ಜೆ.ಎನ್.ಯುನಲ್ಲಿ ಎಬಿವಿಪಿಯಿಂದ ಎಡಪಂಥೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ

ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಡ ವಿದ್ಯಾರ್ಥಿ ಒಕ್ಕೂಟ ಭರ್ಜರಿ ಗೆಲುವು ಸಾಧಿಸಿದ ನಂತರ ಈಗ  ಆರ್.ಎಸ್.ಎಸ್ ಬೆಂಬಲಿತ ಎಬಿವಿಪಿ ವಿದ್ಯಾರ್ಥಿ ಸಂಘಟನೆ ಮತ್ತು ಎಡ ವಿದ್ಯಾರ್ಥಿ ಒಕ್ಕೂಟ ವಿದ್ಯಾರ್ಥಿಗಳ ಮೇಲೆ ಹಲ್ಲೆಯನ್ನು ಮಾಡಿದೆ ಎಂದು ತಿಳಿದು ಬಂದಿದೆ.

Last Updated : Sep 17, 2018, 03:14 PM IST
ಜೆ.ಎನ್.ಯುನಲ್ಲಿ ಎಬಿವಿಪಿಯಿಂದ ಎಡಪಂಥೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ title=

ನವದೆಹಲಿ: ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಎಡ ವಿದ್ಯಾರ್ಥಿ ಒಕ್ಕೂಟ ಭರ್ಜರಿ ಗೆಲುವು ಸಾಧಿಸಿದ ನಂತರ ಈಗ  ಆರ್.ಎಸ್.ಎಸ್ ಬೆಂಬಲಿತ ಎಬಿವಿಪಿ ವಿದ್ಯಾರ್ಥಿ ಸಂಘಟನೆ ಮತ್ತು ಎಡ ವಿದ್ಯಾರ್ಥಿ ಒಕ್ಕೂಟ ವಿದ್ಯಾರ್ಥಿಗಳ ಮೇಲೆ ಹಲ್ಲೆಯನ್ನು ಮಾಡಿದೆ ಎಂದು ತಿಳಿದು ಬಂದಿದೆ.

ನೂತನವಾಗಿ ಆಯ್ಕೆಗಾಗಿರುವ ಜೆಎನ್ಯು ವಿದ್ಯಾರ್ಥಿ ಸಂಘದ  ಅಧ್ಯಕ್ಷನಾಗಿರುವ ಎನ್ ಸಾಯಿ ಬಾಲಾಜಿಗೆ  ಸೋಮವಾರ ಬೆಳಗಿನ ಜಾವದಲ್ಲಿ ಎಬಿವಿಪಿ ಸದಸ್ಯರು ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.ಬಾಲಾಜಿ ಹೇಳುವಂತೆ " ನಾನು ಮತ್ತು ಇತರರು ಸಂದರ್ಶನ ನೀಡುತ್ತಿರುವ ಸಂದರ್ಭದಲ್ಲಿ ಎಬಿವಿಪಿ ಸದಸ್ಯರು AISA ಸಂಘಟನೆ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.ಇನ್ನು ಮುಂದುವರೆದು "ಪೊಲೀಸರು ಪಿಸಿಆರ್ ವಾಹನದ ಮೂಲಕ  ಕ್ಯಾಂಪಸ್ ಆವರಣದಿಂದ ತಮ್ಮನ್ನು ಹೊರಗಡೆ ಕೊರೆದೊಯ್ಯುತ್ತಿರುವ ಸಂದರ್ಭದಲ್ಲಿಯೂ ಸಹಿತ ದಾಳಿ ಮಾಡಿ ಹಲ್ಲೆಗೈದಿದ್ದಾರೆ" ಎಂದು ತಿಳಿಸಿದ್ದಾರೆ.

ಭಾನುವಾರ ನಡೆದ ಜೆಎನ್ಎಸ್ಯು ಚುನಾವಣೆಯಲ್ಲಿ ಎಐಎಸ್ಎದ ಬಾಲಾಜಿ 2,161 ಮತಗಳನ್ನು ಪಡೆದು ಎಬಿವಿಪಿ ಅಭ್ಯರ್ಥಿ ಲಲಿತ್ ಪಾಂಡೆ ಅವರನ್ನು 1,179 ಮತಗಳ ಅಂತರದಿಂದ ಸೋಲಿಸಿದ್ದರು.ವಿದ್ಯಾರ್ಥಿ ಚುನಾವಣೆಯಲ್ಲಿ ಎಡಪಂಥೀಯ ಎಐಎಸ್ಎ, ಸ್ಟುಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ), ಡೆಮೋಕ್ರಾಟಿಕ್ ಸ್ಟೂಡೆಂಟ್ಸ್ ಫೆಡರೇಶನ್ (ಡಿಎಸ್ಎಫ್) ಮತ್ತು ಆಲ್ ಇಂಡಿಯಾ ಸ್ಟೂಡೆಂಟ್ಸ್ ಫೆಡರೇಶನ್ (ಎಐಎಸ್ಎಫ್) ಸಂಘಟನೆಗಳು ಎಡ ವಿದ್ಯಾರ್ಥಿ ಒಕ್ಕೂಟದ ಮೈತ್ರಿಕೂಟದಡಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದವು. 

Trending News