JNU ಹಿಂಸಾಚಾರ: ಅಹ್ಮದಾಬಾದ್ ನಲ್ಲಿ ABVP ಮತ್ತು NSUI ಕಾರ್ಯಕರ್ತರ ಮಧ್ಯೆ ಮಾರಾಮಾರಿ

ದೆಹಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದೀಗ ಗುಜರಾತ್ ನ ಅಹ್ಮದಾಬಾದ್ ನಲ್ಲಿರುವ ಪಾಲಡಿ ಪ್ರದೇಶದಲ್ಲಿ ABVP ವಿದ್ಯಾರ್ಥಿಸಂಘಟನೆಯ ಕಾರ್ಯಾಲಯದ ಎದುರು NSUI ವಿದ್ಯಾರ್ಥಿ ಸಂಘಟನೆಯ ಸದಸ್ಯರು ವಿರೋಧ ಪ್ರದರ್ಶನ ನಡೆಸಿದ್ದಾರೆ.

Last Updated : Jan 7, 2020, 02:48 PM IST
JNU ಹಿಂಸಾಚಾರ: ಅಹ್ಮದಾಬಾದ್ ನಲ್ಲಿ ABVP ಮತ್ತು NSUI ಕಾರ್ಯಕರ್ತರ ಮಧ್ಯೆ ಮಾರಾಮಾರಿ title=
ಚಿತ್ರ ಕೃಪೆ: ANI

ನವದೆಹಲಿ:ದೆಹಲಿಯ ಪ್ರತಿಷ್ಠಿತ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದೀಗ ಗುಜರಾತ್ ನ ಅಹ್ಮದಾಬಾದ್ ನಲ್ಲಿರುವ ಪಾಲಡಿ ಪ್ರದೇಶದಲ್ಲಿ ABVP ವಿದ್ಯಾರ್ಥಿಸಂಘಟನೆಯ ಕಾರ್ಯಾಲಯದ ಎದುರು NSUI ವಿದ್ಯಾರ್ಥಿ ಸಂಘಟನೆಯ ಸದಸ್ಯರು ವಿರೋಧ ಪ್ರದರ್ಶನ ನಡೆಸಿದ್ದಾರೆ. ಈ ವಿರೋಧ ಪ್ರದರ್ಶನದ ಭಾಗವಾಗಿ ಲಾಠಿಗಳನ್ನು ಹಿಡಿದು ರಸ್ತೆಗಿಳಿದ ಕಾರ್ಯಕರ್ತರು ದಾಂಧಲೆ ನಡೆಸಿದ್ದಾರೆ. ಆ ಬಳಿಕ ಎರಡು ಕಡೆಯ ಕಾರ್ಯಕರ್ತರು ಮಾರಾಮಾರಿಗಿಳಿದು, ಕಲ್ಲುತೂರಾಟ ನಡೆಸಿದ್ದಾರೆ. ಈ ವೇಳೆ ABVP ಕಾರ್ಯಕರ್ತರು NSUI ಕಾರ್ಯಕರ್ತರ ಮೇಲೆ ದ್ವಂಸಗೊಳಿಸಿರುವ ಆರೋಪ ಮಾಡಿದ್ದಾರೆ. ಸದ್ಯ ABVP ಕಾರ್ಯಾಲಯದ ಹೊರಗಡೆ ಭಾರಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಈ ಮಧ್ಯೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಜನವರಿ 5ರಂದು ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧ್ಯಾರ್ಥಿ ಸಂಘಟನೆಯ ಅಧ್ಯಕ್ಷೆಯಾಗಿರುವ ಆಯಿಶಿ ಘೋಷ್ ಹಾಗೂ ಇತರೆ 18 ಜನರ ವಿರುದ್ಧ ದೆಹಲಿ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ. FIR ಪ್ರಕಾರ JNUನ ಮುಖ್ಯ ಭದ್ರತಾ ಅಧಿಕಾರಿ ಪೊಲೀಸರ ಬಳಿ ತಕರಾರು ದಾಖಲಿಸಿದ್ದಾರೆ ಎನ್ನಲಾಗಿದೆ. JNU ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷೆಯಾಗಿರುವ ಆಯಿಷಿ ಘೋಷ್ ಇತರೆ 18 ಜನರ ಜೊತೆಗೂಡಿ ಜನೆವರಿ 4ರಂದು ಮಧ್ಯಾಹ್ನ ಸುಮಾರು 1 ಗಂಟೆಗೆ ಮಹಿಳಾ ಗಾರ್ಡ್ ಒರ್ವರನ್ನು ನೂಕಿ  ಇತರೆ ಗಾರ್ಡ್ ಗಳ ಜೊತೆ ಮಾರಾಮಾರಿ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಅಷ್ಟೇ ಅಲ್ಲ ಬಲವಂತವಾಗಿ CIS ರೂಮ್ ಗೆ ಪ್ರವೇಶಿಸಲು ಯತ್ನಿಸಿದ್ದಾರೆ. ಅಲ್ಲಿ ನಿಯೋಜನೆಗೊಂಡಿದ್ದ ಸೆಕ್ಯೂರಿಟಿ ಗಾರ್ಡ್ ಅವರನ್ನು ತಡೆಯಲು ಯತ್ನಿಸಿದ್ದಾನೆ. ಆದರೆ, ನಂತರ CIS ರೂಮ್ ನ ಹಿಂಭಾಗದ ಕಿಟಕಿಯನ್ನು ಧ್ವಂಸಗೊಳಿಸಿ ಸರ್ವರ್ ರೂಮ್ ಪ್ರವೇಶಿಸದ ಇವರೆಲ್ಲರೂ, ಫೈಬರ್ ಆಪ್ಟಿಕ್ ಕೇಬಲ್ ಅನ್ನು ಕಿತ್ತು ಬೈಯೋಮೆಟ್ರಿಕ್ ಮಶೀನ್ ಧ್ವಂಸಗೊಳಿಸಿದ್ದಾರೆ ಎಂದು FIRನಲ್ಲಿ ಹೇಳಲಾಗಿದೆ.

