ತನ್ನ ಬಳಕೆದಾರರಿಗೆ ಒಂದು ವರ್ಷಗಳ ಕಾಲ ಉಚಿತವಾಗಿ Disney+Hotstar ಚಂದಾದಾರಿಕೆ ನೀಡಲಿದೆ Jio

ರಿಲಯನ್ಸ್ ಜಿಯೋ, ಡಿಸ್ನಿ + ಹಾಟ್‌ಸ್ಟಾರ್ ಸಹಯೋಗದೊಂದಿಗೆ ಜಿಯೋ ಪ್ರಿಪೇಯ್ಡ್ ಬಳಕೆದಾರರಿಗಾಗಿ 1 ವರ್ಷದ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಪೂರಕ ಚಂದಾದಾರಿಕೆಯನ್ನು ಉಚಿತವಾಗಿ ನೀಡಲಿದೆ ಎಂದು ಪ್ರಕಟಿಸಿದೆ.

Last Updated : Jun 9, 2020, 03:45 PM IST
ತನ್ನ ಬಳಕೆದಾರರಿಗೆ ಒಂದು ವರ್ಷಗಳ ಕಾಲ ಉಚಿತವಾಗಿ Disney+Hotstar ಚಂದಾದಾರಿಕೆ ನೀಡಲಿದೆ Jio title=

ನವದೆಹಲಿ: ರಿಲಯನ್ಸ್ ಜಿಯೋ, ಡಿಸ್ನಿ + ಹಾಟ್‌ಸ್ಟಾರ್ ಸಹಯೋಗದೊಂದಿದೆ ಜಿಯೋ ಪ್ರಿಪೇಯ್ಡ್ ಬಳಕೆದಾರರಿಗಾಗಿ 1 ವರ್ಷದ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಪೂರಕ ಚಂದಾದಾರಿಕೆಯನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದೆ. ಇದಕ್ಕಾಗಿ, ಬಳಕೆದಾರರು ಯಾವುದೇ ಹೆಚ್ಚುವರಿ ಹಣವನ್ನು ಪಾವತಿಸಬೇಕಾಗಿಲ್ಲ. ಎಲ್ಲಾ ಹೊಸ ಮತ್ತು ಹಳೆಯ ಜಿಯೋ ಬಳಕೆದಾರರಿಗೆ ಈ ಪ್ರಯೋಜನವು ಲಭ್ಯವಿರಲಿದೆ. ಡಿಸ್ನಿ + ಹಾಟ್‌ಸ್ಟಾರ್ ವಿಐಪಿಯ 1 ವರ್ಷದ ಚಂದಾದಾರಿಕೆಯ ಬೆಲೆ 399 ರೂ ಆಗಿದೆ.

ಡಿಸ್ನಿ + ಹಾಟ್‌ಸ್ಟಾರ್ ವಿಐಪಿ ಮೇಲೆ ಎಕ್ಸ್ಕ್ಲೂಸಿವ್ ಹಾಟ್‌ಸ್ಟಾರ್ ಸ್ಪೆಷಲ್ ಷೋ, ಅನ್ಲಿಮಿಟೆಡ್ ಲೈವ್ ಸ್ಪೋರ್ಟಿಂಗ್ ಆಕ್ಷನ್, ಹೊಸ ಬಾಲಿವುಡ್ ಚಿತ್ರಗಳು, ಸೂಪರ್ಹೀರೋ ಚಿತ್ರಗಳು, ಡಿಸ್ನಿ ಆನಿಮೇಟೆಡ್ ಚಿತ್ರಗಳು ಮತ್ತು ಇತರೆ ಹಲವು ಕಂಟೆಂಟ್ ಲಭ್ಯವಿದೆ. ಜಿಯೋ ತನ್ನ ರೂ.401 ರ ಮಾಸಿಕ, ರೂ.2599 ಬೆಲೆಯ ವಾರ್ಷಿಕ ಹಾಗೂ 61 2 ರೂ.ಗಳಿಂದ ಹಿಡಿದು ರೂ.1208 ಬೆಲೆಯ ಡೇಟಾ ಆದ ಆನ್ ವಾವುಚರ್ ಗಳ ಮೇಲೆ ಒಂದು ವರ್ಷದ Disney+ Hotstar VIP ಕಾಂಪ್ಲಿಮೆಂಟರಿ ಚಂದಾದಾರಿಕೆಯನ್ನು ಪ್ರಸ್ತುತಪಡಿಸಿದೆ. ಜಿಯೋ ಬಳಕೆದಾರರು ಇದರಿಂದ ಯಾವುದಾದರೊಂದು ಪ್ಲಾನ್ ಆಯ್ಕೆ ಮಾಡಿ, ಯಾವುದೇ ಹೆಚ್ಚಿನ ಶುಲ್ಕ ಪಾವತಿಸದೇ ಉಚಿತ ವೈಸ್ ಕಾಲ್, ಡೇಟಾ, ಆಪ್ ಗಳು ಹಾಗೂ ಇತರೆ ಲಾಭಗಳ ಜೊತೆಗೆ ಉಚಿತ  Disney+ Hotstar VIP ಚಂದಾದಾರಿಕೆ ಪಡೆಯಬಹುದು.

ಪ್ಲಾನ್ ಗಳ ವಿವರ ಇಲ್ಲಿದೆ
ರಿಲಯನ್ಸ್ ಜಿಯೋ ರೂ.401 ಬೆಲೆಯ ಮಾಸಿಕ ಪ್ರಿಪೇಡ್ ಪ್ಲಾನ್ ನಲ್ಲಿ ನಿತ್ಯ 3 ಜಿಬಿ+6ಜಿಬಿ ಅಂದರೆ ಒಟ್ಟು 90 ಜಿಬಿ ಡೇಟಾ, ಜಿಯೋ ನಿಂದ ಜಿಯೋ ಅನಿಯಮಿತ ಧ್ವನಿ ಕರೆ, ಜಿಯೋ ನಿಂದ ಇತರೆ ನೆಟ್ವರ್ಕ್ ಗಳ ಮೇಲೆ 1000 ನಿಮಿಷಗಳ ಉಚಿತ ಕರೆ, ನಿತ್ಯ 100 ಉಚಿತ sms ಜಿಯೋ ಆಪ್ಸ್ ಗಳನ್ನು ಆಕ್ಸಸ್ ಮಾಡಬಹುದು. ಈ ಪ್ಲಾನ್ 28 ದಿನಗಳ ಸಿಂಧುತ್ವ ಹೊಂದಿರಲಿದೆ. ಇದರ ಜೊತೆಗೆ ನಿಮಗೆ ಒಂದು ವರ್ಷಗಳ  Disney+ Hotstar VIP ಚಂದಾದಾರಿಕೆ ಉಚಿತವಾಗಿ ಸಿಗಲಿದೆ. 

ಇದೆ ರೀತಿ ಆಡ್ ಆನ್ ಪ್ಯಾಕ್ ಗಳಾಗಿರುವ ರೂ.612, ರೂ.1004 ಹಾಗೂ ರೂ.1208 ಪ್ಯಾಕ್ ಗಳ ಮೇಲೂ ಕೂಡ ಒಂದು ವರ್ಷ  Disney+ Hotstar VIP ಉಚಿತ ಸಬಸ್ಕ್ರಿಪ್ಶನ್ ಸಿಗಲಿದೆ.

Trending News