ನವದೆಹಲಿ : ಕುಲಭೂಷಣ್ ಜಾಧವ್ ಅವರ ಭೇಟಿ ಸಂದರ್ಭದಲ್ಲಿ ಅವರ ತಾಯಿ ಮತ್ತು ಪತ್ನಿಯನ್ನು ಪಾಕ್ ನಡೆಸಿಕೊಂಡ ರೀತಿಗೆ ಇಂದು ರಾಜ್ಯಸಭೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕಟುವಾಗಿ ಪ್ರತಿಕ್ರಿಯಿಸಿದರು.
ಜಾಧವ್ ಅವರ ಪತ್ನಿಯ ಶೂ ಒಳಗೆ ಚಿಪ್ ಇರಿಸಲಾಗಿದೆ ಎಂದು ಅನುಮಾನಿಸಿದ ಪಾಕ್ ಭದ್ರತಾ ಪಡೆ ಅವರ ಶೂ ಅನ್ನು ಪಡೆದು ಪರಿಶೀಲನೆ ನಡೆಸಿತ್ತು. ಆದರೆ ಈ ಕೃತ್ಯವನ್ನು ಇಂದು ರಾಜ್ಯಸಭೆಯಲ್ಲಿ ವಿರೋಧಿಸಿದ ಸುಷ್ಮಾ, "ಜಾಧವ್ ಅವರನ್ನು ಭೇಟಿ ಮಾಡಲು ಆ ಇಬಾರು ಮಹಿಳೆಯರು ಎರಡು ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣಿಸಿ ಬಂದಿದ್ದರು. ಒಂದು ವೇಳೆ ಅವರ ಅಲಿ ಚಿಪ್ ಇದ್ದಿದ್ದರೆ ಅದು ಅತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ನಡೆಸುವ ಪರಿಶೀಲನೆ ವೇಳೆಯೇ ಪತ್ತೆಯಾಗುತ್ತಿತ್ತು. ಒಂದು ವೇಳೆ ಪಾಕ್ ನಮಗೆ ಏರ್ ಇಂಡಿಯಾ ಮೇಲೆ ನಿಯಂತ್ರಣ ಸಾಧಿಸ್ಸಿರುವುದಾಗಿ ಅನುಮಾನಿಸಿದ್ದರೂ, ಎಮೆರೈಟ್ಸ್ ವಿಮಾನ ಸೇವೆಯ ನಾವು ಯಾವ ಹಿಡಿತ ಸಾಧಿಸಲೂ ಸಾಧ್ಯವಿಲ್ಲ. ಹೀಗಿರುವಾಗ ಅವರಿಬ್ಬರೂ ಸೆಕ್ಯುರಿಟಿ ಪ್ರಿಶಿಳನೆಯಿಂದ ತಪ್ಪಿಸಿಕೊಳ್ಳಲು ಹೀಗೆ ಸಾಧ್ಯ?'' ಎಂದು ಸುಷ್ಮಾ ಸ್ವರಾಜ್ ಕೇಳಿದರು.
"ಪಾಕಿಸ್ತಾನ ಮೂಲಭೂತ ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದೆಯಲ್ಲದೆ ಅದರ ಈ ಪರಿಯ ಕೃತ್ಯವು ಯಾವುದೇ ಕೊನೆಯಿಲ್ಲದ ಅಸಂಬದ್ಧ ಕೃತ್ಯವಾಗಿದೆ' ಎಂದು ಖಂಡಿಸುವ ಮೂಲಕ ಸಂಸತ್ತಿನಲ್ಲಿ ಪಾಕ್ ವಿರುದ್ಧ ಟೀಕೆಗಳ ಸುರಿಮಳೆಯನ್ನೇ ಗೈದರು.
