ಗುರುತಿಸಿದ್ದಾರೆ ಎನ್ನಲಾಗಿದೆ.

ಇಲ್ಲಿಯವರೆಗೆ ಗುರುತಿಸಲ್ಪಟ್ಟವರಲ್ಲಿ ಸುಮಾರು 10 ಮಂದಿ ಹೊರಗಿನವರು ಎಂದು ನಂಬಲಾಗಿದೆ - ಅಂದರೆ, ಅವರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಲ್ಲ, ಅವರು 34 ಜನರನ್ನು ಗಾಯಗೊಳಿಸಿದ ದಾಳಿಯಲ್ಲಿ ಭಾಗವಹಿಸಿದರು ಎನ್ನಲಾಗಿದೆ.

ಹಿಂಸಾಚಾರಕ್ಕೆ ಅವರು ಸಂಬಂಧಿಸಿರುವ ಗುಂಪುಗಳು - ಎಡ-ಬೆಂಬಲಿತ ವಿದ್ಯಾರ್ಥಿ ಸಂಘಟನೆಗಳು ಮತ್ತು ಬಿಜೆಪಿ-ಸಂಬಂಧಿತ ಎಬಿವಿಪಿ - ಎರಡೂ ಹೊರಗಿನವರ ಸಹಾಯವನ್ನು ಪಡೆದಿವೆ ಎಂದು ಮೂಲಗಳು ತಿಳಿಸಿವೆ. ಜೆಎನ್‌ಯು ವಿದ್ಯಾರ್ಥಿಗಳು ಈ ಹೊರಗಿನವರನ್ನು ಕ್ಯಾಂಪಸ್‌ಗೆ ಪ್ರವೇಶಿಸಲು ಅನುಕೂಲ ಮಾಡಿಕೊಟ್ಟರು ಎಂದು ಅವರು ಹೇಳಿದರು.

ಈಗ ಗುರುತಿಸಲಾದ 37 ವ್ಯಕ್ತಿಗಳಲ್ಲಿ ಒಬ್ಬರು ಎಬಿವಿಪಿಯ ಜೆಎನ್‌ಯು ಘಟಕದ ಕಾರ್ಯದರ್ಶಿಯಾಗಿರುವ ಮನೀಶ್ ಜಂಗಿದ್ ಮತ್ತು ಈ ಗುಂಪಿಗೆ ಸೇರ್ಪಡೆಗೊಳ್ಳುವ ಬಗ್ಗೆ ತಮಗೆ ಯಾವುದೇ ಜ್ಞಾನವಿಲ್ಲ ಎಂದು ಹೇಳಿದ್ದಾರೆ. "ನನ್ನ ಫೋನ್ ಮುರಿದುಹೋಗಿದೆ. ನಾನು ಅದನ್ನು ರಿಪೇರಿಗೆ ನೀಡಿದಾಗ ನನ್ನನ್ನು ಗುಂಪಿಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ" ಎಂದು ಅವರು ಹೇಳಿದ್ದಾರೆ.

ಏತನ್ಮಧ್ಯೆ, ಇಂದು ಬೆಳಿಗ್ಗೆ ಜೆಎನ್‌ಯು ಉಪಕುಲಪತಿ ಜಗದೀಶ್ ಎಂ ಕುಮಾರ್ ಅವರು ದಾಳಿಯ ನಂತರ ವಿದ್ಯಾರ್ಥಿಗಳೊಂದಿಗೆ ಮೊದಲ ಸಭೆ ನಡೆಸಿದರು.ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡ ಛಾಯಾಚಿತ್ರಗಳಲ್ಲಿ, ನಿನ್ನೆ ಶಿಕ್ಷಣ ಸಚಿವಾಲಯದ ಸಭೆಗೆ ಕರೆಸಿಕೊಂಡ ಕುಮಾರ್ ಅವರು ಸುಮಾರು 20 ವಿದ್ಯಾರ್ಥಿಗಳನ್ನು ಭೇಟಿಯಾದರು.

ಇದೇ ವೇಳೆ ವಿವಿಯಲ್ಲಿನ ಹಿಂಸಾಚಾರದ ವಿಚಾರವಾಗಿ ಮಾತನಾಡಿದ ಅವರು 'ಅನೇಕ ಅಕ್ರಮ ವಿದ್ಯಾರ್ಥಿಗಳು ಹಾಸ್ಟೆಲ್‌ಗಳಲ್ಲಿ ತಂಗಿದ್ದಾರೆ. ಅವರು ಹೊರಗಿನವರಾಗಿರಬಹುದು, ಅವರು ಯಾವುದೇ ಹಿಂಸಾಚಾರದಲ್ಲಿ ಭಾಗವಹಿಸುತ್ತಿರಬಹುದು ಏಕೆಂದರೆ ಅವರಿಗೆ ವಿಶ್ವವಿದ್ಯಾಲಯದೊಂದಿಗೆ ಯಾವುದೇ ಸಂಬಂಧವಿಲ್ಲ" ಎಂದು ಅವರು ಹೇಳಿದರು. ಹಾಸ್ಟೆಲ್‌ಗಳ ಹೊರಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಬಗ್ಗೆ ಈ ವೇಳೆ ಪ್ರಸ್ತಾಪಿಸಿದರು.

ಸಿಸಿಟಿವಿ ದೃಶ್ಯಾವಳಿಗಳ ಕೊರತೆಯು ಶಂಕಿತರನ್ನು ಗುರುತಿಸುವಲ್ಲಿ ಪ್ರಮುಖ ಅಡಚಣೆಯಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ವೈರಲ್ ಆದ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಸಹ ಅಧ್ಯಯನ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಏತನ್ಮಧ್ಯೆ, ಮೂವರು ಜೆಎನ್‌ಯು ಪ್ರಾಧ್ಯಾಪಕರು ಸಿಸಿಟಿವಿ ದೃಶ್ಯಾವಳಿಗಳು ಮತ್ತು ವಾಟ್ಸಾಪ್ ಸಂದೇಶಗಳು ಸೇರಿದಂತೆ ಸಾಕ್ಷ್ಯಗಳನ್ನು ಸಂರಕ್ಷಿಸುವಂತೆ ಕೋರಿ ಶುಕ್ರವಾರ ದೆಹಲಿ ಹೈಕೋರ್ಟ್‌ಗೆ ತೆರಳಿದರು. ಈ ವಿಷಯ ಸೋಮವಾರ ವಿಚಾರಣೆಗೆ ಬರುವ ಸಾಧ್ಯತೆ ಇದೆ.

Trending News