ಇಂದು JEE Main Result 2020 ಫಲಿತಾಂಶ ಪ್ರಕಟ , ಫಲಿತಾಂಶ ವೀಕ್ಷಣೆಗೆ ಇಲ್ಲಿಗೆ ಭೇಟಿ ನೀಡಿ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಇಂದು ಅಂದರೆ ಸೆಪ್ಟೆಂಬರ್ 11, 2020ರಂದು ಜೆಇಇ ಮೇನ್ 2020ರ ಪರೀಕ್ಷಾ ಫಲಿತಾಂಶ ಘೋಷಣೆ ಮಾಡುವ ಸಾಧಯ್ತೆ ಇದೆ. ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖರಿಯಾಲ್ ನಿಶಾಂಕ್ ಸಾಮಾಜಿಕ ಮಾಧಯ್ಮದಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ.

Last Updated : Sep 11, 2020, 10:48 AM IST
  • ಇಂದು JEE ಮುಖ್ಯ ಪ್ರರೀಕ್ಷೆಯ ಫಲಿತಾಂಶ ಪ್ರಕಟ ಸಾಧ್ಯತೆ.
  • ಖುದ್ದು ಕೇಂದ್ರ ಶಿಕ್ಷಣ ಸಚಿವರಿಂದಲೇ ಈ ಕುರಿತು ಮಾಹಿತಿ.
  • ಫಲಿತಾಂಶ ಘೋಷಣೆಯ ನಂತರ 2.5 ಲಕ್ಷ ಅಭ್ಯರ್ಥಿಗಳು ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಹಾಜರಾಗಲು ಅವಕಾಶ ಪಡೆಯಲಿದ್ದಾರೆ.
ಇಂದು JEE Main Result 2020 ಫಲಿತಾಂಶ ಪ್ರಕಟ , ಫಲಿತಾಂಶ ವೀಕ್ಷಣೆಗೆ ಇಲ್ಲಿಗೆ ಭೇಟಿ ನೀಡಿ  title=

ನವದೆಹಲಿ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಇಂದು ಅಂದರೆ ಸೆಪ್ಟೆಂಬರ್ 11, 2020ರಂದು ಜೆಇಇ ಮೇನ್ 2020(JEE Main Exam 2020)ರ ಪರೀಕ್ಷಾ ಫಲಿತಾಂಶ ಘೋಷಣೆ ಮಾಡುವ ಸಾಧಯ್ತೆ ಇದೆ. ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖರಿಯಾಲ್ ನಿಶಾಂಕ್ ಸಾಮಾಜಿಕ ಮಾಧಯ್ಮದಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಮಾಧಯಮ ಟ್ವಿಟ್ಟರ್ ಮೇಲೆ ಈ ಕುರಿತು ಮಾಹಿತಿ
ಜೆಇಇ ಮೇನ್ಸ್ 2020 ಫಲಿತಾಂಶವನ್ನು ಘೋಷಿಸಲು ಸಕಲ ಸಿದ್ಧತೆಗಳನ್ನು ಪ್ರಾರಂಭಿಸಲಾಗಿದೆ ಮತ್ತು ಶೀಘ್ರದಲ್ಲೇ ಫಲಿತಾಂಶಗಳನ್ನು ಪ್ರಕಟಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಡಾ.ರಮೇಶ್ ಪೋಖ್ರಿಯಾಲ್ ನಿಶಾಂಕ್ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಪರೀಕ್ಷೆಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ತಾಣಗಳಾದ jeemain.nta.nic.in ಅಥವಾ jeemain.nic.in ನಲ್ಲಿ ಪರಿಶೀಲಿಸಬಹುದು. ಜೆಇಇ ಮುಖ್ಯ ಪರೀಕ್ಷೆಯ Provisional Answer Keyಯನ್ನು 8 ಸೆಪ್ಟೆಂಬರ್ 2020 ರಂದು ಬಿಡುಗಡೆ ಮಾಡಲಾಗಿತ್ತು.

ಹೀಗೆ ಫಲಿತಾಂಶ ವಿಕ್ಷೀಸಿ
ಪರೀಕ್ಷೆಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳು ಈ ಹಂತಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಸ್ಕೋರ್ ಕಾರ್ಡ್ ಪರಿಶೀಲಿಸಬಹುದು-
1. ಅಧಿಕೃತ ಸೈಟ್ jeemain.nta.nic.in ಗೆ ಹೋಗಿ.
2. ಜೆಇಇ ಮುಖ್ಯ ಫಲಿತಾಂಶಕ್ಕಾಗಿ 'ಡೌನ್‌ಲೋಡ್ ಫಲಿತಾಂಶ  (Download Result)' ಕ್ಲಿಕ್ ಮಾಡಿ.
3. ಲಾಗಿನ್ ಮಾಹಿತಿಯನ್ನು ನಮೂದಿಸಿ.
4. ಫಲಿತಾಂಶವನ್ನು ಡೌನ್‌ಲೋಡ್ ಮಾಡಿ ಮತ್ತು ಭವಿಷ್ಯಕ್ಕಾಗಿ ಮುದ್ರಣವನ್ನು ಸಹ ಪಡೆದುಕೊಳ್ಳಿ.

ಜೆಇಇ ಮುಖ್ಯ ಪರೀಕ್ಷೆ 2020 ಅನ್ನು ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 6 ರವರೆಗೆ 233 ನಗರಗಳ 660 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಜೆಇಇ ಮುಖ್ಯ ಫಲಿತಾಂಶ ಘೋಷಣೆಯ ನಂತರ 2.5 ಲಕ್ಷ ಅಭ್ಯರ್ಥಿಗಳು ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಹಾಜರಾಗಲು ಅವಕಾಶ ಪಡೆಯಲಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.

Trending News