ನವದೆಹಲಿ : ಜಮ್ ಶೆಡ್ ಪುರದಲ್ಲಿ 11 ವರ್ಷದ ಬಾಲಕಿ ತುಳಸಿ ಕುಮಾರಿ 12 ಮಾವಿನ ಹಣ್ಣಗಳನ್ನ 1.2 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿ, ಆನ್ ಲೈನ್ ಕ್ಲಾಸ್‌ಗಾಗಿ ಮೊಬೈಲ್ ಖರೀದಿಸಿದ್ದಾಳೆ.
ಹೌದು, 11 ವರ್ಷದ ತುಳಸಿ ಕುಮಾರಿ ಎನ್ನುವ ಮಾವಿನಹಣ್ಣು ಮಾರಾಟ ಮಾಡುವ ಹುಡುಗಿಗೆ ಸಹಾಯ ಮಾಡುವ ಉದ್ದೇಶದಿಂದ ಮೌಲ್ಯಯುತ ಎಡುಟೈನ್ಮೆಂಟ್ ಕಂಪನಿಯ ಉಪಾಧ್ಯಕ್ಷ ನರೇಂದ್ರ ಹೆಟೆ(Narendra Hete) ಅವ್ರು, 1 ಲಕ್ಷ ಇಪ್ಪತ್ತು ಸಾವಿರ ನೀಡಿ 12 ಮಾವಿನ ಹಣ್ಣಗಳನ್ನ ಖರೀದಿಸಿದ್ದಾರೆ. ಇನ್ನು ಈ ಹಣದಿಂದ ಹುಡುಗಿ ಅಧ್ಯಯನ ಮಾಡಲು ಫೋನ್ ಖರೀದಿಸಿದ್ದಾಳೆ. ಕೊರೊನಾ ಸಮಯದಲ್ಲಿ ತನ್ನ ಶಾಲೆಯನ್ನ ಮುಚ್ಚಲಾಗಿದ್ದು, ಆನ್‌ಲೈನ್ ಕ್ಲಾಸ್ ಮಾತ್ರ ನಡೆಯುತ್ತಿವೆ. ಆದ್ರೆ, ಬಾಲಕಿಯ ಬಳಿ ಫೋನ್ ಇಲ್ಲದ ಕಾರಣ ಅಧ್ಯಯನ ಮಾಡಲು ಸಾಧ್ಯವಾಗುತ್ತಿರಲಿಲ್ಲ.
ಇದನ್ನೂ ಓದಿ : Cooking Oil Price : ಜನ ಸಾಮಾನ್ಯರಿಗೆ ಸಿಹಿ ಸುದ್ದಿ: ಅಡುಗೆ ಎಣ್ಣೆ ಬೆಲೆ ಇಳಿಕೆ..!
ತುಳಸಿಗೆ ಮೊಬೈಲ್ ಫೋನ್(Mobile Phone) ಮತ್ತು ಎರಡು ವರ್ಷಗಳ ಇಂಟರ್ನೆಟ್ ಸಹ ಒದಗಿಸಲಾಗಿದ್ದು, ಆನ್‌ಲೈನ್‌ನಲ್ಲಿ ಅಧ್ಯಯನ ಮಾಡಬಹುದು. ಇನ್ನು ನರೇಂದ್ರ ಅವ್ರ ಪುತ್ರ ಅಮೆಯಾ ಸಂತೋಷ ವ್ಯಕ್ತಪಡಿಸಿದ್ದು, ತುಳಸಿ ತನ್ನ ಅಧ್ಯಯನ ಪುನರಾರಂಭಿಸಲು ಸಾಧ್ಯವಾಗುತ್ತೆ ಎಂದು ಹೇಳಿದರು.
ಇದನ್ನೂ ಓದಿ : ಜುಲೈ 5 ರವರೆಗೆ ಲಾಕ್ ಡೌನ್ ವಿಸ್ತರಿಸಿದ ಹರ್ಯಾಣ
ಈ ಕುರಿತು ಸಂತೋಷ ವ್ಯಕ್ತ ಪಡಿಸಿದ ತುಳಸಿಯ ತಂದೆ ತಂದೆ ಶ್ರೀಮಲ್ ಕುಮಾರ್, ನರೇಂದ್ರ ಅವ್ರು ದೇವರ ರೂಪದಲ್ಲಿ ಬಂದಿದ್ದಾರೆ. ಅವರ ಸಹಾಯದಿಂದ ನನ್ನ ಮಗಳು ಹೆಚ್ಚಿನ ಅಧ್ಯಯನವನ್ನ ಮಾಡಲು ಸಾಧ್ಯವಾಗುತ್ತೆ ಎಂದರು. ಇನ್ನು ತುಳಸಿ(Tulsi Kumari)ಯ ತಾಯಿ ಪದ್ಮಿನಿ ದೇವಿ ಧನ್ಯವಾದ ಅರ್ಪಿಸಿದರು.
ಇದನ್ನೂ ಓದಿ : Ram Nath Kovind : ಮೊದಲ ಬಾರಿಗೆ ಹುಟ್ಟೂರಿಗೆ ಭೇಟಿ ನೀಡಿದ ರಾಷ್ಟ್ರಪತಿ ಕೋವಿಂದ್!
ಇನ್ನು ತುಂಬಾನೇ ಖುಷಿಯಾಗಿರುವ ತುಳಿಸಿ, ನನ್ನ ಹೆಚ್ಚಿನ ಅಧ್ಯಯನಕ್ಕೆ ಸ್ಮಾರ್ಟ್‌ಪೋನ್ ಸಹಾಯವಾಗುತ್ತೆ. ನಾನಿನ್ನೂ ಮಾವಿನಹಣ್ಣು(Mangoes) ಮಾರಾಟ ಮಾಡಬೇಕಾಗಿಲ್ಲ. ತನ್ನ ಮಾವಿನಹಣ್ಣು ತುಂಬಾ ಸಿಹಿಯಾಗಿರುತ್ತೆ ಅಂತಾ ಗುತ್ತಿತ್ತು. ಆದ್ರೆ, ಇದ್ರಿಂದ ಜೀವನ ಬದಲಾಗುತ್ತದೆ ಎಂದು ತಿಳಿದಿರಲಿಲ್ಲ ಎಂದಿದ್ದಾಳೆ.
ಇದನ್ನೂ ಓದಿ : CBSE Launches DADS Portal: CBSE ವಿದ್ಯಾರ್ಥಿಗಳಿಗೊಂದು ನೆಮ್ಮದಿಯ ಸುದ್ದಿ, DADS Portal ಬಿಡುಗಡೆಗೊಳಿಸಿದ CBSE
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.