ಈ ಭೇಟಿಗೆ ಸಂಬಂಧಿಸಿದಂತೆ ಮೊದಲೇ ಒಪ್ಪಿಕೊಳ್ಳಲಾಗಿದ್ದ ಶರತ್ತುಗಳನ್ನು ಪಾಕಿಸ್ಥಾನ ಸಾರಾಸಗಟು ಉಲ್ಲಂಘನೆ ಮಾಡಿದೆ ಎಂದು ಖಂಡಿಸಿದ ಸುಶ್ಮಾ ಸ್ವರಾಜ್, "ಕುಲಭೂಷಣ ಜಾಧವ್ ಅವರ ತಾಯಿಗೆ ಮರಾಠಿ ಭಾಷೆಯಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ. ಅಲ್ಲಿದ್ದ ಇಬ್ಬರು ಅಧಿಕಾರಿಗಳು ಅವರನ್ನು ಮಾತನಾಡದಂತೆ ತಡೆಯುತ್ತಿದ್ದಾರು. ಆದರೂ ಅವರ ತಾಯಿ ಮಾತು ಮುಂದುವರಿಸಿದಾಗ ಇಂಟರ್ಕಾಂ ಅನ್ನು ಸ್ಥಗಿತಗೊಳಿಸಲಾಯಿತು'' ಎಂದು ಹೇಳುವ ಮುಉಲ್ಕ ಆ ಇಬ್ಬರು ಮಹಿಳೆಯರು ಪಾಕ್ ಅಧೀನದಲ್ಲಿ ಎದುರಿಸಿದ ಸಂದರ್ಭಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಬೇಹುಗಾರಿಕೆ ಮತ್ತು ವಿಧ್ವಂಸಕ ಕೃತ್ಯಗಳ ಆರೋಪದ ಮೇಲೆ ಬಂಧಿತರಾಗಿ ಪಾಕ್ ಮಿಲಿಟರಿ ಕೋರ್ಟ್ ನಿಂದ ಮರಣದಂಡನೆ ಶಿಕ್ಷೆ ವಿಧಿಸಲ್ಪಟ್ಟಿರುವ 47ರ ಹರೆಯದ ಭಾರತೀಯ ನೌಕಾ ಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಇಸ್ಲಾಮಾಬಾದ್‌ನಲ್ಲಿ ಬಿಗಿ ಭದ್ರತೆಯಲ್ಲಿ ಭೇಟಿಯಾಗುವುದಕ್ಕೆ ಪಾಕ್ ಸರ್ಕಾರ ಅವಕಾಶ ನೀಡಿತ್ತು. ಆದರೆ ಜಾಧವ್ ಮತ್ತು ಅವರ ತಾಯಿ, ಪತ್ನಿಯ ನಡುವೆ ಗಾಜಿನ ಪರದೆಯನ್ನು ಭದ್ರತೆಯ ನೆಪದಲ್ಲಿ ಅಣಿಗೊಳಿಸುವ ಮೂಲಕ ಭಾವನಾತ್ಮಕ ಸಮ್ಮಿಲನಕ್ಕೆ ಅವಕಾಶ ನೀಡದಿರುವ ಅಮಾನುಷತೆಯನ್ನು ತೋರಿತ್ತು.
ತಾನು ಈ ಭೇಟಿಯ ಅವಕಾಶವನ್ನು ಮಾನವೀಯ ನೆಲೆಯಲ್ಲಿ ಒದಗಿಸಿದ್ದೇನೆ ಎಂದು ಕೊಚ್ಚಿಕೊಂಡ ಪಾಕ್, ಭದ್ರತೆಯ ನೆಪವೊಡ್ಡಿ ಜಾಧವ್ ತಾಯಿ ಮತ್ತು ಪತ್ನಿಯ ಉಡುಪು ತೊಡುಪುಗಳನ್ನು ಬದಲಿಸಿ, ಅವರ ಬಳೆ, ಮಂಗಳ ಸೂತ್ರ ಮತ್ತು ಬಿಂದಿ ಮಾತ್ರವಲ್ಲದೆ ಕೊನೆಗೆ ಬೂಟನ್ನು ಕೂಡ ತೆಗೆಸುವ ಮೂಲಕ ಅಮಾನವೀಯತೆಯನ್ನೇ ಪ್ರದರ್ಶಿಸಿತ್ತು.