ಶ್ರೀನಗರ: ತಮಿಳುನಾಡಿನ ಕೂನೂರು ಬಳಿ ಸಂಭವಿಸಿದ್ದ ಹೆಲಿಕಾಪ್ಟರ್ ದುರಂತ(Gen Bipin Rawat Chopper Crash)ದಲ್ಲಿ ಮೃತಪಟ್ಟಿದ್ದ ದೇಶದ ಮೊದಲ ರಕ್ಷಣಾ ಪಡೆಗಳ ಮುಖ್ಯಸ್ಥ(ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರ ಸಾವಿನ ಬಗ್ಗೆ ಅವಹೇಳನಕಾರಿ ಕಾಮೆಂಟ್ ಮಾಡಿದ್ದ ಬ್ಯಾಂಕ್‌ನ ಮಹಿಳಾ ನೌಕರರೊಬ್ಬರನ್ನು ಅಮಾನತು ಮಾಡಲಾಗಿದೆ.
ಸರ್ಕಾರಿ ಸ್ವಾಮ್ಯದ ಜಮ್ಮು & ಕಾಶ್ಮೀರ ಬ್ಯಾಂಕ್‌ನ(Jammu and Kashmir Bank) ಉದ್ಯೋಗಿ ಅಫ್ರೀನ್ ಹಸನ್ ನಕಾಶ್ ಅಮಾನತುಗೊಂಡವರು. ಬ್ಯಾಂಕ್‌ನಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿರುವ ಅಫ್ರೀನ್, ಫೇಸ್‌ಬುಕ್‌ನಲ್ಲಿ ಬಿಪಿನ್ ರಾವತ್ ಅವರ ಸಾವಿನ ಫೋಸ್ಟ್ ವೊಂದಕ್ಕೆ ನಗುವ ಎಮೋಜಿ(Smile Emoji) ಹಾಕಿದ್ದರು. ಇದನ್ನು ಗಂಭೀರವಾಗಿರುವ ಪರಿಗಣಿಸಿರುವ ಬ್ಯಾಂಕ್ ಅಫ್ರೀನ್ ವಿರುದ್ಧ ಶಿಸ್ತುಕ್ರಮ ಕೈಗೊಂಡಿದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ: IRCTCನಲ್ಲಿ ತತ್ಕಾಲ್ ಬುಕಿಂಕ್ ಗೆ ಈ ಟ್ರಿಕ್ ಬಳಸಿ: ಚಿಟಿಕೆಯಲ್ಲಿ ನಿಮ್ಮ ಸೀಟ್ Confirm ಆಗುತ್ತದೆ
‘ಸರ್ಕಾರಿ ನೌಕರರು ಸೋಷಿಯಲ್ ಮೀಡಿಯಾ(Social Media)ಗಳ ಬಳಕೆ ಕುರಿತು ಆಗಾಗ ಸುತ್ತೋಲೆ ಹೊರಡಿಸಿದ್ದರೂ ಈ ಮಹಿಳಾ ಸಿಬ್ಬಂದಿಯು ಸಾಮಾಜಿಕ ಜಾಲತಾಣದಲ್ಲಿ ದುರ್ವತನೆ(Inappropriate Emoji ) ತೋರಿದ್ದಾರೆ. ಹೀಗಾಗಿ ಶಿಸ್ತುಕ್ರಮ ಕಾಯ್ದಿರಿಸಿ ತಕ್ಷಣದಿಂದಲೇ ಅಮಾನತುಗೊಳಿಸಲಾಗಿದೆ’ ಎಂದು ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್‌ನ ಮಾನವ ಸಂಪನ್ಮೂಲ ವಿಭಾಗವು ತಿಳಿಸಿದೆ.
ಬಹುದೊಡ್ಡ ಪ್ರಶ್ನೆ ಹುಟ್ಟುಹಾಕಿದ ಹೆಲಿಕಾಪ್ಟರ್ ದುರಂತ!
ದೇಶದ ಮೊದಲ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಅವರ ಹೆಲಿಕಾಪ್ಟರ್ ದುರಂತ(Helicopter Crash) ಘಟನೆಯು ಬಹುದೊಡ್ಡ ಪ್ರಶ್ನೆ ಹುಟ್ಟುಹಾಕಿದೆ. ಕೆಲವರು ಇದೊಂದು ಅಪಘಾತ ಎಂದು ಹೇಳುತ್ತಿದ್ದರೆ, ಇನ್ನು ಕೆಲವು ಇದೊಂದು ವ್ಯವಸ್ಥಿತ ಸಂಚು ಎಂದು ಆರೋಪಿಸುತ್ತಿದ್ದಾರೆ. ಸೇನಾ ಹೆಲಿಕಾಪ್ಟರ್ ಅಪಘಾತಕ್ಕೆ ಕೆಟ್ಟ ಹವಾಮಾನವೇ ಕಾರಣವೆಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಸಂಪೂರ್ಣ ತನಿಖೆಯ ಬಳಿಕವಷ್ಟೇ ನಿಜಾಂಶ ಏನೆಂದು ತಿಳಿದುಬರಲಿದೆ.
ಇದನ್ನೂ ಓದಿ: Omicron scare: 'ಅಪಾಯದಲ್ಲಿರುವ' ರಾಷ್ಟ್ರಗಳ ಪಟ್ಟಿಯಿಂದ ಸಿಂಗಾಪುರವನ್ನು ಕೈಬಿಟ್ಟ ಭಾರತ
ಹೆಲಿಕಾಪ್ಟರ್ ದುರಂತದದಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಪತ್ನಿ ಮಧುಲಿಕಾ ರಾವತ್, ಬ್ರಿಗೇಡಿಯರ್ ಎಲ್.ಎಸ್.ಲಿದ್ದರ್, ಲೆಫ್ಟಿನೆಂಟ್ ಕರ್ನಲ್ ಅರವಿಂದರ್ ಸಿಂಗ್, ಎನ್.ಕೆ.ಗುರೇಶರ್ ಸಿಂಗ್, ಎನ್.ಕೆ.ಜಿತೇಂದ್ರ, ಲಾನ್ಸ್ ನಾಯ್ಕ್ ವಿವೇಕ ಕುಮಾರ್, ಲಾನ್ಸ್ ನಾಯ್ಕ್ ಬಿ.ಸಾಯಿ ತೇಜ್, ಲಾನ್ಸ್ ನಾಯ್ಕ್ ಹೌಸ್ ಸತ್ತಾರ್ ಸೇರಿದಂತೆ ಸೇನಾ ಸಹಾಯಕರು, ಭದ್ರತಾ ಕಮಾಂಡ್‍ಗಳು, ಪೈಲಟ್‍ಗಳು ಸಾವನ್ನಪ್ಪಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.