FIRನಲ್ಲಿ ಆಯಿಷಿ ಘೋಷ್ ಹಾಗೂ ಇತರೆ 18 ಜನರ ವಿರುದ್ಧ IPC ಸೆಕ್ಷನ್ 323, 341, 506ರ ಅಡಿ ಸರ್ಕಾರಿ ಆಸ್ತಿಗೆ ಹಾನಿ ಮುಟ್ಟಿಸಿದ ಆರೋಪ ಮಾಡಲಾಗಿದೆ. ಈ FIR ಜನವರಿ 5ಕ್ಕೆ ದಾಖಲಿಸಲಾಗಿದೆ. ಅತ್ತ ದೆಹಲಿ ಪೊಲೀಸರ ಕ್ರೈಂ ಬ್ರಾಂಚ್ ತಂಡ JNUಗೆ ಭೇಟಿ ನೀಡಿ, ಮುಖವಾದ ಧರಿಸಿದ್ದ ಗೂಂಡಾಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಇವರನ್ನು ಪತ್ತೆ ಹಚ್ಚಲು ಪೊಲೀಸರು ಫೇಸ್ ರಿಕಗ್ನಿಶನ್ ಟೆಕ್ನಿಕ್  ಬಳಸುತ್ತಿದ್ದಾರೆ. ಸದ್ಯ ವಿವಿ ಆವರಣದಲ್ಲಿ ಶಾಂತಿ ನೆಲೆಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದು, ವಸಂತ್ ಕುಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ FIR ದಾಖಲಿಸಲಾಗಿದೆ. JNU ಆಡಳಿತ ಮಂಡಳಿ ಕೂಡ ರಜಿಸ್ಟ್ರೇಷನ್ ಪ್ರಕ್ರಿಯೆಯ ದಿನಾಂಕವನ್ನು ಜನವರಿ 12ರವರೆಗೆ ವಿಸ್ತರಿಸಿದೆ.

Trending News